ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸೂಚ್ಯಂಕದಲ್ಲಿ ಭಾರತವು 28.68 ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿದೆ. ಇದು ಭಾರತದ ಈವರೆಗಿನ ಕನಿಷ್ಠ ರ‍್ಯಾಂಕ್. 2022ರ ಸೂಚ್ಯಂಕದಲ್ಲಿ ದೇಶವು 107ನೇ ಸ್ಥಾನದಲ್ಲಿ ಇತ್ತು. ಜತೆಗೆ ಸೂಚ್ಯಂಕದ ವರ್ಗೀಕರಣದ ‘ಗಂಭೀರ’ ವರ್ಗದಲ್ಲಿ ದೇಶವು ಸ್ಥಾನ ಪಡೆದುಕೊಂಡಿದೆ. ಹಲವು ಸೂಚಿಗಳಲ್ಲಿ ಭಾರತವು ಬೇರೆ ದೇಶಗಳಿಗೆ ಹೋಲಿಸಿದರೆ, ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.

ಎತ್ತರಕ್ಕೆ ತಕ್ಕ ತೂಕವಿಲ್ಲದ ಮಕ್ಕಳು ಸೂಚಿಯಲ್ಲಿ ಭಾರತದ ಕಳಪೆ ಪ್ರದರ್ಶನ ಮುಂದುವರಿದಿದೆ. 2022–23ರ ಮಧ್ಯೆ ಈ ಸೂಚಿಯಲ್ಲಿ ಭಾರತದ ಸ್ಥಿತಿ ಸುಧಾರಿಸಿದೆ. ಆದರೆ, ಇದೇ ಅವಧಿಯಲ್ಲಿ ಬೇರೆ ದೇಶಗಳು ಭಾರತಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ. ಇದರ ಜೊತೆಯಲ್ಲಿ ಅಪೌಷ್ಟಿಕತೆ ಸೂಚಿಯ ಅಂಕದಲ್ಲೂ ಭಾರತವು ಈ ಬಾರಿ ಉತ್ತಮ ಪ್ರದರ್ಶನ ನೀಡಿಲ್ಲ. ಈ ಎರಡು ಸೂಚಿಗಳಲ್ಲಿ ಭಾರತವು ಗಣನೀಯ ಬೆಳವಣಿಗೆ ತೋರದ ಕಾರಣದಿಂದಾಗಿ ಈ ಬಾರಿ ಭಾರತದ ಸ್ಥಾನವು ಕುಸಿತ ಕಂಡಿದೆ.

ಆದರೆ, ಕೇಂದ್ರ ಸರ್ಕಾರವು ಜಾಗತಿಕ ಹಸಿವು ಸೂಚ್ಯಂಕದ ವರದಿಯನ್ನು, ಅದರ ಮಾನದಂಡಗಳನ್ನು ತಿರಸ್ಕರಿಸಿದೆ.

ಕೇಂದ್ರ ಸರ್ಕಾರ ಹೇಳುವುದೇನು?: ‘ಜಾಗತಿಕ ಹಸಿವು ಸೂಚ್ಯಂಕದಲ್ಲಿ ಅಳೆದಿರುವ ‘ಹಸಿವು’ ಇಡೀಯಾ ಭಾರತದ ಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ. ಇಲ್ಲಿ ಬಳಸಿರುವ ಮಾನದಂಡಗಳು ದೋಷಪೂರಿತವಾಗಿವೆ ಹಾಗೂ ಈ ವರದಿಯು ದುರುದ್ದೇಶದಿಂದ ಕೂಡಿದೆ’ ಎಂದು ಕೇಂದ್ರ ಸರ್ಕಾರವು ಆರೋಪಿಸಿದೆ.

‘ಮಿಷನ್ ಪೋಷಣ್ 2.0 ಅಡಿಯಲ್ಲಿ ಸರ್ಕಾರವು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ‘ಪೋಷಣ್ ಟ್ರ್ಯಾಕರ್’ ಅನ್ನು ಆರಂಭಿಸಿದ್ದೇವೆ. ಈ ಬಗ್ಗೆ ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಬ್ಯಾಂಕ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ. ಮಕ್ಕಳ ಕುಂಠಿತ ಬೆಳವಣಿಗೆ, ಎತ್ತರಕ್ಕೆ ತಕ್ಕ ತೂಕವಿರದ ಮಕ್ಕಳು, ದಢೂತಿ ಮಕ್ಕಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರತಿನಿತ್ಯವು ಅಂಕಿ–ಸಂಕಿಗಳನ್ನು ಈ ಟ್ರ್ಯಾಕರ್‌ನಲ್ಲಿ ಕಾಣಬಹುದು’ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ತನ್ನ ಹೇಳಿಕೆಯಲ್ಲಿ ಹೇಳಿದೆ.

‘ಆಹಾರ ಭದ್ರತೆ ಕಾಯ್ದೆ 2013ರ ಅಡಿಯಲ್ಲಿ ದೇಶದ ಒಟ್ಟು 80 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುತ್ತಿದ್ದೇವೆ’ ಎಂದೂ ಇಲಾಖೆ ಹೇಳಿದೆ. ಆದರೆ, ಸರ್ಕಾರವು 2011ರ ಜನಗಣತಿ ಆಧಾರದಲ್ಲಿ ಜನರಿಗೆ ಆಹಾರ ಒದಗಿಸುತ್ತಿದೆ. ಆದರೆ, ವಿಶ್ವಸಂಸ್ಥೆ ಅಂದಾಜಿಸಿರುವಂತೆ ಈಗ ಭಾರತದ ಜನಸಂಖ್ಯೆ 141 ಕೋಟಿ ಇದೆ. ವಿಶ್ವಬ್ಯಾಂಕ್ ಹೇಳಿರುವಂತೆ ಭಾರತವು 97 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಬೇಕಿತ್ತು. ಅಂದರೆ ಆಹಾರ ಭದ್ರತೆ ಒದಗಿಸಬೇಕಾಗಿದ್ದ ಅರ್ಹ 17 ಕೋಟಿ ಜನರು ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎನ್ನುವುದನ್ನು ಸರ್ಕಾರದ ದತ್ತಾಂಶವೇ ಸೂಚಿಸುತ್ತದೆ. ದೇಶದಲ್ಲಿ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಇದೆ ಎಂಬುದಕ್ಕೆ ಇದೇ ನಿದರ್ಶನ.

ಯಾವುದೋ ಕೆಲವು ಕಂಪನಿಗಳು ತಮ್ಮದೇ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತವೆ. ನಾವು ಅದನ್ನು ನಂಬುತ್ತೇವೆ. ಆದರೆ, ಇದು ಹೀಗಾಗಬಾರದು. ಸೂಚ್ಯಂಕದಲ್ಲಿ ಬಳಸಿರುವ ಮಾನದಂಡಗಳು ಭಾರತಕ್ಕೆ ಒಗ್ಗುತ್ತವೆಯೇ ಇಲ್ಲವೇ ಎಂದು ಪರಾಮರ್ಶಿಸುತ್ತಿದ್ದೇವೆ

-ಮನ್ಸುಖ್ ಮಾಂಡವೀಯಾ, ಕೇಂದ್ರ ಆರೋಗ್ಯ ಸಚಿವ

ಸೂಚ್ಯಂಕ ವಿವರ ಮತ್ತು ಭಾರತದ ತಕರಾರು ಹಸಿವಿನ ಸೂಚ್ಯಂಕದಲ್ಲಿ ಶೂನ್ಯ ಅಂಕ ಗಳಿಸಿದರೆ ಆ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಕಡಿಮೆ ಇದೆ ಎಂದು ಅರ್ಥ. ಅಂಕವು ಹೆಚ್ಚುತ್ತಾ ಹೋಗುವುದು ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹಸಿವಿನ ಸೂಚ್ಯಂಕವನ್ನು ನಿರ್ಧರಿಸಲು ನಾಲ್ಕು ಮಾನದಂಡಗಳನ್ನು ಬಳಸಲಾಗುತ್ತದೆ. ಈ ಮಾನದಂಡಗಳಲ್ಲಿ ಅಂಕಗಳನ್ನು ನಿರ್ಧರಿಸಲು ವಿಶ್ವಸಂಸ್ಥೆಯ ‘ಆಹಾರ ಮತ್ತು ಕೃಷಿ’ ವರದಿ ಮತ್ತು ಇತರ ವರದಿಗಳ ದತ್ತಾಂಶವನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ. ಆ ನಾಲ್ಕು ಮಾನದಂಡಗಳಲ್ಲಿ ಭಾರತದ ಸ್ಥಿತಿ ಮತ್ತು ಅದರ ಆಧಾರದಲ್ಲಿ ಗಳಿಸಿದ ಅಂಕಗಳು ಇಂತಿವೆ

ಹಸಿವು ಎಂದರೆ ಆಹಾರ ಸಿಗದಿರುವ ಸ್ಥಿತಿ ಎಂದು ಮಾತ್ರ ಅರ್ಥೈಸಲು ಸಾಧ್ಯವಿಲ್ಲ. ಹಸಿವು ಎಂದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ದೊರೆಯದಿರುವುದು ಅಗತ್ಯ ಇರುವಷ್ಟು ಕ್ಯಾಲೊರಿಷ್ಟು ಆಹಾರ ದೊರೆಯದೇ ಇರುವ ಸ್ಥಿತಿಯನ್ನು ‘ಹಸಿವು’ ಎನ್ನುತ್ತದೆ ವಿಶ್ವಸಂಸ್ಥೆ. ಅಪೌಷ್ಟಿಕತೆ ಕುಂಠಿತ ಬೆಳವಣಿಗೆ ಕಡಿಮೆ ತೂಕ ಈ ಎಲ್ಲವೂ ಆಹಾರದ ಕೊರತೆಯ ಸೂಚಿಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಅರ್ಥೈಸುತ್ತದೆ. ಭಾರತವೂ ಸೇರಿ ಎಲ್ಲಾ ದೇಶಗಳು ಈ ವ್ಯಾಖ್ಯಾನವನ್ನು ಒಪ್ಪಿಕೊಂಡಿವೆ

ಆಧಾರ: ಜಾಗತಿಕ ಹಸಿವು ಸೂಚ್ಯಂಕ ವರದಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಪ್ರಕಟಣೆ, ಎನ್‌ಎಫ್‌ಎಚ್‌ಎಸ್–5 ವರದಿ, ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ವರದಿ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.