ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಮಾಲೀಕತ್ವದ ಕುರಿತಾಗಿ ಈ ವಿವಾದ ಉಂಟಾಗಿದೆ. ಚಾಮುಂಡೇಶ್ವರಿ ದೇವಾಲಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ರಾಜವಂಶಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಹೈಕೋರ್ಟ್ ಮೊರೆ ಹೋಗಿ ಪ್ರಾಧಿಕಾರಕ್ಕೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಬೆಳವಣಿಗೆಯು ಮೈಸೂರಿನ ರಾಜವಂಶಸ್ಥರು ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ..
ತಾಯಿಗೆ ಮಗನ ಬೆಂಬಲ
ಯಾವ್ಯಾವ ಅಭಿವೃದ್ಧಿಗೆ ಯೋಜನೆ?
ಮಾರಾಟದ ಹಕ್ಕೂ ಸರ್ಕಾರದ್ದೇ
ಪ್ರಮೋದಾದೇವಿ ಒಡೆಯರ್ ವಾದವೇನು?
ರಾಜಮನೆತನಕ್ಕೂ ಅವಕಾಶ
ರಾಜವಂಶಸ್ಥರ ವಿರೋಧವೇಕೆ?
ಶ್ರೀಮಂತ ದೇಗುಲಗಳಲ್ಲೊಂದು
ಪ್ರಾಧಿಕಾರ ರಚಿಸಿದ್ದೇವೆ. ಅದರ ವಿರುದ್ಧ ಪ್ರಮೋದಾದೇವಿ ಒಡೆಯರ್ ತಡೆಯಾಜ್ಞೆ ತಂದಿದ್ದಾರೆ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಸಿದ್ದರಾಮಯ್ಯ,ಮುಖ್ಯಮಂತ್ರಿ
ನಾವು ರಾಜಮನೆತನದ ವಿರೋಧಿಗಳಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಆದರ್ಶಗಳನ್ನು ಪಾಲಿಸುತ್ತಿದ್ದೇವೆ. ಚಾಮುಂಡಿಬೆಟ್ಟ ಜನರ ಸ್ವತ್ತಾಗಿರಲಿ, ಅವರ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿಯಾಗಬೇಕೆಂಬುದು ಸರ್ಕಾರದ ನಿಲುವು. ಪ್ರಾಧಿಕಾರದ ರಚನೆಗೆ ಜನರ ಒತ್ತಾಯವೂ ಇತ್ತು.
ಡಾ.ಎಚ್.ಸಿ. ಮಹದೇಪವ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ
ಚಾಮುಂಡಿ ಬೆಟ್ಟದ ಮಾಲೀಕತ್ವ ಯಾರದ್ದೇ ಆಗಿರಲಿ. ಅಭಿವೃದ್ಧಿ ಕೆಲಸಗಳನ್ನು ಮಾಡದೆ, ಪ್ರಕೃತಿದತ್ತವಾಗಿಯೇ ಉಳಿಸಿಕೊಳ್ಳಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸರಿಯಲ್ಲ.
ಎಸ್.ಜಿ.ಒಂಬತ್ಕೆರೆ, ನಿವೃತ್ತ ಮೇಜರ್ ಜನರಲ್, ಮೈಸೂರು
ಬೆಟ್ಟ ಖಾಸಗಿ ಆಸ್ತಿ ಎನ್ನುತ್ತಿರುವವರ ವಿರುದ್ಧ ಸರ್ಕಾರ ಸಮರ್ಥವಾಗಿ ವಾದ ಮಂಡಿಸಬೇಕು. ಒಪ್ಪಂದ ಏನೇ ಆಗಿರಬಹುದು; ನೈತಿಕತೆ ಇದ್ದಿದ್ದರೆ ಬೆಟ್ಟ, ದೇವಸ್ಥಾನ, ದೇವಿಕೆರೆ ನಮ್ಮದು ಎಂದು ಹೇಳುತ್ತಿರಲಿಲ್ಲ.