ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಎನ್ಟಿಎ (ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ) ನಡೆಸಿದ 2024ನೇ ಸಾಲಿನ ನೀಟ್–ಯುಜಿ ಪರೀಕ್ಷೆ ಕುರಿತು ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ನೀಟ್–ಪಿಜಿ ಪರೀಕ್ಷೆಯನ್ನು ಎನ್ಟಿಎ ಮುಂದೂಡಿದೆ. ಜತೆಗೆ ನೆಟ್–ಜೆಆರ್ಎಫ್, ಸಿಎಸ್ಐಆರ್–ನೆಟ್–ಜೆಆರ್ಎಫ್ ಪರೀಕ್ಷೆಗಳೂ ರದ್ದಾಗಿವೆ. ಇವೆಲ್ಲದವರ ವಿರುದ್ಧ ದೇಶದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಹಿಂದಿನ ಎಂಟು ವರ್ಷಗಳಲ್ಲಿ ಹೀಗೆ 45ಕ್ಕೂ ಹೆಚ್ಚು ಪರೀಕ್ಷೆಗಳು ರದ್ದಾಗಿವೆ ಮತ್ತು ಸರಿಸುಮಾರು 2 ಕೋಟಿಯಷ್ಟು ಅಭ್ಯರ್ಥಿಗಳ ಶ್ರಮ ವ್ಯರ್ಥವಾಗಿದೆ.

ಕೇಂದ್ರ ಸರ್ಕಾರದ ವಿವಿಧ ನೇಮಕಾತಿ ಸಂಸ್ಥೆಗಳು, ವಿವಿಧ ಸಚಿವಾಲಯಗಳಿಗೆ ನೇಮಕಾತಿ ಪರೀಕ್ಷೆಯನ್ನು ನಡೆಸುತ್ತವೆ. ಅಂತೆಯೇ ವೃತ್ತಿಪರ ಕೋರ್ಸ್ ಮತ್ತು ಸಂಶೋಧನಾ ಕೋರ್ಸ್ಗಳಿಗೆ ಅರ್ಹತಾ–ಪ್ರವೇಶ ಪರೀಕ್ಷೆಯನ್ನೂ ನಡೆಸುತ್ತವೆ. ರಾಜ್ಯ ಸರ್ಕಾರಗಳ ಮಟ್ಟದಲ್ಲೂ ಈ ರೀತಿಯ ಪರೀಕ್ಷೆಗಳು ನಡೆಯುತ್ತವೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮದ ಕಾರಣಕ್ಕೆ ಪರೀಕ್ಷೆಯನ್ನೇ ರದ್ದುಗೊಳಿಸಿದ ಹಲವು ನಿದರ್ಶನಗಳಿವೆ. 2017ರಿಂದ 2024ರ ಜೂನ್ ನಡುವೆ ಈ ರೀತಿ ದೇಶದಾದ್ಯಂತ 48 ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಇಲ್ಲವೇ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಇವುಗಳಲ್ಲಿ ಕೇವಲ 14 ಪರೀಕ್ಷೆಗಳಲ್ಲೇ 1.97 ಕೋಟಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು (ಉಳಿದ 34 ನೇಮಕಾತಿ ಪರೀಕ್ಷೆಗಳಲ್ಲಿ ಎಷ್ಟು ಮಂದಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಿಲ್ಲ). ಪರೀಕ್ಷೆ ರದ್ದಾದ ಇಲ್ಲವೇ ಫಲಿತಾಂಶ ತಡೆಹಿಡಿದ ಕಾರಣಕ್ಕೆ ಅವರ ಶ್ರಮ ವ್ಯರ್ಥವಾದಂತೆ ಆಗಿದೆ.

ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು ಆಯೋಜಿಸಿದ್ದ 9 ಪರೀಕ್ಷೆಗಳು ರದ್ದಾಗಿವೆ. ಒಂದು ಪರೀಕ್ಷೆಯ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಈ ಪರೀಕ್ಷೆಗಳ ಪೈಕಿ ಐದರಲ್ಲಿ 72.76 ಲಕ್ಷ ಮಂದಿ, ಪರೀಕ್ಷೆ ಬರೆದಿದ್ದರು ಅಥವಾ ತಯಾರಿ ನಡೆಸಿದ್ದರು. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಾದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮತ್ತು ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸಿದ ಹಲವು ಪರೀಕ್ಷೆಗಳು ಈಚಿನ ವರ್ಷಗಳಲ್ಲಿ ರದ್ದಾಗಿವೆ. 2023ರ ಡಿಸೆಂಬರ್ನಲ್ಲಿ ರಾಜ್ಯಸಭೆಗೆ ಕೇಂದ್ರ ಸರ್ಕಾರವು ನೀಡಿದ್ದ ಲಿಖಿತ ಉತ್ತರದಲ್ಲಿ, ಯಾವುದೇ ಪರೀಕ್ಷಾ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಸಿಬಿಐಗೆ ಹಲವು ಪ್ರಕರಣಗಳನ್ನು ನೀಡಿದೆ.

ರಾಜ್ಯಮಟ್ಟದಲ್ಲಿ ನಡೆದ ಪರೀಕ್ಷೆಗಳಲ್ಲಿ ಅತಿಹೆಚ್ಚು ಪರೀಕ್ಷೆಗಳು ರದ್ದಾಗಿದ್ದು ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ. ಈ ಎರಡೂ ರಾಜ್ಯಗಳಲ್ಲಿ ತಲಾ ಆರು ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಈ ಎರಡು ರಾಜ್ಯಗಳಿಂದಲೇ 1 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.

ಕೇಂದ್ರದ ಪರೀಕ್ಷೆಗಳಲ್ಲೂ ಅಕ್ರಮ

l 2017ರಲ್ಲಿ ‘ಸ್ಟಾಫ್ ಸೆಲೆಕ್ಷನ್ ಕಮಿಟಿ’ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಕಾರಣ, ಪರೀಕ್ಷೆ ರದ್ದು

l 2018ರ ಫೆಬ್ರುವರಿ 17ರಂದು ‘ಸ್ಟಾಫ್ ಸೆಲೆಕ್ಷನ್ ಕಮಿಟಿ’ ಆಯೋಜಿಸಿದ್ದ ‘ಗ್ರಾಜುಯೇಟ್ ಲೆವೆಲ್ ಆಫೀಸರ್ಸ್’ ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ

l 2018ನೇ ಸಾಲಿನ ನೀಟ್ ಪರೀಕ್ಷೆಯು ಮೇ 6ರಂದು ನಡೆದಿತ್ತು. 13.26 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ

l 2021ರ ಜನವರಿ 3ರಂದು ರೈಲ್ವೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆದಿತ್ತು. ಪರೀಕ್ಷಾ ಅಕ್ರಮದ ಕಾರಣದಿಂದ ನೇಮಕಾತಿ ಪ್ರಕ್ರಿಯೆಗೆ ತಡೆ

l 2021ರ ಫೆಬ್ರುವರಿಯಲ್ಲಿ ಸೇನೆಯು ‘ಜನರಲ್ ಡ್ಯೂಟಿ ಆಫೀಸರ್ಸ್’ ಹುದ್ದೆಗೆ ಲಿಖಿತ ಪರೀಕ್ಷೆ ಆಯೋಜಿಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಪರೀಕ್ಷೆಯನ್ನು ರದ್ದುಪಡಿಸಿತ್ತು

l 2021ನೇ ಸಾಲಿನ ಜೆಇಇ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. 22 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣದಿಂದ ಫಲಿತಾಂಶಕ್ಕೆ ತಡೆ. ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು

l 2024ರ ನೀಟ್–ಯುಜಿ ಪರೀಕ್ಷೆ: ಗ್ರೇಸ್ ಅಂಕ ನೀಡಿಕೆ ಮತ್ತು ಪರೀಕ್ಷಾ ಅವ್ಯವಸ್ಥೆಯ ಕಾರಣದಿಂದ ವಿವಾದದಲ್ಲಿದೆ. 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು

l 2024ರ ನೀಟ್–ಪಿಜಿ ಪರೀಕ್ಷೆ ಮುಂದೂಡಿಕೆ. 2.28 ಲಕ್ಷ ಮಂದಿ ಪರೀಕ್ಷೆ ಬರೆಯಬೇಕಿತ್ತು

l 2024ರ ನೆಟ್–ಜೆಆರ್ಎಫ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು. 11.22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು

l 2024ರ ಸಿಎಸ್ಐಆರ್–ನೆಟ್–ಜೆಆರ್ಎಫ್ ಪರೀಕ್ಷೆ ನಡೆಯಬೇಕಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು

ಆಧಾರ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.