ಇವಿಎಂ ಅಪನಂಬಿಕೆ
ಕೇರಳದ ಕಾಸರಗೋಡಿನಲ್ಲಿ ಈಚೆಗೆ ಅಣಕು ಮತದಾನ ನಡೆಸಿದಾಗ, ಬೇರೆ ಪಕ್ಷಗಳಿಗೆ ಹಾಕಿದ ಮತಗಳೂ ಬಿಜೆಪಿಗೇ ಹೋಗಿವೆ. ಜತೆಗೆ ಯಾರಿಗೂ ಮತಹಾಕದೇ ಇದ್ದಾಗಲೂ ಬಿಜೆಪಿಗೆ ಮತಬಿದ್ದಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಜಿಲ್ಲಾಧಿಕಾರಿಗೆ ದೂರನ್ನೂ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಇದು ತಾಂತ್ರಿಕ ದೋಷಗಳಿಂದ ಆದ ಸಮಸ್ಯೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಈ ಪ್ರಸಂಗವು ಇವಿಎಂ ಮೇಲೆ ಒಂದು ಮಟ್ಟದ ಅಪನಂಬಿಕೆ ಸೃಷ್ಟಿಸಿದೆ. ಕೇರಳದ ಮಾಧ್ಯಮಗಳೂ ಈ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿವೆ. ಈ ಮೂಲಕ ಜನರು ಈ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ, ‘ಇವಿಎಂಗಳಲ್ಲಿ ತಾಂತ್ರಿಕ ದೋಷ ತಲೆದೋರಿದಾಗಲೆಲ್ಲಾ ಬಿಜೆಪಿಗೇ ಏಕೆ ಹೆಚ್ಚುವರಿ ಮತಗಳು ಹೋಗುತ್ತವೆ’ ಎಂದು ಪ್ರಶ್ನಿಸುತ್ತಿದ್ದಾರೆ.