ಇಡೀ ಜಗತ್ತು ವಾರದಲ್ಲಿ ನಾಲ್ಕು ದಿನ ದುಡಿಮೆಯತ್ತ ಹೊರಳುತ್ತಿದ್ದರೆ, ಇವರು ವಾರದ ಏಳು ದಿನವೂ ದುಡಿಯುವ ಮಾತನಾಡುತ್ತಿದ್ದಾರೆ. ಒಬ್ಬ ಉದ್ಯೋಗದಾತನಾಗಿ ಉದ್ಯೋಗಿಯಿಂದ ಗರಿಷ್ಠ ದುಡಿಮೆ ಮಾಡಿಸಿಕೊಳ್ಳುವುದು ಸರಿ ಎನಿಸುತ್ತದೆ. ಆದರೆ ಉದ್ಯೋಗಿಗಳ ಮಾನಸಿಕ ಆರೋಗ್ಯ ಏನಾಗಬೇಕು? ಅವರ ಕೌಟುಂಬಿಕ ಜೀವನ ಏನಾಗಬೇಕು?ಕಮಲ್ ಕುಮಾರ್ (@kamalkumarBJD), ಖಾಸಗಿ ಕಂಪನಿ ಉದ್ಯೋಗಿ ಮತ್ತು ಬಿಜೆಡಿ ಕಾರ್ಯಕರ್ತ
ಐಟಿ ಉದ್ಯಮವು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದೆ. ಇಲ್ಲಿನ ಐಟಿ ಕಂಪನಿಗಳಿಗೆ ಕೆಲಸಕ್ಕೆ ಹೋಗಿ, ಮನೆಗೆ ಬರಲೇ ನಾಲ್ಕು ತಾಸು ಬೇಕು. ಹೀಗಿರುವಾಗ 14 ತಾಸು ಕೆಲಸ, 4 ತಾಸು ಪ್ರಯಾಣ ಮಾಡಬೇಕಾಗುತ್ತದೆ. ನೀವು ಎಂದಾದರೂ ಹೀಗೆ ಮಾಡಿದ್ದೀರಾ ಎಂದು ಟ್ವಿಟರ್‌ನಲ್ಲಿ ಹಲವರು ಪ್ರಶ್ನಿಸಿದ್ದಾರೆ
ವಾರದಲ್ಲಿ 70 ತಾಸು ದುಡಿಯಬೇಕು ಎಂಬುದು ಅತಿ ಮಹತ್ವಾಕಾಂಕ್ಷೆಯಾಗಿ ಹೋಯಿತು. ಕಷ್ಟಪಟ್ಟು ದುಡಿ ಎಂಬುದು, ಆರೋಗ್ಯವನ್ನು ಬಲಿಗೊಟ್ಟು ದುಡಿ ಎಂದರ್ಥವಲ್ಲ.ಡಾ.ಸುರಂಜಿತ್ ಚಟರ್ಜಿ, ಅಪೋಲೊ ಆಸ್ಪತ್ರೆ, ದೆಹಲಿ
ನಾರಾಯಣಮೂರ್ತಿ ಅವರ ಹೇಳಿಕೆಯನ್ನು ನಾನು ತುಂಬು ಹೃದಯದಿಂದ ಬೆಂಬಲಿಸುತ್ತೇನೆ. ಇದು ಶೋಷಣೆಯಲ್ಲ, ಬದಲಿಗೆ ಇದು ಸಮರ್ಪಣೆ. 2047ರ ವೇಳೆಗೆ ನಾವೆಲ್ಲರೂ ಹೆಮ್ಮೆ ಪಡಬಹುದಾದ ಆರ್ಥಿಕ ಸೂಪರ್‌ಪವರ್ ಆಗಿ ಭಾರತವನ್ನು ರೂಪಿಸಬೇಕಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಕ್ಕೆ ವಾರಕ್ಕೆ ಐದು ದಿನದ ದುಡಿಮೆಯ ಸಂಸ್ಕೃತಿ ಸರಿಹೊಂದುವುದಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ 14–16 ತಾಸು ದುಡಿಯುತ್ತಾರೆ. ನನ್ನ ತಂದೆ ವಾರದ ಏಳು ದಿನವೂ, ದಿನಕ್ಕೆ 12–14 ತಾಸು ದುಡಿಯುತ್ತಿದ್ದರು. ನಾನು ಪ್ರತಿದಿನ 10–12 ತಾಸು ದುಡಿಯುತ್ತೇನೆ. ನಾವು ನಮ್ಮ ಕೆಲಸದ ಬಗ್ಗೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು.ಸಜ್ಜನ್ ಜಿಂದಾಲ್,ಜೆಎಸ್‌ಡಬ್ಲ್ಯು ಮುಖ್ಯಸ್ಥ
ನಾರಾಯಣಮೂರ್ತಿ ಅವರ ನಿಲುವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಕಡಿಮೆ ಕೆಲಸ ಮಾಡಿ, ಮೋಜುಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಬದಲಿಗೆ ನಾವು ನಮ್ಮೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ದುಡಿಯಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಬೇರೆ ದೇಶಗಳು ಹಲವು ತಲೆಮಾರುಗಳಲ್ಲಿ ಸಾಧಿಸಿದ್ದನ್ನು ನಾವು ಒಂದೇ ತಲೆಮಾರಿನಲ್ಲಿ ಸಾಧಿಸಬೇಕಾದ ಸ್ಥಿತಿಯಲ್ಲಿದ್ದೇವೆ..ಭವೇಶ್ ಅಗರ್ವಾಲ್, ಒಲಾ ಕ್ಯಾಬ್ಸ್ ಸಿಇಒ
ಇವತ್ತು ದುಡಿ, ನಾಳೆ ಅನುಭವಿಸು ಎಂಬ ದಿನಗಳೆಲ್ಲಾ ಹೋಗಿವೆ. ಈ ರೀತಿ ಸುಮ್ಮನೇ ಬಡಬಡಿಸಬೇಡಿ. ನೌಕರರು ಹೆಚ್ಚು ತಾಸು ದುಡಿಯಬೇಕು ಎಂದು ಬಯಸುವುದಾದರೆ, ತಾಸಿನ ಲೆಕ್ಕದಲ್ಲಿ ಸಂಬಳ ನೀಡಿ. ದುಡಿಮೆ ಏಕಮುಖವಾಗಿರಬಾರದು..ಪಂಕಜ್ ಪಾಂಡೆ (@pp479w), ಖಾಸಗಿ ಕಂಪನಿಯೊಂದರ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.