ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Fact check: ಯೂಸುಫ್ ಪಠಾಣ್ ‘ಜೈ ಗುಜರಾತ್’ ಎಂದಿದ್ದು ಸುಳ್ಳು

Published 4 ಜುಲೈ 2024, 22:30 IST
Last Updated 4 ಜುಲೈ 2024, 22:30 IST
ಅಕ್ಷರ ಗಾತ್ರ

ಟಿಎಂಸಿ ಮುಖಂಡ ಹಾಗೂ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ಅವರ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸುವ ಮೂಲಕ ಪಠಾಣ್ ಸಂಸದರಾಗಿ ಆಯ್ಕೆ ಆಗಿದ್ದರು. ಸಂಸದರಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಅವರು ‘ಜೈ ಗುಜರಾತ್’ ಎಂದಿರುವುದು ವಿಡಿಯೊದಲ್ಲಿ ಮೇಲ್ನೋಟಕ್ಕೆ ಕಾಣುತ್ತದೆ. ‘ಪಶ್ಚಿಮ ಬಂಗಾಳದಿಂದ ಸಂಸದರಾಗಿ ಆಯ್ಕೆಯಾಗಿರುವ ಪಠಾಣ್ ಅವರು ಜೈ ಗುಜರಾತ್ ಎಂದಿದ್ದಾರೆ’ ಎಂದು ಅದನ್ನು ವಿರೋಧಿ ಗುಂಪುಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿವೆ. ಆದರೆ, ಅವರ ಪ್ರತಿಪಾದನೆ ಸುಳ್ಳು.

ವಿಡಿಯೊ ಅನ್ನು ಇನ್‌ವಿಡ್ ಟೂಲ್ ಸರ್ಚ್‌ಗೆ ಒಳಪಡಿಸಿ, ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ ಒಂದೇ ವಿಡಿಯೊ ಅನ್ನು ಹಲವರು ಹಂಚಿಕೊಡಿದ್ದರುವುದು ಕಂಡುಬಂತು. ವಾಸ್ತವ ಏನೆಂದರೆ, ಸಂಸತ್ತಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಠಾಣ್ ಅವರು, ‘ಜೈ ಹಿಂದ್, ಜೈ ಬಾಂಗ್ಲಾ, ಜೈ ಗುಜರಾತ್’ ಎಂದಿದ್ದರು. ಅವರ ಮಾತಿನ ಭಾಗವನ್ನು ಎಡಿಟ್ ಮಾಡಿ, ‘ಜೈ ಗುಜರಾತ್’ ಎಂದಿರುವುದನ್ನು ಮಾತ್ರ ಉಳಿಸಿಕೊಂಡು, ಅದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ‌ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT