ದೇಶದಲ್ಲಿ 2020ರಲ್ಲಿ ನೋಂದಣಿಯಾದ ಮರಣ ಸಂಖ್ಯೆಗೆ ಸಂಬಂಧಿಸಿದ ವರದಿಯನ್ನು ‘ನಾಗರಿಕ ನೋಂದಣಿ ವ್ಯವಸ್ಥೆ’ (ಸಿಆರ್ಎಸ್) ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ 2020ರಲ್ಲಿ 81.11 ಲಕ್ಷ ಮರಣ ನೋಂದಣಿಯಾಗಿವೆ.ಸರ್ಕಾರವು ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಹಲವು ಮಹತ್ವದ ಅಂಶಗಳನ್ನು ಕೈಬಿಡಲಾಗಿದೆ. ದೇಶದಲ್ಲಿ ಪ್ರತಿ ವರ್ಷ ಸಂಭವಿಸಿದ ಸಾವಿನಲ್ಲಿ ನೋಂದಣಿಯಾದ ಸಾವಿನ ಶೇಕಡಾವಾರು ಪ್ರಮಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾಗರಿಕ ನೋಂದಣಿ ವ್ಯವಸ್ಥೆಯ ವಾರ್ಷಿಕ ವರದಿಗಳಲ್ಲಿ ಈವರೆಗೆ ನೀಡಲಾಗುತ್ತಿತ್ತು. 1989ರಿಂದ 2019ರವರೆಗಿನ ಎಲ್ಲಾ ವಾರ್ಷಿಕ ವರದಿಗಳಲ್ಲಿ ಈ ಮಾಹಿತಿ ನೀಡಲಾಗಿದೆ. ಆದರೆ 2020ರಲ್ಲಿ ಈ ಮಾಹಿತಿಯನ್ನು ಕೈಬಿಡಲಾಗಿದೆ.

ಈ ವರದಿಗಳಲ್ಲಿ ನೋಂದಣಿಯಾದ ಮರಣ ಸಂಖ್ಯೆಯ ಮಾಹಿತಿ ನೀಡಲಾಗುತ್ತದೆ. ಜತೆಗೆ ಮರಣ ನೋಂದಣಿಯ ಶೇಕಡಾವಾರು ಪ್ರಮಾಣವನ್ನು ನೀಡಲಾಗುತ್ತದೆ. ಈ ಎರಡೂ ದತ್ತಾಂಶಗಳನ್ನು ಆಧರಿಸಿ ದೇಶದಲ್ಲಿ ಆ ವರ್ಷದಲ್ಲಿ ಸಂಭವಿಸಿದ ಒಟ್ಟು ಸಾವನ್ನು ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ, 2019ರಲ್ಲಿ ದೇಶದಾದ್ಯಂತ 76.41 ಲಕ್ಷ ಮರಣ ನೋಂದಣಿಯಾಗಿವೆ. 2019ರಲ್ಲಿ ನೋಂದಣಿಯಾದ ಮರಣ ಪ್ರಮಾಣ ಶೇ 92ರಷ್ಟು ಎಂದು ವರದಿಯ ದತ್ತಾಂಶ ಹೇಳುತ್ತದೆ. ಈ ಪ್ರಕಾರ 2019ರಲ್ಲಿ ಶೇ 8ರಷ್ಟು ಮರಣ ನೋಂದಣಿಯಾಗಿಲ್ಲ. ನೋಂದಣಿಯಾದ 76.41 ಲಕ್ಷ ಮರಣಕ್ಕೆ, ಈ ಶೇ 8ರಷ್ಟು ಪ್ರಕರಣಗಳನ್ನು ಸೇರಿಸಿದರೆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 83 ಲಕ್ಷವಾಗುತ್ತದೆ.

2020ರ ವರದಿಯಲ್ಲಿ ನೋಂದಣಿಯಾದ ಮರಣ ಸಂಖ್ಯೆಯನ್ನು ಮಾತ್ರ ನೀಡಲಾಗಿದೆ. ಆ ವರ್ಷದಲ್ಲಿ ನೋಂದಣಿಯಾದ ಮರಣದ ಶೇಕಡಾವಾರು ಪ್ರಮಾಣವನ್ನು ನೀಡಿಲ್ಲ. ಇದರಿಂದ ಆ ವರ್ಷದಲ್ಲಿ ಎಷ್ಟು ಸಾವು ಸಂಭವಿಸಿವೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಹೀಗಾಗಿ 2020ರಲ್ಲಿ ದೇಶದಲ್ಲಿ ಸಂಭವಿಸಿದ ಸಾವಿನ ಬಗ್ಗೆ ಪೂರ್ಣ ಚಿತ್ರಣ ಈ ವರದಿಯಲ್ಲಿ ಇಲ್ಲ.

ಮರಣ ಸಂಖ್ಯೆಯಲ್ಲಿ ಏರುಗತಿ

ದೇಶದಲ್ಲಿ ಪ್ರತೀವರ್ಷ ಸಾವನ್ನಪ್ಪುವವರ ನೋಂದಣಿ ಸಂಖ್ಯೆ ಒಂದು ದಶಕದಲ್ಲಿ ಸುಮಾರು 25 ಲಕ್ಷದಷ್ಟು ಏರಿಕೆಯಾಗಿದೆ. 2010ರಲ್ಲಿ 56 ಲಕ್ಷ ಜನರು ವಿವಿಧ ಕಾರಣಗಳಿಂದ ಮೃತಪಟ್ಟಿದ್ದರು. ಇಲ್ಲಿಂದ 10 ವರ್ಷ ಕಳೆಯುವಷ್ಟರಲ್ಲಿ ಅಂದರೆ, 2020ರಲ್ಲಿ ಮೃತರಾದವರ ನೋಂದಣಿಯು 81 ಲಕ್ಷಕ್ಕೆ ತಲುಪಿದೆ. ಗಮನಾರ್ಹ ವಿಚಾರವೆಂದರೆ, 2017ರಿಂದ ನಂತರದ ವರ್ಷಗಳಲ್ಲಿ ದಾಖಲಾದ ಮರಣದಲ್ಲಿ ಸುಮಾರು 17 ಲಕ್ಷದಷ್ಟು ಹೆಚ್ಚಳವಾಗಿದೆ. 2020ರಲ್ಲಿ ಈವರೆಗಿನ ಅತಿಹೆಚ್ಚು ಮರಣ ನೋಂದಣಿಯಾಗಿವೆ. ಆ ವರ್ಷದಲ್ಲಿ ಕೋವಿಡ್–19 ಮೊದಲ ಅಲೆಯುದೇಶವನ್ನು ಬಾಧಿಸಿತ್ತು ಎಂಬುದು ಗಮನಾರ್ಹ.

ಈ ಹತ್ತು ವರ್ಷಗಳಲ್ಲಿ ಮರಣ ನೋಂದಣಿಯಲ್ಲಿ ಗಣನೀಯವಾಗಿ ಏರಿಕೆಯಾಗಿರುವುದೂ ಸಹ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಲು ಕಾರಣವಾಗಿದೆ. ಇದೇ ಅವಧಿಯಲ್ಲಿ ವೈದ್ಯಕೀಯ ಕ್ಷೇತ್ರವೂ ಸಾಕಷ್ಟು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆಯಂತಹ ಮೂಲಸೌಕರ್ಯಗಳೂ ಸುಧಾರಿಸಿವೆ. ಆದಾಗ್ಯೂ, ಮರಣ ಪ್ರಮಾಣದಲ್ಲಿ ದೊಡ್ಡ ಮಟ್ಟದ ಏರಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದನ್ನು ದತ್ತಾಂಶಗಳು ಸೂಚಿಸುತ್ತವೆ.

2011, 2014 ಹಾಗೂ 2016ರಲ್ಲಿ ಮರಣ ನೋಂದಣಿ ಏರಿಕೆಯ ಸಂಖ್ಯೆ ಲಕ್ಷದ ಒಳಗಿದೆ. ಈ ಮೂರು ವರ್ಷಗಳನ್ನು ಹೊರತುಪಡಿಸಿದರೆ, ಉಳಿದೆಲ್ಲ ವರ್ಷಗಳಲ್ಲಿ 1 ಲಕ್ಷದಿಂದ 6 ಲಕ್ಷದವರೆಗೂ ಏರಿಕೆ ಕಂಡುಬಂದಿದೆ. 2019ರಲ್ಲಿ ಈ ದಶಕದ ಅತಿಹೆಚ್ಚು, ಅಂದರೆ 6.9 ಲಕ್ಷದಷ್ಟು ಹೆಚ್ಚುವರಿ ಮರಣ ನೋಂದಣಿಯಾಗಿವೆ. ನಂತರದ ವರ್ಷ ಅಂದರೆ, ಕೋವಿಡ್ ಮೊದಲ ಅಲೆಯು ದಾಳಿಯಿಟ್ಟಿದ್ದ ವರ್ಷದಲ್ಲಿ 4.74 ಲಕ್ಷದಷ್ಟು ಹೆಚ್ಚುವರಿ ಮರಣ ನೋಂದಣಿಯಾಗಿವೆ.

ಹೆಚ್ಚುವರಿ ಸಾವಿನಲ್ಲಿ ಕೋವಿಡ್ ಪಾಲೆಷ್ಟು?

ಸಿಆರ್ಎಸ್ ವರದಿಯಲ್ಲಿ ದಾಖಲಾಗಿರುವ ಹೆಚ್ಚುವರಿ ಸಾವು ಕೇವಲ ಕೋವಿಡ್ನಿಂದಲೇ ಸಂಭವಿಸಿವೆ ಎಂದು ಹೇಳಲಾಗದು ಎಂದು ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ವಿ.ಕೆ. ಪಾಲ್ ಹೇಳಿದ್ದಾರೆ.

‘ಆದರೆ, ಸರ್ಕಾರ ಈ ಹಿಂದೆ ಉಲ್ಲೇಖಿಸಿದ್ದ ಕೋವಿಡ್ ಸಾವಿಗಿಂತ ಹೆಚ್ಚು ಸಾವು ಸಂಭವಿಸಿರಬಹುದು’ ಎಂದು ಪೌಲ್ ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

2019ಕ್ಕೆ ಹೋಲಿಸಿದರೆ, 2020ರಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿರುವುದು ನಿಜವಾದರೂ ಅದಕ್ಕೆ ಹಲವು ಕಾರಣಗಳಿವೆ ಎಂದು ಅವರು ಹೇಳಿದ್ದಾರೆ. ಮರಣ ನೋಂದಣಿ ಪ್ರಮಾಣ ಏರಿಕೆಯಾಗಿದೆ. ವ್ಯಾಜ್ಯ, ಆಸ್ತಿ ಮೊದಲಾದ ಕಾರಣಗಳಿಗಾಗಿ ಮರಣ ನೋಂದಣಿ ಪ್ರಮಾಣಪತ್ರ ಪಡೆಯಲು ಜನರು ಮುಂದಾಗಿರುವುದೂ ಈ ಬೆಳವಣಿಗೆಗೆ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

2020ರ ಅಧಿಕೃತ ಕೋವಿಡ್ ಸಾವಿನ ಸಂಖ್ಯೆ 1.49 ಲಕ್ಷ ಎಂದು ಸರ್ಕಾರದ ಕೋವಿಡ್ ಅಂಕಿ–ಅಂಶಗಳು ಉಲ್ಲೇಖಿಸಿವೆ. ಸಿಆರ್ಎಸ್ ವರದಿಯ ಪ್ರಕಾರ, 2020ರಲ್ಲಿ 4.74 ಲಕ್ಷ ಹೆಚ್ಚುವರಿ ಮರಣ ಉಲ್ಲೇಖವಾಗಿದ್ದರೂ, ಕೋವಿಡ್ ಅಲ್ಲದೆ ಬೇರೆಬೇರೆ ಸೋಂಕು ಅಥವಾ ವಿವಿಧ ಕಾರಣಗಳಿಂದಲೂ ಸಾವು ಸಂಭವಿಸಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರ ಪ್ರದೇಶದಲ್ಲಿ ಮರಣ ನೋಂದಣಿ ಭಾರಿ ಏರಿಕೆ

ದೇಶದಲ್ಲಿ ಪ್ರತಿ ವರ್ಷ ನೋಂದಣಿಯಾಗುವ ಮರಣ ಪ್ರಕರಣಗಳಲ್ಲಿ ಗ್ರಾಮೀಣ ಪ್ರದೇಶದ ಪಾಲು ಹೆಚ್ಚು. ಗ್ರಾಮೀಣ ಪ್ರದೇಶದಲ್ಲಿ ನೋಂದಣಿಯಾಗುವ ಮರಣ ಏರಿಕೆ ಪ್ರಮಾಣವೂ ಹೆಚ್ಚು. ಕೋವಿಡ್ ಬರುವುದಕ್ಕೂ ಮೊದಲಿನ ವರ್ಷಗಳಲ್ಲಿ ಮರಣ ನೋಂದಣಿಯು ಇದೇ ರೀತಿ ದಾಖಲಾಗಿದೆ. ಆದರೆ ಕೋವಿಡ್ ಬಂದ ವರ್ಷದಲ್ಲಿ ಅಂದರೆ 2020ರಲ್ಲಿ ನಗರ ಪ್ರದೇಶದಲ್ಲಿ ನೋಂದಣಿಯಾದ ಮರಣ ಸಂಖ್ಯೆಯ ಏರಿಕೆ ಪ್ರಮಾಣವು ಹೆಚ್ಚಾಗಿದೆ. 2020ರಲ್ಲಿ ದೇಶದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೇ ಕೋವಿಡ್ ವ್ಯಾಪಕವಾಗಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಕೋವಿಡ್ ಸಾವಿನಿಂದ, ಇಲ್ಲಿ ನೋಂದಣಿಯಾದ ಮರಣ ಸಂಖ್ಯೆಯೂ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ

ಆಧಾರ: ಸಿಆರ್ಎಸ್ ವರದಿ–2016, 2017, 2018, 2019 ಮತ್ತು 2020, ರಾಯಿಟರ್ಸ್, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.