ವಿಶ್ವದಲ್ಲಿ ಅತಿಹೆಚ್ಚು ಮೊಬೈಲ್ ಇಂಟರ್ನೆಟ್ ಡೇಟಾ ಬಳಸುವ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸಾಲಿನಲ್ಲಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ, ಹೆಚ್ಚು ಡೇಟಾ ಲಭ್ಯವಿದೆ. ಆದರೆ, ವೇಗದ ಮೊಬೈಲ್ ಇಂಟರ್ನೆಟ್ ಡೇಟಾ ಸೇವೆ ಲಭ್ಯವಿರುವ ದೇಶಗಳ ಸಾಲಿನಲ್ಲಿ ಭಾರತವು 131ನೇ ಸ್ಥಾನದಲ್ಲಿದೆ. ಅತ್ಯಂತ ಕಡಿಮೆ ವೇಗದ ಇಂಟರ್ನೆಟ್ ಡೇಟಾ ಲಭ್ಯವಿರುವ ದೇಶಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಡೇಟಾ ಸಂಪರ್ಕದ ವೇಗವು ಕಡಿಮೆ ಇರಲು ಹಲವು ಕಾರಣಗಳನ್ನು ಗುರುತಿಸಲಾಗಿದೆ. ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ, ಅಗತ್ಯ ಮೂಲಸೌಕರ್ಯಗಳ ಕೊರತೆ, ಹಣಕಾಸಿನ ಕೊರತೆ ಮತ್ತು ತರಂಗಾಂತರ ಅಭಾವ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ. ಈ ಎಲ್ಲಾ ಕಾರಣಗಳೂ ಪರಸ್ಪರ ತಳಕು ಹಾಕಿಕೊಂಡಿವೆ.

ಭಾರತದಲ್ಲಿ 90 ಕೋಟಿಗೂ ಹೆಚ್ಚು ಸಿಮ್‌ಕಾರ್ಡ್‌ಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ 50.23 ಕೋಟಿ ಸಿಮ್‌ಕಾರ್ಡ್‌ಗಳನ್ನು 4ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲಾಗುತ್ತಿದೆ. 4ಜಿ ಸ್ಮಾರ್ಟ್‌ಫೋನ್‌ಗಳ ಬಳಕೆದಾರರ ಸಂಖ್ಯೆಯು ಈಚಿನ ವರ್ಷಗಳಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಳಕೆದಾರರ ಸಂಖ್ಯೆ ಏರಿಕೆಯಾದಂತೆ ಮೊಬೈಲ್ ಇಂಟರ್ನೆಟ್ ಡೇಟಾ ಬಳಕೆಯೂ ಏರಿಕೆಯಾಗಿದೆ. ಡೇಟಾ ಸಂಪರ್ಕ ಸೇವೆಯ ಬೇಡಿಕೆ ಹೆಚ್ಚಿದೆ.

ಹಠಾತ್ ಕಾಣಿಸಿಕೊಂಡ ಈ ಏರಿಕೆಯನ್ನು ನಿಭಾಯಿಸಲು ಅಗತ್ಯವಿರುವಷ್ಟು ಮೂಲಸೌಕರ್ಯ ದೇಶದಲ್ಲಿ ಲಭ್ಯವಿಲ್ಲ. ಹೀಗಾಗಿ ಈಗ ಸ್ಥಾಪಿತ ಮೂಲಸೌಕರ್ಯದ ಮೇಲೆ ಒತ್ತಡ ಹೆಚ್ಚಾಗಿದೆ. ಮೊಬೈಲ್ ಇಂಟರ್ನೆಟ್ ಡೇಟಾ ಟ್ರಾಫಿಕ್ ವಿಪರೀತ ಮಟ್ಟದಲ್ಲಿದೆ. ಇದನ್ನು ರಸ್ತೆಯಲ್ಲಿನ ಸಂಚಾರ ದಟ್ಟಣೆಗೆ ಹೋಲಿಸಬಹುದು. ರಸ್ತೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ವಾಹನಗಳು ಬಂದರೆ ಸಂಚಾರ ದಟ್ಟಣೆ ಉಂಟಾಗುವಂತೆ, ದೇಶದಲ್ಲಿನ ಮೊಬೈಲ್ ಸಂಪರ್ಕ ಮೂಲಸೌಕರ್ಯಕ್ಕಿಂತ ಹೆಚ್ಚಿನ ಮೊಬೈಲ್ ಫೋನ್‌ಗಳು ಬಳಕೆಯಲ್ಲಿವೆ. ಹೀಗಾಗಿ ಮೊಬೈಲ್ ಇಂಟರ್ನೆಟ್ ಸೇವೆಯ ವೇಗವು ಕಡಿಮೆ ಇದೆ.

ಟವರ್‌ಗಳ ಕೊರತೆ

4ಜಿ ತಂತ್ರಜ್ಞಾನದಲ್ಲಿ ಸಾಧ್ಯವಿರುವಷ್ಟು ಗರಿಷ್ಠ ಪ್ರಮಾಣದ ವೇಗದ ಇಂಟರ್ನೆಟ್ ಸೌಲಭ್ಯವನ್ನು ನೀಡಲು ಭಾರತದಲ್ಲಿ ಸಾಧ್ಯವಾಗುತ್ತಿಲ್ಲ. ವೇಗದ ಇಂಟರ್ನೆಟ್ ಸೇವೆ ಒದಗಿಸಲು ಅಗತ್ಯವಿರುವಷ್ಟು ನೆಟ್‌ವರ್ಕ್ ಟವರ್‌ಗಳು ಮತ್ತು ಬೇಸ್ ಟ್ರಾನ್ಸ್‌ಫರ್ ಸ್ಟೇಷನ್‌ಗಳು (ಬಿಟಿಎಸ್) ದೇಶದಲ್ಲಿ ಇಲ್ಲ. ದೇಶದಲ್ಲಿ ಈಗ 5.93 ಲಕ್ಷ ನೆಟ್‌ವರ್ಕ್ ಟವರ್‌ಗಳಷ್ಟೇ ಇವೆ. 50 ಕೋಟಿ 4ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇವನ್ನು ಹಂಚಿಕೆ ಮಾಡಿದರೆ, ಪ್ರತಿ 883 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ನೆಟ್‌ವರ್ಕ್ ಟವರ್ ಸಿಗಲಿದೆ. ಇದನ್ನು ಅವರು 2ಜಿ ಮತ್ತು 3ಜಿ ಫೋನ್ ಬಳಕೆದಾರರ ಜತೆಗೂ ಹಂಚಿಕೆ ಮಾಡಿಕೊಳ್ಳಬೇಕಿದೆ. 4ಜಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ತುರ್ತಾಗಿ ಇನ್ನೂ 1 ಲಕ್ಷ ನೆಟ್‌ವರ್ಕ್ ಟವರ್‌ಗಳ ಅವಶ್ಯಕತೆ ಇದೆ ಎಂದು ಟ್ರಾಯ್ ಈ ವರ್ಷದ ಆರಂಭದಲ್ಲಿ ಹೇಳಿತ್ತು.

ದೇಶದಲ್ಲಿ ಈಗ ಇರುವ 5.93 ಲಕ್ಷ ನೆಟ್‌ವರ್ಕ್ ಟವರ್‌ಗಳಲ್ಲಿ ಶೇ 30ರಷ್ಟು ಟವರ್‌ಗಳು ಮಾತ್ರ, ಫೈಬರ್ ಕೇಬಲ್ ಸಂಪರ್ಕ ಪಡೆದಿವೆ. ಫೈಬರ್ ಕೇಬಲ್ ಸಂಪರ್ಕ ಹೊಂದಿರುವ ಟವರ್‌ಗಳು ಮಾತ್ರವೇ ಗರಿಷ್ಠ ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತವೆ. ಉಳಿದ ಶೇ 70ರಷ್ಟು ಟವರ್‌ಗಳು ಮೈಕ್ರೊವೇವ್ ಬ್ಯಾಕ್‌ಬೋನ್ ತರಂಗಾಂತರಗಳ ಮೂಲಕ ಸಂಪರ್ಕ ಪಡೆಯುತ್ತವೆ. ಈ ತರಂಗಾಂತರಗಳ ಸಾಮರ್ಥ್ಯ ಅತ್ಯಂತ ಕಡಿಮೆ. ಹೀಗಾಗಿ ಈ ನೆಟ್‌ವರ್ಕ್ ಟವರ್‌ಗಳು ಒದಗಿಸುವ ಇಂರ್ಟನೆಟ್ ಸೇವೆಯ ವೇಗವೂ ಕಡಿಮೆ ಇರುತ್ತದೆ. ದೇಶದಲ್ಲಿ ಇಂತಹ ಟವರ್‌ಗಳ ಸಂಖ್ಯೆಯೇ ಅತ್ಯಧಿಕ ಪ್ರಮಾಣದಲ್ಲಿ ಇರುವ ಕಾರಣ, ದೇಶದ ಸರಾಸರಿ ಇಂಟರ್ನೆಟ್ ವೇಗವು ಕಡಿಮೆ ಇದೆ.

ಈ ನೆಟ್‌ವರ್ಕ್ ಟವರ್‌ಗಳನ್ನು ಫೈಬರ್ ಕೇಬಲ್ ಸಂಪರ್ಕಕ್ಕೆ ಒಳಪಡಿಸಿದರೆ, ದೇಶದಾದ್ಯಂತ ಮೊಬೈಲ್ ಇಂಟರ್ನೆಟ್ ವೇಗವು ಗರಿಷ್ಠಮಟ್ಟಕ್ಕೆ ಏರಿಕೆಯಾಗಲಿದೆ. ಆದರೆ, ಇದಕ್ಕೆ ಸಾಕಷ್ಟು ಬಂಡವಾಳದ ಅವಶ್ಯಕತೆ ಇದೆ. ದೇಶದ ಮೊಬೈಲ್ ಮತ್ತು ಇಂಟರ್ನೆಟ್ ಸೇವಾ ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಈ ಮೂಲಸೌಕರ್ಯ ಅಭಿವೃದ್ಧಿಗೆ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿವೆ. ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಇಂಟರ್ನೆಟ್ ಡೇಟಾ ಒದಗಿಸುತ್ತಿರುವ ಕಾರಣ, ಹೂಡಿಕೆಗೆ ಅಗತ್ಯವಿರುವಷ್ಟು ಹಣವನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಇಂಟರ್ನೆಟ್ ಸೇವಾ ಕಂಪನಿಗಳು ಟ್ರಾಯ್‌ಗೆ ಮನವರಿಕೆ ಮಾಡಿಕೊಟ್ಟಿದ್ದವು. ನೆಟ್‌ವರ್ಕ್ ಟವರ್ ಸ್ಥಾಪನೆ ಮತ್ತು ಪರವಾನಿಗೆ ನೀಡಿಕೆಗೆ ಸಂಬಂಧಿಸಿದಂತೆ ಟ್ರಾಯ್ ನಡೆಸಿದ್ದ ಅಧ್ಯಯನ ವರದಿಯಲ್ಲಿ ಈ ಮಾಹಿತಿಗಳು ಇವೆ.

ಅಗ್ಗದ ದರ

ಭಾರತದಲ್ಲಿ ಅಗ್ಗದ ದರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಒದಗಿಸುತ್ತಿರುವುದುಸಹ, ಇಂಟರ್ನೆಟ್ ವೇಗವು ಕಡಿಮೆ ಇರಲು ಪ್ರಮುಖ ಕಾರಣ ಎನ್ನಲಾಗಿದೆ. ಕಡಿಮೆ ದರದಲ್ಲಿ ಈ ಸೇವೆ ಲಭ್ಯವಿರುವ ಕಾರಣದಿಂದಲೇ, ಸಾಕಷ್ಟು ಮಂದಿ ಮೊಬೈಲ್ ಇಂಟರ್ನೆಟ್ ಅನ್ನು ಬಳಸುತ್ತಿದ್ದಾರೆ. ಆದರೆ, ಇಂಟರ್ನೆಟ್ ಸೇವೆ ಒದಗಿಸಲು ಆಗುತ್ತಿರುವ ವೆಚ್ಚಕ್ಕಿಂತಲೂ ಕಡಿಮೆ ದರವನ್ನು ಬಳಕೆದಾರ
ರಿಗೆ ವಿಧಿಸಲಾಗುತ್ತಿದೆ. ಇದು ಕಂಪನಿಗಳ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿದೆ. ಈ ಕಾರಣದಿಂದಲೇ ಅಗತ್ಯವಿರುವಷ್ಟು ನೆಟ್‌ವರ್ಕ್ ಟವರ್‌ಗಳನ್ನು ಸ್ಥಾಪಿಸಲು ಮತ್ತು ನೆಟ್‌ವರ್ಕ್ ಟವರ್‌ಗಳನ್ನು ಫೈಬರ್ ಕೇಬಲ್ ಸಂಪರ್ಕಕ್ಕೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ರಾಯ್ ತನ್ನ ಅಧ್ಯಯನ ವರದಿಯಲ್ಲಿ ವಿಶ್ಲೇಷಿಸಿದೆ.

ತರಂಗಾಂತರ ದುಬಾರಿ

ವೇಗದ ಮೊಬೈಲ್ ಇಂಟರ್ನೆಟ್ ಸೇವೆ ಒದಗಿಸಲು ಅಗತ್ಯವಿರುವಷ್ಟು ತರಂಗಾಂತರಗಳು ಲಭ್ಯವಿಲ್ಲ. ಮೊಬೈಲ್ ಸೇವಾ ಕಂಪನಿಗಳಿಗೆ ತರಂಗಾಂತರಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಉಳಿಸಿಕೊಂಡಿದೆ. ಈ ತರಂಗಾಂತರಗಳಿಗೆ ಸರ್ಕಾರವು ಅತ್ಯಧಿಕ ದರ ವಿಧಿಸುತ್ತಿರುವ ಕಾರಣ, ಅವುಗಳನ್ನು ಕೊಳ್ಳಲು ಕಂಪನಿಗಳು ಮುಂದಾಗುತ್ತಿಲ್ಲ. 2016ರಲ್ಲಿ ತರಂಗಾಂತರಗಳನ್ನು ಹರಾಜು ಮಾಡಿದಾಗ, ಶೇ 61ರಷ್ಟು ತರಂಗಾಂತರಗಳು ಬಿಕರಿಯಾಗಲೇ ಇಲ್ಲ. 2017ರಲ್ಲಿ ತರಂಗಾಂತರಗಳನ್ನು ಮತ್ತೆ ಹರಾಜು ಹಾಕಲು ಸಿದ್ಧತೆ ನಡೆಸಲಾಗಿತ್ತು. ಆದರೆ ತರಂಗಾಂತರಗಳಿಗೆ ವಿಧಿಸಿದ ದರ ಅತ್ಯಧಿಕವಾಗಿದೆ, ಪರಿಷ್ಕೃತ ದರವನ್ನು ಸಿದ್ಧಪಡಿಸಿ ಎಂದು ದೂರಸಂಪರ್ಕ ಸಚಿವಾಲಯವು ಟ್ರಾಯ್‌ಗೆ ಸೂಚನೆ ನೀಡಿತ್ತು.

ತರಂಗಾಂತರಗಳಿಗೆ ಸರ್ಕಾರ ವಿಧಿಸುತ್ತಿರುವ ದರದಲ್ಲಿ ಇಳಿಕೆಯಾದರೆ, ಇಂಟರ್ನೆಟ್ ಸೇವೆ ಒದಗಿಸಲು ಅಗತ್ಯವಿರುವ ವೆಚ್ಚವೂ ಇಳಿಕೆಯಾಗಲಿದೆ. ಆಗ ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಕಂಪನಿಗಳಿಗೆ ಸಾಧ್ಯವಾಗಲಿದೆ. ಅಂತಿಮವಾಗಿ ಗ್ರಾಹಕರಿಗೆ ಅಗ್ಗದ ದರದಲ್ಲಿ ವೇಗದ ಇಂಟರ್ನೆಟ್ ಸೇವೆ ದೊರೆಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಆಧಾರ: ಟ್ರಾಯ್, ಮೊಬೈಲ್ ನೆಟ್‌ವರ್ಕ್ ಮೂಲಸೌಕರ್ಯ ಸೇವಾದಾತರ ನೋಂದಣಿ ಪ್ರಕ್ರಿಯೆಯಲ್ಲಿ ಸುಧಾರಣೆ: ಟ್ರಾಯ್ ಶಿಫಾರಸುಗಳು-2019, ತರಂಗಾಂತರ ಹಂಚಿಕೆ ಸಂಬಂಧ ಟ್ರಾಯ್ ಶಿಫಾರಸುಗಳು: 2018, ಪಿಟಿಐ, ಓಕ್ಲಾ, ಓಕ್ಲಾ ಗ್ಲೋಬಲ್ ಇಂಟರ್ನೆಟ್ ಸ್ಪೀಡ್ ಸೂಚ್ಯಂಕ-2020 ಸೆಪ್ಟೆಂಬರ್ ವರದಿ: ಜಯಸಿಂಹ ಆರ್., ಅಮೃತ ಕಿರಣ್ ಬಿ.ಎಂ. ಪ್ರಜಾವಾಣಿ ಗ್ರಾಫಿಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.