ಬೆಂಗಳೂರು: ಇಡೀ ರಾಜ್ಯವನ್ನು ವ್ಯಾಪಿಸಿಕೊಂಡಿರುವ ಸಹಕಾರಿ ಆರ್ಥಿಕ ವ್ಯವಸ್ಥೆ ಈಗ ಬಲಾಢ್ಯರ ಸಾಲದ ಭಾರದಿಂದ ಕುಸಿಯತೊಡಗಿದೆ. ಸಹಕಾರ ಬ್ಯಾಂಕ್ಗಳ ಚುಕ್ಕಾಣಿ ಹಿಡಿದ ಪ್ರಭಾವಿಗಳು, ರಾಜಕಾರಣಿಗಳು ಮತ್ತು ಬಲಿಷ್ಠರು ಹಸ್ತಕ್ಷೇಪ, ಸ್ವಜನಪಕ್ಷಪಾತದ ಮೂಲಕ ಸಹಕಾರ ಬ್ಯಾಂಕ್ಗಳ ಹಣವನ್ನು ತಮ್ಮವರಿಗೆ ಬೇಕಾಬಿಟ್ಟಿಯಾಗಿ ಸಾಲ ನೀಡುತ್ತಿರುವುದು ಸಹಕಾರಿ ಚಳವಳಿಗೇ ಕಂಟಕವಾಗಿ ಪರಿಣಮಿಸಿದೆ.

ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಸಕ್ಕರೆ ಉತ್ಪಾದನೆ ಸೇರಿದಂತೆ ಹಲವು ಚಟುವಟಿಕೆಗಳಿಗೆ ಸಹಕಾರಿ ಕ್ಷೇತ್ರವೇ ಬೆನ್ನೆಲುಬು. ರಾಜ್ಯದ ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು ಮಂದಿ ಸಹಕಾರಿ ಸಂಸ್ಥೆಗಳ ಸದಸ್ಯರಾಗಿದ್ದಾರೆ. ₹ 1.36 ಲಕ್ಷ ಕೋಟಿ ದುಡಿಯುವ ಬಂಡವಾಳ ಹೊಂದಿರುವ ರಾಜ್ಯದ ಸಹಕಾರಿ ರಂಗ, ಅಧಿಕಾರಸ್ಥರ ಕಪಿಮುಷ್ಠಿಯಲ್ಲಿ ಸಿಲುಕಿ ಏದುಸಿರು ಬಿಡುತ್ತಿದೆ.

ಮೂರನೇ ಎರಡರಷ್ಟು ಸಹಕಾರಿ ಸಂಸ್ಥೆಗಳು ಲಾಭದಲ್ಲಿದ್ದರೆ, ಮೂರನೇ ಒಂದರಷ್ಟು ಸಂಸ್ಥೆಗಳು ನಷ್ಟದ ಭಾರ ಹೊತ್ತು ಬಸವಳಿದಿವೆ.

ರಾಜ್ಯದ ಸಹಕಾರ ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ವಂಚನೆ, ಅಕ್ರಮಗಳ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಕೆಲವು ವರ್ಷಗಳಿಂದೀಚೆಗೆ ಸಾವಿರಾರು ಸಂಸ್ಥೆಗಳು ಬಾಗಿಲು ಮುಚ್ಚಿವೆ. ಸದ್ಯ ರಾಜ್ಯದ ವಿವಿಧೆಡೆ 53 ದೊಡ್ಡ ಸಹಕಾರ ಸಂಸ್ಥೆಗಳು ಅಕ್ರಮಗಳ ಭಾರ ತಾಳಲಾರದೇ ಕುಸಿದುಬೀಳುವ ಸ್ಥಿತಿಗೆ ತಲುಪಿವೆ. ಇನ್ನೂ ನೂರಾರು ಸಹಕಾರ ಸಂಘಗಳಲ್ಲಿ ಅಕ್ರಮ, ಅವ್ಯವಹಾರಗಳು ನಡೆದಿರುವ ಆರೋಪಗಳಿವೆ.

ಅಕ್ರಮಗಳ ಹೆಬ್ಬಾಗಿಲು ಅಪೆಕ್ಸ್: ರಾಜ್ಯದ ಎಲ್ಲ ಸಹಕಾರ ಸಂಸ್ಥೆಗಳ ಆಧಾರ ಸ್ತಂಭವಾಗಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಲವು ವರ್ಷಗಳಿಂದ ಅಕ್ರಮಗಳ ಗೂಡಾಗಿದೆ. ಅಪೆಕ್ಸ್ ಬ್ಯಾಂಕ್ ಕೇಂದ್ರ ಕಚೇರಿ ಮತ್ತು ಶಾಖೆಗಳ ಮೂಲಕ ಸಾಲ ಹಂಚಿಕೆಯಲ್ಲಿ ಅಕ್ರಮಗಳು ನಡೆಯುತ್ತಿರುವ ದೂರುಗಳಿಗೆ ಕೊನೆಯೇ ಇಲ್ಲದಂತಹ ಸ್ಥಿತಿಯಿದೆ.

ರಾಜಕಾರಣಿಗಳ ಒಡೆತನದ ಸಹಕಾರಿ ಸಂಸ್ಥೆಗಳಿಗೆ, ಅಪೆಕ್ಸ್ ಬ್ಯಾಂಕ್ ನಿಯಮ ಮೀರಿ ನೂರಾರು ಕೋಟಿ ರೂಪಾಯಿ ಸಾಲ ನೀಡಿರುವುದು ಅಲ್ಲಿ ನಡೆಯುತ್ತಿರುವ ಅಕ್ರಮ ವಹಿವಾಟುಗಳಿಗೆ ಒಂದು ಸಣ್ಣ ಉದಾಹರಣೆಯಷ್ಟೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ವ್ಯಾಪಾರಿಗಳಿಗೆ ಸರಿಯಾದ ಆಧಾರವಿಲ್ಲದೇ ಕೋಟಿಗಟ್ಟಲೆ ಸಾಲ ನೀಡುವ ಜಾಲವೊಂದು ಅಪೆಕ್ಸ್ ಬ್ಯಾಂಕ್ನಲ್ಲಿ ಸಕ್ರಿಯವಾಗಿದೆ ಎಂಬ ಆರೋಪ ಬಲವಾಗಿಯೇ ಇದೆ.

ರಾಜಕಾರಣಿಗಳು ನಿರ್ದೇಶಕರಾಗಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು, ರಾಜಕಾರಣಿಗಳ ಒಡೆತನವಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಅಪೆಕ್ಸ್ ಬ್ಯಾಂಕ್ ₹ 3,173.42 ಕೋಟಿ ಸಾಲ ನೀಡಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಸಾಲ ಮರುಪಾವತಿಸುತ್ತಿಲ್ಲ. ಸಕ್ಕರೆ ಕಾರ್ಖಾನೆಗಳ ವಸೂಲಾಗದ ಸಾಲದ ಮೊತ್ತವೇ₹ 734.24 ಕೋಟಿ ಮೀರಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾರ್ಖಾನೆಗಳ ಸಾಮರ್ಥ್ಯ ಲೆಕ್ಕಿಸದೇ ಸಾಲಮಂಜೂರು ಮಾಡಿದ್ದ ಅಪೆಕ್ಸ್ ಬ್ಯಾಂಕ್ ಈಗ ಅನುತ್ಪಾದಕ ಆಸ್ತಿಯ ಹೆಚ್ಚಳದಿಂದ ಅಡಕತ್ತರಿಯಲ್ಲಿ ಸಿಲುಕಿದೆ.

ಸಾಲು ಸಾಲು ಹಗರಣ: ರಾಜ್ಯದ 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಲ್ಲಿ ಬಹುತೇಕ ಸಂಸ್ಥೆಗಳು ಹಗರಣಗಳ ಸುಳಿಗೆ ಸಿಲುಕಿ ನಿಶ್ಶಕ್ತವಾಗಿವೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದವರೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಹತ್ತಾರು ಕೋಟಿ ರೂಪಾಯಿಗಳ ಅಕ್ರಮ ಎಸಗಿ, ಈ ಸಂಸ್ಥೆಗಳನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿರುವ ಉದಾಹರಣೆಗಳಿವೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ನಲ್ಲಿ ಅಂದಿನ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಭಾಗಿಯಾಗಿದ್ದ ₹ 62 ಕೋಟಿ ಮೊತ್ತದ ಚಿನ್ನದ ಅಡಮಾನ ಸಾಲದ ಹಗರಣ, ಕೋಲಾರ– ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಹಗರಣ, ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಗರಣ, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಗರಣ ಹೀಗೆ ಸಾಲು, ಸಾಲು ಅಕ್ರಮಗಳಿಗೆ ಡಿಸಿಸಿ ಬ್ಯಾಂಕ್ಗಳ ಅಧಿಕಾರದ ಚುಕ್ಕಾಣಿ ಹಿಡಿದವರೇ ಕಾರಣರಾಗಿದ್ದಾರೆ.

ಕೃಷಿ ಸಾಲ ಮನ್ನಾ ಯೋಜನೆ ಅನುಷ್ಠಾನದಲ್ಲೂ ಡಿಸಿಸಿ ಬ್ಯಾಂಕ್ಗಳಲ್ಲಿ ಭಾರಿ ಅಕ್ರಮ ನಡೆಯುತ್ತಿರುವ ಆರೋಪಗಳಿವೆ. ತುಮಕೂರು, ಮೈಸೂರು– ಚಾಮರಾಜನಗರ, ಮಂಡ್ಯ ಸೇರಿದಂತೆ ಹಲವು ಡಿಸಿಸಿಗಳಲ್ಲಿ ಇಂತಹ ಅಕ್ರಮ ನಡೆದಿವೆ.
ಕೃಷಿ ಸಾಲದ ಹೆಸರಿನ ಅಕ್ರಮ, ಅಪೆಕ್ಸ್ ಬ್ಯಾಂಕ್ನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳವರೆಗೂ ವ್ಯಾಪಿಸಿಕೊಂಡಿದೆ. ರಾಜ್ಯದ ನೂರಾರು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರ ಹೆಸರಿನಲ್ಲಿ ಸಾಲ ಮಂಜೂರು ಮಾಡಿ, ವಂಚಿಸಿರುವ ಪ್ರಕರಣಗಳಿವೆ. ಸಂಘದ ಮೇಲೆ ರೈತರು ಇರಿಸಿರುವ ನಂಬಿಕೆಯನ್ನು ‘ಬಂಡವಾಳ’ ಮಾಡಿಕೊಂಡು ವಂಚಿಸುವ ‘ಕಲೆ’ ಸಹಕಾರ ಕ್ಷೇತ್ರವನ್ನು ವ್ಯಾಪಿಸುತ್ತಿದೆ.

ಸೌಹಾರ್ದದ ಹೆಸರಿನಲ್ಲಿ ಗುಳುಂ: ರಾಜ್ಯದಲ್ಲಿ 262 ಸೌಹಾರ್ದ ಸಹಕಾರಿ ಬ್ಯಾಂಕ್ಗಳು ಇವೆ. 5,355 ಸೌಹಾರ್ದ ಸಹಕಾರಿಗಳಿವೆ. ಈ ಸಂಸ್ಥೆಗಳ ಆಡಳಿತದ ಮೇಲೆ ಸರ್ಕಾರಕ್ಕೆ ಹೆಚ್ಚು ಹಿಡಿತವಿಲ್ಲ. ಅದನ್ನೇ ಅಸ್ತ್ರ ಮಾಡಿಕೊಂಡ ಕೆಲವರು, ಸೌಹಾರ್ದ ಸಹಕಾರಿ ಸಂಸ್ಥೆಗಳ ಹೆಸರಿನಲ್ಲಿ ಜನರಿಂದ ಹಣ ಸಂಗ್ರಹಿಸಿ ವಂಚಿಸುವುದು ಹೆಚ್ಚುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಗರ ಸಹಕಾರಿ ಬ್ಯಾಂಕ್ಗಳೂ ಅಕ್ರಮ, ವಂಚನೆಯ ತಾಣಗಳಾಗುತ್ತಿವೆ. ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ ಇದಕ್ಕೆ ತಾಜಾ ಉದಾಹರಣೆ. ರಾಜ್ಯದ ಉದ್ದಗಲಕ್ಕೆ ಇಂತಹ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಬಹುತೇಕ ಬಲಾಢ್ಯರೇ ಸೂತ್ರಧಾರಿಗಳಾಗಿರುವುದರಿಂದ ಸಹಕಾರಿ ಸಂಸ್ಥೆಗಳನ್ನು ಹಗರಣ ಮುಕ್ತಗೊಳಿಸುವುದು ಮರೀಚಿಕೆಯಾಗಿ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.