ಭಾರತದಲ್ಲಿ ಆ್ಯಪ್ ಮತ್ತು ಒಟಿಟಿ ಆಧಾರಿತ ವಯಸ್ಕರ ವಿಡಿಯೊಗಳ ಮಾರುಕಟ್ಟೆಯು ದೊಡ್ಡ ಉದ್ಯಮವಾಗಿ ಬೆಳೆದಿದೆ. ಮಾರುಕಟ್ಟೆ ಸಮೀಕ್ಷೆಗಳ ಪ್ರಕಾರ 2020ರಲ್ಲಿಆ್ಯಪ್ ಆಧಾರಿತ ನೀಲಿ ಚಿತ್ರಗಳ ಮಾರುಕಟ್ಟೆಯ ವಹಿವಾಟು₹ 3,800 ಕೋಟಿ. ಭಾರತದಲ್ಲಿ ಏಳೆಂಟು ವರ್ಷಗಳಿಂದಆ್ಯಪ್ ಆಧಾರಿತ ನೀಲಿ ಚಿತ್ರಗಳ ಮಾರುಕಟ್ಟೆ ಇದೆಯಾದರೂ, ಕೋವಿಡ್ ಲಾಕ್‌ಡೌನ್‌ನ ನಂತರ ಈ ಮಾರುಕಟ್ಟೆ ಬಹಳ ವಿಸ್ತೃತವಾಗಿ ಬೆಳೆದಿದೆ ಎಂದು ಮಾರುಕಟ್ಟೆ ಸಮೀಕ್ಷೆ ವರದಿಗಳು ಹೇಳಿವೆ.

ಈ ಹಿಂದೆ ವಯಸ್ಕರ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ನಿರ್ಮಾಪಕರೇ ಈಗಆ್ಯಪ್ ಆಧಾರಿತ ನೀಲಿ ಚಿತ್ರಗಳ ಉದ್ಯಮವನ್ನು ನಡೆಸುತ್ತಿದ್ದಾರೆ. ಹಿಂದಿಯಲ್ಲಿ ನೀಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದ ಯಶ್ ಠಾಕೂರ್‌ನನ್ನು ಭಾರತದ ನೀಲಿ ಚಿತ್ರಗಳ ರಾಜ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಚಂದಾದಾರರಾಗಿ ನೀಲಿ ಚಿತ್ರವನ್ನು ನೋಡುವ ಮೊದಲಆ್ಯಪ್ ಬಿಡುಗಡೆ ಮಾಡಿದ್ದು ಇದೇ ಯಶ್ ಠಾಕೂರ್ ಎನ್ನಲಾಗಿದೆ. ಯಶ್ ಠಾಕೂರ್ ಒಡೆತನದ ನ್ಯೂಫ್ಲಿಕ್ಸ್‌ಮತ್ತು ಫ್ಲಿಜ್‌ಮೂವಿಸ್ ಎಂಬಆ್ಯಪ್‌ಗಳು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಡೌನ್‌ಲೋಡ್ ಆಗಿವೆ.

ನೀಲಿ ಚಿತ್ರಗಳಆ್ಯಪ್ ಆರಂಭಿಸುವವರಿಗೆಆ್ಯಪ್ ಅಭಿವೃದ್ಧಿಪಡಿಸಿಕೊಡುವ ಉದ್ಯಮವನ್ನೂ ಯಶ್ ಠಾಕೂರ್ ನಡೆಸುತ್ತಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಭಾರತದಲ್ಲಿಆ್ಯಪ್ ಆಧಾರಿತ ವಯಸ್ಕರ ವಿಡಿಯೊ ಉದ್ಯಮವು ಮುಂಬೈ ಕೇಂದ್ರಿತವಾಗಿವೆ. ಇಲ್ಲಿ ನಿರ್ಮಿಸಲಾಗುವ ನೀಲಿ ವಿಡಿಯೊಗಳಲ್ಲಿ 15 ನಟಿಯರು ಮತ್ತು 4 ನಟರು ನಟಿಸುತ್ತಿದ್ದಾರೆ. ಇವುಗಳನ್ನು ನಿರ್ಮಿಸುವ ಚಿತ್ರ ತಂಡದ ಸಂಖ್ಯೆ 6 ದಾಟುವುದಿಲ್ಲ ಎಂದು ಮೂಲಗಳು ಹೇಳಿವೆ.

ಈಆ್ಯಪ್‌ಗಳನ್ನು ಅಳವಡಿಸಿಕೊಳ್ಳುವವರು ಪ್ಯಾಕೇಜ್ ರೂಪದಲ್ಲಿ ನೀಲಿ ಚಿತ್ರಗಳನ್ನು ಖರೀದಿಸಬೇಕಾಗುತ್ತದೆ ಮತ್ತು ಕೆಲವೊಮ್ಮ ತಿಂಗಳ ಚಂದಾದಾರಿಕೆ ಪಡೆಯಬೇಕಾಗುತ್ತದೆ. ಕೆಲವುಆ್ಯಪ್‌ಗಳು ಪ್ರತಿ ನೀಲಿಚಿತ್ರ ಮತ್ತು ನೇರ ಪ್ರಸಾರಕ್ಕೆ ಪ್ರತ್ಯೇಕ ಶುಲ್ಕ ವಿಧಿಸುತ್ತವೆ. ಕೆಲವು ಸಿನಿಮಾಗಳಿಗೆ ಕೇವಲ ₹ 10 ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಕೆಲವುಆ್ಯಪ್‌ಗಳು ₹ 198ಕ್ಕೆ ಒಂದು ವರ್ಷದ ಚಂದಾದಾರಿಕೆ ನೀಡುತ್ತವೆ. ಕಡಿಮೆ ಶುಲ್ಕ ಇರುವ ಕಾರಣಕ್ಕೇ ಈಆ್ಯಪ್‌ಗಳ ಮಾರುಕಟ್ಟೆ ವಿಸ್ತಾರವಾಗಿ ಬೆಳೆದಿದೆ. ನೇರ ಪ್ರಸಾರದ ಸವಲತ್ತು ಹೊಂದಿರುವಆ್ಯಪ್‌ಗಳಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ. ಈಆ್ಯಪ್‌ಗಳಲ್ಲಿ ನಿಮಿಷಗಳ ಲೆಕ್ಕಾಚಾರದಲ್ಲಿ ಶುಲ್ಕ ವಿಧಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಶುಲ್ಕ ಪಾವತಿಯ ಸೌಲಭ್ಯವಿರುವ ನೀಲಿ ಚಿತ್ರಗಳ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಬಹುತೇಕ ತಂತ್ರಜ್ಞರು ಯಶ್ ಠಾಕೂರ್‌ಗಾಗಿಯೇ ಕೆಲಸ ಮಾಡುತ್ತಿದ್ದಾರೆ.ಆ್ಯಪ್ ಆಧಾರಿತ ನೀಲಿ ಚಿತ್ರಗಳ ಉದ್ಯಮದಲ್ಲಿ ಈಚಿನ ವರ್ಷಗಳಲ್ಲಿ ಕೇಳಿಬಂದ ಮತ್ತೊಂದು ದೊಡ್ಡ ಹೆಸರು ಉದ್ಯಮಿ ರಾಜ್ ಕುಂದ್ರಾ ಅವರದ್ದು. ರಾಜ್ ಕುಂದ್ರಾ ಅವರುಆ್ಯಪ್ ಆಧಾರಿತ ನೀಲಿ ಚಿತ್ರಗಳನ್ನು ನಿರ್ಮಿಸಲೆಂದೇ ಕೆಲವು ಕಂಪನಿಗಳನ್ನು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲೇ ಅಭಿವೃದ್ಧಿಪಡಿಸಿ ಕಾರ್ಯನಿರ್ವಹಿಸುತ್ತಿರುವ ನೀಲಿ ಚಿತ್ರಗಳಆ್ಯಪ್‌ಗಳ ಸಂಖ್ಯೆ 1,000 ದಾಟುತ್ತದೆ.ಕೆಲವು ಮುಖ್ಯವಾಹಿನಿ ಒಟಿಟಿ ವೇದಿಕೆಗಳೂ ಬೆತ್ತಲೆ ದೃಶ್ಯಗಳಿರುವ ವಿಡಿಯೊಗಳನ್ನು ಬಿತ್ತರಿಸುತ್ತವೆ. ಆಲ್ಟ್ ಬಾಲಾಜಿ, ಊಲು ಇವುಗಳಲ್ಲಿ ಪ್ರಧಾನವಾದ ಒಟಿಟಿ ವೇದಿಕೆಗಳು.ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ ಮತ್ತಿತರ ನಟಿಯರು ತಮ್ಮದೇ ಪ್ರತ್ಯೇಕ ನೀಲಿಚಿತ್ರಗಳ ಆ್ಯಪ್ ಹೊಂದಿದ್ದಾರೆ.ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಎಂಎಕ್ಸ್ ಪ್ಲೇಯರ್ ಒಟಿಟಿ ವೇದಿಕೆಗಳಲ್ಲಿ ಕೆಲವು ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬೆತ್ತಲೆ ದೃಶ್ಯಗಳನ್ನು ಬಿತ್ತರಿಸಿ ವಿವಾದಕ್ಕೆ ಕಾರಣವಾಗಿದ್ದವು.

ಆ್ಯಪ್ ನಿಷೇಧವಿದ್ದರೂ ಲಭ್ಯ

ನೀಲಿಚಿತ್ರಗಳನ್ನು ಪ್ರಸಾರ ಮಾಡುವ ಬಹುತೇಕಆ್ಯಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿವೆ.ಆ್ಯಪಲ್ ಸ್ಟೋರ್‌ನಲ್ಲಿ ಇಂತಹಆ್ಯಪ್‌ಗಳು ಇಲ್ಲವೇ ಇಲ್ಲ ಎನ್ನಬಹುದು. ಗೂಗಲ್ ಪ್ಲೇಸ್ಟೋರ್‌ನಲ್ಲಿ ಈಆ್ಯಪ್‌ಗಳು ಲಭ್ಯವಿದ್ದರೂ, ನೀಲಿ ಚಿತ್ರಗಳನ್ನು ಪ್ರಸಾರ ಮಾಡಿದ ಕಾರಣಕ್ಕೆ ಅವುಗಳ ವಿರುದ್ಧ ದೂರು ದಾಖಲಿಸಲು ಅವಕಾಶವಿದೆ. ದೂರು ದಾಖಲಾದ ನಂತರ ಅಂತಹಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗೂಗಲ್ ತೆಗೆದುಹಾಕುತ್ತದೆ.

ಯಶ್ ಠಾಕೂರ್ ಅವರ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಿದಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದರೂ, ಅವುಗಳ ಹೆಸರನ್ನು ಬದಲಿಸಿ ಮರಳಿ ಪ್ಲೇಸ್ಟೋರ್‌ಗೆ ಸೇರಿಸಲಾಗುತ್ತದೆ. ಈ ಮೂಲಕ ಅಂತಹ ಅಪ್ಲಿಕೇಷನ್‌ಗಳನ್ನು ಲಭ್ಯವಿವರಂತೆ ನೋಡಿಕೊಳ್ಳಲಾಗುತ್ತದೆ. ಇಂತಹ ಬಹುತೇಕಆ್ಯಪ್‌ಗಳು ನಿಷೇಧಕ್ಕೆ ಒಳಗಾಗುವುದು ಅವುಗಳಲ್ಲಿನ ನೀಲಿ ಚಿತ್ರಗಳ ಕಾರಣಕ್ಕಲ್ಲ. ಬದಲಿಗೆ ಹಣ ಪಡೆದು ಚಂದಾದಾರಿಕೆ ನೀಡಲಿಲ್ಲ, ನೀಲಿಚಿತ್ರಗಳನ್ನು ಒದಗಿಸಲಿಲ್ಲ ಎಂಬ ಶುಲ್ಕ ಪಾವತಿ ಸಂಬಂಧಿ ದೂರುಗಳ ಕಾರಣಕ್ಕೆ ಎಂದು ಮೂಲಗಳು ಹೇಳಿವೆ.

ಈಆ್ಯಪ್‌ಗಳನ್ನು ವಿದೇಶದಲ್ಲಿರುವ ಸರ್ವರ್‌ಗಳ ಮೂಲಕ ನಿರ್ವಹಿಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಜಾರಿಯಲ್ಲಿರುವ ಕಾನೂನುಗಳು ಈಆ್ಯಪ್‌ಗಳಿಗೆ ಮತ್ತು ಸರ್ವರ್ ಪಡೆತನ ಹೊಂದಿರುವ ಕಂಪನಿಗಳಿಗೆ ಅನ್ವಯವಾಗುವುದಿಲ್ಲ. ಯಶ್ ಠಾಕೂರ್ ಅವರ ಕಂಪನಿಯ ಎಲ್ಲಾ ಸರ್ವರ್‌ಗಳೂ ವಿದೇಶದಲ್ಲಿ ಇವೆ. ರಾಜ್ ಕುಂದ್ರಾ ಅವರ ಕಂಪನಿಯ ಸರ್ವರ್ ಬ್ರಿಟನ್‌ನಲ್ಲಿ ಇದೆ ಎಂದು ವರದಿಯಾಗಿದೆ.

ನೀಲಿ ಚಿತ್ರಗಳ ಕಾರಣಕ್ಕೆ ಈಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದರೂ, ಅದೇ ಹೆಸರಿನ ಜಾಲತಾಣಗಳಲ್ಲಿಆ್ಯಪ್ ಎಪಿಕೆ ಕಡತಗಳು ದೊರೆಯುತ್ತವೆ. ಎಪಿಕೆ ಕಡತಗಳನ್ನು ಡೌನ್‌ಲೋಡ್ ಮಾಡಿಕೊಂಡುಆ್ಯಪ್ ಅಳವಡಿಸಿಕೊಳ್ಳಬಹುದು.

ನೀಲಿ ಚಿತ್ರಗಳಲ್ಲಿ ನಟಿಸುವ ನಟರನ್ನು ಈ ಚಿತ್ರಗಳ ಪ್ರಚಾರಕ್ಕೆ ಮತ್ತು ಗ್ರಾಹಕರನ್ನು ಸೆಳೆಯಲು ಬಳಸಲಾಗುತ್ತದೆ. ಈ ನಟ-ನಟಿಯರು ತಮ್ಮ ಟ್ವಿಟರ್, ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಚಿತ್ರಗಳ ಪೋಸ್ಟರ್ ಮತ್ತು ಟೀಸರ್‌ಗಳನ್ನು ಹಾಕುತ್ತಾರೆ. ಜತೆಗೆ ಚಿತ್ರಗಳು ಲಭ್ಯವಿರುವಆ್ಯಪ್‌ಗಳ ಲಿಂಕ್‌ಗಳನ್ನು ಪ್ರಕಟಿಸುತ್ತಾರೆ. ಆ ಮೂಲಕಆ್ಯಪ್ ಅಳವಡಿಸಿಕೊಳ್ಳಲು ಪ್ರೇರೇಪಿಸಲಾಗುತ್ತದೆ. ಆಲ್ಟ್ ಬಾಲಾಜಿ ಮತ್ತು ಊಲೂ ಒಟಿಟಿ ಪ್ಲಾಟ್‌ಫಾರಂಗಳಲ್ಲಿನ ಸಾಫ್ಟ್‌ಪೋರ್ನ್ ಚಿತ್ರಗಳ ಪ್ರಚಾರಕ್ಕೂ ಇದೇ ತಂತ್ರ ಅನುಸರಿಸಲಾಗುತ್ತದೆ.

ಕಾನೂನಿನ ಮೂಗುದಾರ

ಲೈಂಗಿಕ ಸಂಪರ್ಕದ ವಿಡಿಯೊವನ್ನು ವೀಕ್ಷಿಸುವುದನ್ನು ಭಾರತದಲ್ಲಿ ಅಪರಾಧ ಎಂದು ಪರಿಗಣಿಸಲಾಗಿಲ್ಲ. ವಯಸ್ಕ ವ್ಯಕ್ತಿಯು ಖಾಸಗಿಯಾಗಿ ನೀಲಿ ವಿಡಿಯೊ ವೀಕ್ಷಿಸುವುದನ್ನು ತಡೆಯುವುದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ 2015ರ ಜುಲೈನಲ್ಲಿ ಹೇಳಿತ್ತು. ಆದರೆ, ಭಾರತೀಯ ದಂಡ ಸಂಹಿತೆ (ಐಪಿಸಿ), ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಚಿತ್ರಣ (ನಿಷೇಧ) ಕಾಯ್ದೆ ಪ್ರಕಾರ, ಭಾರತದಲ್ಲಿ ವಯಸ್ಕರ ಸಿನಿಮಾಗಳನ್ನು ನಿರ್ಮಿಸುವುದು ಅಪರಾಧ. ಹಾಗೆಯೇ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರಲ್ಲೂ ಇದನ್ನು ಅಪರಾಧ ಎಂದು ವಿವರಿಸಲಾಗಿದೆ. ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ವಿಡಿಯೊಗಳನ್ನು ನಿಷೇಧಿಸಲಾಗಿದೆ.

*ಸೆಕ್ಷನ್ 292: ಲೈಂಗಿಕ ಸಂಪರ್ಕವನ್ನು ತೋರಿಸುವ ಸಿನಿಮಾಗಳಿಗೆ ಸಂಬಂಧಿಸಿದ ಯಾವುದೇ ತುಣಕನ್ನು ಮಾರಾಟ ಮಾಡುವುದು, ಬಾಡಿಗೆಗೆ ನೀಡುವುದು, ವಿತರಿಸುವುದನ್ನು ಈ ವಿಧಿ ತಡೆಯುತ್ತದೆ. ನೀಲಿಚಿತ್ರಗಳ ತಯಾರಿ, ಖರೀದಿ, ದಾಸ್ತಾನು, ಆಮದು, ರಫ್ತು, ಸಾರ್ವಜನಿಕವಾಗಿ ಪ್ರದರ್ಶನ, ಮಾರಾಟ ಮಾಡಿ ಲಾಭ ಗಳಿಸುವಯತ್ನ ಎಲ್ಲವೂ ಶಿಕ್ಷಾರ್ಹ ಅಪರಾಧ

* ಸೆಕ್ಷನ್ 293: ಭಾರತೀಯ ದಂಡ ಸಂಹಿತೆಯ ಈ ಸೆಕ್ಷನ್ ಗ್ರಾಹಕರು ಅಥವಾ ಪ್ರೇಕ್ಷಕರ ವಯಸ್ಸಿನ ಬಗ್ಗೆ ಹೇಳುತ್ತದೆ. 20 ವರ್ಷದೊಳಗಿನ ಯಾವುದೇ ವ್ಯಕ್ತಿಗೆ ವಯಸ್ಕರ ವಿಡಿಯೊಗಳ ಕಂಟೆಂಟ್ ಅನ್ನು ಮಾರಾಟ ಮಾಡುವುದು, ವಿತರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವ ಪ್ರಯತ್ನಗಳು ಶಿಕ್ಷೆಗೆ ಒಳಪಡುತ್ತವೆ

*ಐ.ಟಿ. ಕಾಯ್ದೆ ಸೆಕ್ಷನ್ 67: ಎಲೆಕ್ಟ್ರಾನಿಕ್ ರೂಪದಲ್ಲಿ ನೀಲಿ ಸಿನಿಮಾದ ದೃಶ್ಯಗಳನ್ನು ಪ್ರಕಟಿಸುವುದು ಮತ್ತು ರವಾನಿಸುವುದು ಅಪರಾಧ

*ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ 1986: ಯಾವುದೇ ವ್ಯಕ್ತಿಯು ಮಹಿಳೆಯರನ್ನು ಅಸಭ್ಯವಾಗಿ ಪ್ರತಿನಿಧಿಸುವ ಯಾವುದೇ ಜಾಹೀರಾತನ್ನು ಪ್ರಕಟಿಸಬಾರದು. ಪ್ರಕಟಣೆ ಅಥವಾ ಪ್ರದರ್ಶನದಲ್ಲಿ ಭಾಗವಹಿಸಬಾರದು

* ಮಕ್ಕಳ ಬಳಕೆಯು ಅಪರಾಧ: ಲೈಂಗಿಕತೆಯ ದೃಶ್ಯ ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಮಕ್ಕಳನ್ನು ಇಂತಹ ವಿಡಿಯೊದಲ್ಲಿ ಬಳಸಿರುವ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ. ಮಕ್ಕಳ ಲೈಂಗಿಕತೆಯ ದೃಶ್ಯಗಳನ್ನು ಚಿತ್ರೀಕರಿಸುವುದು, ಪ್ರಸಾರ ಮಾಡುವುದು ಭಾರತದಲ್ಲಿ ಕಾನೂನುಬಾಹಿರ.

* ಪೋಕ್ಸೊ ಕಾಯ್ದೆ 2012ರ ಸೆಕ್ಷನ್ 14: ಮಕ್ಕಳನ್ನು ಲೈಂಗಿಕ ಉದ್ದೇಶಗಳಿಗಾಗಿ ಬಳಸುವುದು ಅಪರಾಧ. ದಂಡದೊಂದಿಗೆ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

*ಪೋಕ್ಸೊ ಕಾಯ್ದೆಯ ಸೆಕ್ಷನ್ 15: ಯಾವುದೇ ರೀತಿಯಲ್ಲಿ ಮಕ್ಕಳ ಲೈಂಗಿಕತೆಯ ಪ್ರಸಾರ, ಪ್ರದರ್ಶನ, ವಿತರಣೆ ಕಾನೂನುಬಾಹಿರ. ಇಂತಹ ಕಂಟೆಂಟ್ ಅನ್ನು ಸಾಕ್ಷ್ಯವಾಗಿ ಸಂಗ್ರಹಿಸುವುದಕ್ಕೆ ವಿನಾಯಿತಿಯಿದೆ. ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ವಿಡಿಯೊ ಸಂಗ್ರಹಿಸುವ, ಹೊಂದಿರುವ ಅಪರಾಧಿಗೆ3-5 ವರ್ಷಗಳ ಜೈಲು ಶಿಕ್ಷೆ ಇದೆ.

ಬಾಲಿವುಡ್‌ಗೆ ಬಿಡದ ನಂಟು

ರಾಜ್ ಕುಂದ್ರಾ: ಬಾಲಿವುಡ್ ನಟ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ನೀಲಿ ಚಿತ್ರ ನಿರ್ಮಾಣ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕುಂದ್ರಾ ಅವರು ‘ಹಾಟ್‌ಶಾಟ್ಸ್’ ಹೆಸರಿನ ಆ್ಯಪ್ ಮೂಲಕ ವಯಸ್ಕರ ಚಿತ್ರಗಳಲ್ಲಿ ನಟಿಸುವ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ಹಲವು ಮಹಿಳೆಯರು ದೂರು ನೀಡಿದ್ದಾರೆ. ಬ್ರಿಟನ್ ಮೂಲದ ಸಂಸ್ಥೆಯ ಒಡೆತನದಲ್ಲಿರುವ ಈ ಸಂಸ್ಥೆಯನ್ನು ಕುಂದ್ರಾ ಅವರ ಅಳಿಯ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಟ್‌ಶಾಟ್ಸ್ ‘ವಿಶ್ವದ ಮೊದಲ 18+ ಆ್ಯಪ್’ ಎಂದು ವಿವರಿಸಲಾಗಿದೆ. ಸೆಲೆಬ್ರಿಟಿಗಳ ಫೋಟೋಗಳು, ಕಿರುಚಿತ್ರಗಳು ಮತ್ತು ಲೈಂಗಿಕವಾಗಿ ಪ್ರಚೋದನಕಾರಿ ವಿಡಿಯೋಗಳು ಇದರಲ್ಲಿವೆ. ಉಚಿತವಾಗಿ ಆ್ಯಪ್ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ಗಳಿಂದ ತೆಗೆದುಹಾಕಲಾಗಿದೆ.

ಶೆರ್ಲಿನ್ ಚೋಪ್ರಾ: ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಅವರು ತಮ್ಮದೇ ಆ್ಯಪ್ ಮೂಲಕ ಲೈಂಗಿಕತೆಯ ವಿಡಿಯೊಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಜೊತೆಗೂ ವ್ಯಾವಹಾರಿಕ ನಂಟು ಇತ್ತು ಎಂದು ಬಹಿರಂಗಪಡಿಸಿದ್ದಾರೆ. ತಮ್ಮನ್ನು ನೀಲಿ ಸಿನಿಮಾ ಉದ್ಯಮಕ್ಕೆ ತಳ್ಳಿದವರು ಕುಂದ್ರಾ ಎಂದು ಶೆರ್ಲಿನ್ ಹೇಳಿಕೆ ನೀಡಿದ್ದಾರೆ. ಪ್ರತಿ ಪ್ರಾಜೆಕ್ಟ್‌ಗೆ ಶೆರ್ಲಿನ್ ₹30 ಲಕ್ಷ ಪಡೆಯುತ್ತಿದ್ದರು ಎನ್ನಲಾಗಿದ್ದು, ಅವರು ಇದುವರೆಗೆ ರಾಜ್ ಕುಂದ್ರಾ ಅವರಿಗಾಗಿ 15ರಿಂದ 20 ಪ್ರಾಜೆಕ್ಟ್‌ಗಳನ್ನು ನಿರ್ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಪೂನಂ ಪಾಂಡೆ: ಬಾಲಿವುಡ್ ನಟಿ ಪೂನಂ ಅವರು ತಮ್ಮದೇ ಆದ ವಯಸ್ಕರ ಆ್ಯಪ್ ಹೊಂದಿದ್ದಾರೆ. ಪೂನಂ ಪಾಂಡೆ ಅವರನ್ನೂ ವಯಸ್ಕ ಚಿತ್ರಗಳ ಉದ್ಯಮಕ್ಕೆ ನೂಕಿದ್ದು ರಾಜ್‌ಕುಂದ್ರಾ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಕುಂದ್ರಾ ಅವರ ಆರ್ಮ್ಸ್‌ಪ್ರೈಮ್ ಮೀಡಿಯಾ ಜತೆ ಪಾಂಡೆ ಒಪ್ಪಂದ ಮಾಡಿಕೊಂಡಿದ್ದರು. ಸಂಸ್ಥೆಯು ಹಲವಾರು ರೀತಿಯ ಆ್ಯಪ್‌ಗಳನ್ನು ನಿರ್ವಹಿಸುತ್ತಿದ್ದು, ಪೂನಂ ಪಾಂಡೆ ಅವರು ಕುಂದ್ರಾ ಸಂಸ್ಥೆಯ ಗ್ರಾಹಕರಲ್ಲಿ ಒಬ್ಬರಾಗಿದ್ದರು. ಸಂಸ್ಥೆಯು ಪಾಂಡೆ ಅವರ ಆ್ಯಪ್‌ನ ಕೆಲಸವನ್ನು ನೋಡಿಕೊಳ್ಳುತ್ತಿದೆ. ಕುಂದ್ರಾ ಸಂಸ್ಥೆ ಜೊತೆ ಅವರ ಒಪ್ಪಂದ ಮುಕ್ತಾಯವಾಗಿದ್ದರೂ ಪಾಂಡೆ ಅವರ ವಯಸ್ಕರ ಚಿತ್ರಗಳನ್ನು ಸಂಸ್ಥೆ ಬಳಸಿಕೊಳ್ಳುತ್ತಿತ್ತು. ಇದನ್ನು ಪ್ರಶ್ನಿಸಿ ಪಾಂಡೆ ಅವರು 2020ರಲ್ಲಿ ಕುಂದ್ರಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ನವಾಜುದ್ದೀನ್ ಸಿದ್ದಿಕಿ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರೂ ಲೈಂಗಿಕವಾಗಿ ಪ್ರಚೋದನಕಾರಿ ಚಿತ್ರಗಳಿಂದ ವಿವಾದಕ್ಕೆ ಒಳಗಾಗಿದ್ದರು. ‘ಬಾಬುಮೋಶಾಯಿ ಬಂದೂಕ್‌ಬಾಜ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಒಟ್ಟು 48 ಕಟ್‌ಗಳನ್ನು ಸೂಚಿಸಿತ್ತು. ಅಲ್ಲದೇ ಇದು ವಯಸ್ಕರ ಚಿತ್ರ ಎಂದು ಪ್ರಮಾಣಪತ್ರ ನೀಡಿತ್ತು. ಅದೇ ರೀತಿ ‘ಮಿಸ್ ಲವ್ಲಿ’ ಸಿನಿಮಾ ಕೂಡ ‘ಎ’ ಪ್ರಮಾಣಪತ್ರದೊಂದಿಗೆ ಬಿಡುಗಡೆಯಾಗಿತ್ತು. ತಾವು ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಚೋದನಕಾರಿ ಚಿತ್ರವೊಂದರಲ್ಲಿ ಪಾತ್ರ ಮಾಡಿದ್ದನ್ನು ಸಂದರ್ಶನವೊಂದ ರಲ್ಲಿ ಅವರೇ ಹೇಳಿಕೊಂಡಿದ್ದರು ಎಂದು ಬಾಲಿವುಡ್‌ಲೈಫ್ ಡಾಟ್‌ಕಾಮ್ ವರದಿ ಮಾಡಿತ್ತು. ಅದೃಷ್ಟವಶಾತ್ ಆ ಚಿತ್ರ ತೆರೆ ಕಾಣಲಿಲ್ಲ ಎಂದು ಅವರು ಹೇಳಿಕೊಂಡಿದ್ದರು.

ಆಧಾರ: ಗೂಗಲ್ ಪ್ಲೇಸ್ಟೋರ್, ವಿವಿಧ ಮೂಲಗಳಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.