ಅಭಿವೃದ್ಧಿ ಎನ್ನುವುದು ವರಮಾನದ, ಬಂಡವಾಳದ, ಉತ್ಪಾದನೆಯ ಪ್ರಶ್ನೆಯಲ್ಲ. ಇವೆಲ್ಲವೂ ಅಭಿವೃದ್ಧಿಯ ಸಾಧನಗಳು. ಜನರು ಘನತೆಯಿಂದ ಬದುಕುವುದನ್ನು ಸಾಧ್ಯ ಮಾಡಿಕೊಡುವುದೇ ಅಭಿವೃದ್ಧಿ. ಮೀಸಲಾತಿಯು ಮೂಲತಃ ಸಾಮಾಜಿಕವಾದುದೇ ವಿನಾ ಯಾವುದೇ ಕಾರಣಕ್ಕೂ ಇದನ್ನು ಆರ್ಥಿಕ ನೆಲೆಯಲ್ಲಿ ನೋಡುವುದು ಸರಿಯಲ್ಲ. ಮೀಸಲಾತಿಯು ಆರ್ಥಿಕ ಅಥವಾ ಬಡತನ ನಿವಾರಣಾ ಕಾಯಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡುವ ಕ್ರಮದ ಬಗ್ಗೆ ಎತ್ತಿರುವ ಪ್ರಶ್ನೆಗಳನ್ನು ಪರಿಶೀಲಿಸಬೇಕಾಗುತ್ತದೆ.

ನಮ್ಮದು ಮೂಲತಃ ಜಾತಿ ವ್ಯವಸ್ಥೆಯ ಸಮಾಜ. ಜಾತಿವ್ಯವಸ್ಥೆಯಲ್ಲಿ ಶ್ರೇಣೀಕರಣವಿದೆ, ತಾರತಮ್ಯಗಳಿವೆ. ಉನ್ನತ ಜಾತಿಗಳಿವೆ; ಕೆಳಜಾತಿಗಳಿವೆ. ಇವೆರಡರ ನಡುವೆಮಧ್ಯಮ ಜಾತಿಗಳಿವೆ. ಈ ಮಧ್ಯಮ ಜಾತಿಗಳನ್ನೇ ‘ಇತರೆಹಿಂದುಳಿದ ಜಾತಿಗಳು’ (ಒಬಿಸಿಗಳು) ಎಂದು ಕರೆಯಲಾಗಿದೆ. ಈಒಬಿಸಿಗಳಿಗೆ ಒಕ್ಕೂಟ ಸರ್ಕಾರದ ಇಲಾಖೆಗಳಲ್ಲಿ ಮತ್ತು ಸಾರ್ವಜನಿಕಉದ್ದಿಮೆಗಳಲ್ಲಿ ಶೇ 27ರಷ್ಟು ಮೀಸಲಾತಿ ನೀಡುವ ಕ್ರಮ 1992ರಲ್ಲಿಜಾರಿಗೆ ಬಂದಿತು. ಇದು ರಾಜ್ಯ ಮಟ್ಟಕ್ಕೂ ವಿಸ್ತರಣೆಯಾಗಿದೆ.

ಶಿಕ್ಷಣದಲ್ಲಿ ಮೀಸಲಾತಿ ನೀಡುವ ಕ್ರಮವೂ ಜಾರಿಯಲ್ಲಿದೆ.ಸಂವಿಧಾನದ 73 ಮತ್ತು 74ನೆಯ ತಿದ್ದುಪಡಿ ನಂತರಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡುವಕ್ರಮ ರಾಜ್ಯ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಆರಂಭವಾಯಿತು.ಇದೀಗ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆಮೀಸಲಾತಿ ನೀಡುವುದರ ಬಗ್ಗೆ ಸುಪ್ರೀಂ ಕೋರ್ಟ್ ಅನೇಕ ಪ್ರಶ್ನೆಗಳನ್ನು ಎತ್ತಿದೆ. ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರವಾದ ಅಂಕಿಅಂಶಗಳೊಂದಿಗೆ ಗುರುತಿಸಿದ ನಂತರವೇ ಮೀಸಲಾತಿ ನಿಗದಿ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಾಸ್ತವಿಕ ದತ್ತಾಂಶಗಳು ಲಭ್ಯವಾಗುವವರೆಗೆ ಮೀಸಲಾತಿಯನ್ನು ನ್ಯಾಯಾಲಯವು ತಡೆ ಹಿಡಿದಿದೆ. ಇದು ರಾಜ್ಯ ಸರ್ಕಾರಗಳಿಗೆನುಂಗಲಾರದ ತುತ್ತಾಗಿದೆ. ಮಹಾರಾಷ್ಟ್ರದ ಗ್ರಾಮೀಣ ಸ್ಥಳೀಯಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆಎಲ್ಲಿಯವರೆಗೆ ಈ ಮೂರು ಮಾನದಂಡಗಳನ್ನು ಸರ್ಕಾರವುಅನುಸರಿಸುವುದಿಲ್ಲವೋ ಅಲ್ಲಿಯವರೆಗೆ ಒಬಿಸಿಗಳಿಗೆ ಮೀಸಲಾತಿ ಅವಕಾಶ ನೀಡಿ ಚುನಾವಣೆನಡೆಸುವುದನ್ನು ನ್ಯಾಯಾಲಯ ತಡೆಹಿಡಿದಿದೆ. ಈ ಮಾಹಿತಿ ಲಭ್ಯವಿಲ್ಲದೇ ಇದ್ದರೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲು ವಾರ್ಡ್‌ಗಳನ್ನು ಸಾಮಾನ್ಯ ವಾರ್ಡ್ ಎಂದೇ ಪರಿಗಣಿಸಿ ಚುನಾವಣೆ ನಡೆಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ನಿರ್ದೇಶನ ದೇಶದ ಎಲ್ಲ ಭಾಗಗಳಿಗೂ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಒಬಿಸಿ ಮೀಸಲಾತಿ ಮತ್ತು ನ್ಯಾಯಾಲಯದ ಪ್ರಶ್ನೆಗಳು: ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡುವ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಕೆಲವು ಪ್ರಶ್ನೆಗಳನ್ನು ಎತ್ತಿದೆ. ಸಂವಿಧಾನದ ವಿಧಿ 15(4) ಮತ್ತು 16(4)ರಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಮೀಸಲಾತಿಗೂ ಮತ್ತು ವಿಧಿ 243(ಡಿ) (ಗ್ರಾಮೀಣ ಸ್ಥಳೀಯ ಸಂಸ್ಥೆಗಳು) ಹಾಗೂ 243(ಟಿ) (ನಗರ ಸ್ಥಳೀಯ ಸಂಸ್ಥೆಗಳು) ಅಡಿಯಲ್ಲಿ ನೀಡುವ ರಾಜಕೀಯ ಪ್ರಾತಿನಿಧ್ಯದ ಮೀಸಲಾತಿಗೂ ಇರುವ ವ್ಯತ್ಯಾಸವನ್ನು ನ್ಯಾಯಾಲಯ ಎತ್ತಿ ತೋರಿಸಿದೆ.

ಒಬಿಸಿಗಳಿಗೆ ರಾಜಕೀಯ ಪ್ರಾತಿನಿಧ್ಯದ ಮೀಸಲಾತಿಯ ಸಾಂವಿಧಾನಿಕ ಹಕ್ಕಿನ ಸಿಂಧುತ್ವವನ್ನು ನ್ಯಾಯಾಲಯ ಪ್ರಶ್ನಿಸಿಲ್ಲ. ಅದು ಎತ್ತಿರುವ ಪ್ರಶ್ನೆಗಳ ಮೂಲದಲ್ಲಿರುವ ಕಾಳಜಿ ಎಂದರೆ ಮೀಸಲಾತಿ ನಿಗದಿಗೆ ಭದ್ರವಾದ ಸಾಕ್ಷ್ಯಾಧಾರಗಳಿರಬೇಕು ಎಂಬುದಾಗಿದೆ.

ಅಭಿವೃದ್ಧಿ ಮತ್ತು ರಾಜಕೀಯ ಸಹಭಾಗಿತ್ವ: ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ಇಲ್ಲದಿದ್ದರೆ ಅಭಿವೃದ್ಧಿಯ ಫಲಗಳುಎಲ್ಲರಿಗೂ ಸಮಾನವಾಗಿ ದೊರೆಯುವುದಿಲ್ಲ. ನಮ್ಮ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಮಾಜದಲ್ಲಿ ಜನರ ಸಹಭಾಗಿತ್ವವೆನ್ನುವುದು ಅಖಂಡ ಸ್ವರೂಪದಲ್ಲಿಸಾಧ್ಯವಾಗುವುದಿಲ್ಲ. ಹಾಗಾಗಿಯೇ, ಜಾನ್ ರಾಲ್ಸ್ ಪ್ರತಿಪಾದಿಸಿದ ‘ಭಿನ್ನತೆಯ ನಿಯಮ’ದ ಆಧಾರದಲ್ಲಿರಾಜಕೀಯ ಸಹಭಾಗಿತ್ವವನ್ನು ನಿರ್ವಹಿಸಬೇಕು. ನಮ್ಮಸಂವಿಧಾನದಲ್ಲಿನ ಮೀಸಲಾತಿ ತತ್ವದ ಮೂಲ ಈ ಭಿನ್ನತೆಯನಿಯಮದಲ್ಲಿದೆ. ಅಭಿವೃದ್ಧಿ ಎನ್ನುವುದು ವರಮಾನದ,ಬಂಡವಾಳದ, ಉತ್ಪಾದನೆಯ ಪ್ರಶ್ನೆಯಲ್ಲ. ಇವೆಲ್ಲವೂಅಭಿವೃದ್ಧಿಯ ಸಾಧನಗಳು. ಜನರು ಘನತೆಯಿಂದಬದುಕುವುದನ್ನು ಸಾಧ್ಯ ಮಾಡಿಕೊಡುವುದೇ ಅಭಿವೃದ್ಧಿ.ಮೀಸಲಾತಿಯು ಮೂಲತಃ ಸಾಮಾಜಿಕವಾದುದೇ ವಿನಾ ಯಾವುದೇಕಾರಣಕ್ಕೂ ಇದನ್ನು ಆರ್ಥಿಕ ನೆಲೆಯಲ್ಲಿ ನೋಡುವುದುಸರಿಯಲ್ಲ. ಮೀಸಲಾತಿಯು ಆರ್ಥಿಕ ಅಥವಾ ಬಡತನ ನಿವಾರಣಾಕಾರ್ಯಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿಒಬಿಸಿಗಳಿಗೆ ಮೀಸಲಾತಿ ನೀಡುವ ಕ್ರಮದ ಬಗ್ಗೆ ಎತ್ತಿರುವಪ್ರಶ್ನೆಗಳನ್ನು ಪರಿಶೀಲಿಸಬೇಕಾಗುತ್ತದೆ.

ಮೀಸಲಾತಿ ನೀಡಲು ಆಧಾರವಾಗಿರುವ ವಾಸ್ತವಿಕ ದತ್ತಾಂಶಗಳು ಏನು ಎಂದುಸುಪ್ರೀಂ ಕೋರ್ಟ್ ಈ ಹಿಂದೆಯೂ ಸರ್ಕಾರಗಳನ್ನು ಕೇಳಿದೆ. ಇದೇನು ಹೊಸದಾಗಿ ಉದ್ಭವಿಸಿರುವಪ್ರಶ್ನೆಯಲ್ಲ. ಕರ್ನಾಟಕ ಸರ್ಕಾರವು 2015-16ರಲ್ಲಿ ₹170ಕೋಟಿ ಖರ್ಚು ಮಾಡಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಸಮೀಕ್ಷೆ ನಡೆಸಿದೆ (ಜಾತಿ ಗಣತಿ). ಅನೇಕ ರೀತಿಯ ವಿರೋಧಗಳನಡುವೆ ಸರ್ಕಾರ ಜಾತಿ ಗಣತಿ ನಡೆಸಿದೆ. ಯಾವುದೇ ಸಮೀಕ್ಷೆಯ ಖಚಿತತೆಯ ಬಗ್ಗೆ, ಫಲಿತಗಳ ಬಗ್ಗೆ ಪ್ರಶ್ನೆಗಳು ಇದ್ದೇ ಇರುತ್ತವೆ. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಮೀಸಲಾತಿ ಬಗ್ಗೆಈಗ ಸುಪ್ರೀಂ ಕೋರ್ಟ್ ಎತ್ತಿರುವ ಪ್ರಶ್ನೆಗಳಿಗೆ ಕರ್ನಾಟಕವು 2015-16ರಲ್ಲಿ ನಡೆಸಿದ ಜಾತಿ ಗಣತಿಯಲ್ಲಿನ ದತ್ತಾಂಶಗಳನ್ನು ಬಳಸಿಕೊಂಡು ಉತ್ತರ ಕಂಡುಕೊಳ್ಳಬಹುದು. ಈ ದೃಷ್ಟಿಯಿಂದಕರ್ನಾಟಕಕ್ಕೆ ಒಂದು ಅನುಕೂಲವಿದೆ. ಈ ವರದಿಯುಪ್ರಕಟವಾದರೆ ಕೆಲವು ಬಲಾಢ್ಯ ಜಾತಿಗಳು ಮೀಸಲಾತಿಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಆದರೆವರದಿಯಲ್ಲಿನ ಫಲಿತಗಳ ಆಧಾರದಲ್ಲಿ ಸಣ್ಣ-ಪುಟ್ಟಸಮುದಾಯಗಳಿಗೆ ನ್ಯಾಯ ದೊರೆಯಬಹುದಾಗಿದೆ.

ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ: ಒಬಿಸಿ ಸಮುದಾಯಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿನೀಡದಿದ್ದರೆ ಅವು ಸಾಮಾಜಿಕ ನ್ಯಾಯದಿಂದ ವಂಚಿತವಾಗುತ್ತವೆ. ವಂಚಿತ ಒಬಿಸಿಸಮುದಾಯಗಳ ಧ್ವನಿಸ್ಥಳೀಯ ಸಂಸ್ಥೆಗಳಲ್ಲಿ ಇಲ್ಲದಂತಾಗುತ್ತದೆ. ಸಾಮಾಜಿಕನ್ಯಾಯ ಎಂಬುದು ಸಾಂವಿಧಾನಿಕ ಮೌಲ್ಯ. ಅದನ್ನು ಸಾಧಿಸಿಕೊಳ್ಳಲುಸಮಾಜದಲ್ಲಿನ ವಿವಿಧ ವರ್ಗ-ಜಾತಿಗಳಿಗೆ ವಿವಿಧ ಪ್ರಮಾಣದಮೀಸಲಾತಿ ನೀಡಬೇಕಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ 100ವರ್ಷಕ್ಕೂ ಮೀರಿದ ಚರಿತ್ರೆಯಿದೆ.

ಮೈಸೂರು ಸಂಸ್ಥಾನದಲ್ಲಿ 1919ರಲ್ಲಿ ಮಿಲ್ಲರ್ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿಬ್ರಾಹ್ಮಣೇತರರಿಗೆ ಸರ್ಕಾರಿ ನೌಕರಿಗಳಲ್ಲಿ ಶೇ 75ರಷ್ಟುಮೀಸಲಾತಿ ನೀಡಲಾಗಿತ್ತು. ಇಂತಹ ಅನುಕೂಲ ರಾಜ್ಯದ ಉಳಿದ ಪ್ರದೇಶಗಳಿಗೆ ಇರಲಿಲ್ಲ. ಮೈಸೂರು ಸಂಸ್ಥಾನವು ನೀಡಿದ ಮೀಸಲಾತಿಯಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಅವರ ಸಾಮಾಜಿಕ-ಆರ್ಥಿಕಪರಿಸ್ಥಿತಿಯು ಉತ್ತಮವಾಗಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳು ಇಂತಹ ಸೌಲಭ್ಯಕ್ಕೆ1950ರವರೆಗೆ ಕಾಯುಬೇಕಾಯಿತು. ಒಬಿಸಿಗಳ ಮೀಸಲಾತಿಮತ್ತು ಸಾಮಾಜಿಕ ಪ್ರಗತಿಗಳ ನಡುವೆ ಅನುಲೋಮಸಂಬಂಧವಿದೆ. ರಾಜಕೀಯ ಪ್ರಾತಿನಿಧ್ಯವು ಸದರಿಸಮುದಾಯಗಳ ಶೈಕ್ಷಣಿಕ ಮತ್ತು ಉದ್ಯೋಗದಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಒಬಿಸಿಗಳ ರಾಜಕೀಯ ಮೀಸಲಾತಿಯು ಸದರಿ ವರ್ಗದಲ್ಲಿನಮಹಿಳೆಯರ ಸಬಲೀಕರಣಕ್ಕೆ ಕಾಣಿಕೆ ನೀಡುತ್ತದೆ. ಒಬಿಸಿಸಮುದಾಯಗಳ ಮಹಿಳೆಯರಿಗೂ ಸ್ಥಳೀಯ ಸಂಸ್ಥೆಗಳಲ್ಲಿಮೀಸಲಾತಿ ಸೌಲಭ್ಯವಿದೆ.ಒಬಿಸಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಬಗ್ಗೆ ಜನಗಣತಿ ಮಹಾನಿರ್ದೇಶನಾಲಯದ ಮೂಲಕ ಮಾಹಿತಿ ಪಡೆದು, ಒಕ್ಕೂಟ ಸರ್ಕಾರ ಅಗತ್ಯ ಕ್ರಮತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಒಕ್ಕೂಟ ಸರ್ಕಾರ ತನ್ನಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಈಗ ಸ್ಥಳೀಯ ಸಂಸ್ಥೆಗಳಲ್ಲಿನಮೀಸಲಾತಿಯ ಪ್ರಶ್ನೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಎಲ್ಲರಾಜ್ಯಗಳೂ ಸಮಸ್ಯೆ ಎದುರಿಸುತ್ತಿವೆ. ಒಬಿಸಿ ಪಟ್ಟಿಯನ್ನು ರಾಜ್ಯಸರ್ಕಾರಗಳಿಗೆ ಸಿದ್ಧಪಡಿಸಲು ಸ್ವಾತಂತ್ರ್ಯ ನೀಡಲಾಗಿದೆ ಎಂದುಒಕ್ಕೂಟ ಸರ್ಕಾರವು ಕೈಕಟ್ಟಿಕೊಂಡು ಕೂರುವಂತಿಲ್ಲ.

ಸ್ಥಳೀಯ ಸಂಸ್ಥೆಗಳು ಈಗ ಸಂವಿಧಾನಾತ್ಮಕ ಸಂಸ್ಥೆಗಳಾಗಿವೆ.ಮಂಡಲ್ ಆಯೋಗದಪ್ರಕಾರ,ನಮ್ಮ ಸಮಾಜದ ಒಟ್ಟು ಜನಸಂಖ್ಯೆಯಲ್ಲಿ ಶೇ 52ರಷ್ಟು ಒಬಿಸಿ ಜನರಿದ್ದಾರೆ. ಇಂದು ಅದುಹೆಚ್ಚಾಗಿದೆಯೋ ಅಥವಾ ಕಡಿಮೆಯಾಗಿದೆಯೋ ಎಂಬುದರ ಬಗ್ಗೆನಿಖರ ಮಾಹಿತಿಯಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾಹಿತಿಕೊರತೆಯಿಂದ ಮೀಸಲಾತಿ ಇಲ್ಲ ಎನ್ನುವುದು ಸರಿಯಲ್ಲ. ಕರ್ನಾಟಕಸರ್ಕಾರವು 2015-16ರಲ್ಲಿ ನಡೆಸಿದ ಜಾತಿಗಣತಿ ವರದಿಯನ್ನುಆಧಾರವಾಗಿ ಇಟ್ಟುಕೊಂಡು ತಜ್ಞರ ಜೊತೆ ಸಮಾಲೋಚಿಸಿ, ಅದರಲ್ಲಿಸಣ್ಣಪುಟ್ಟ ಲೋಪದೋಷಗಳಿದ್ದರೆ ಸರಿಪಡಿಸಿ ಅದರಫಲಿತಗಳನ್ನು ಬಳಸಿಕೊಂಡು ಮೂರು ಸೂತ್ರಗಳನ್ನುತುರ್ತು ಕ್ರಮಗಳ ಮೂಲಕ ಪೂರೈಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಲೇಖಕ: ಅಭಿವೃದ್ಧಿ ಅರ್ಥಶಾಸ್ತ್ರಜ್ಞ

‘ರಾಜಕೀಯ ಮೀಸಲಾತಿ ಅತ್ಯವಶ್ಯ’
ಹಿಂದುಳಿದ ವರ್ಗಗಳಿಗೆ ಎಲ್ಲಾ ಹಂತದ ರಾಜಕೀಯದಲ್ಲಿ ಮೀಸಲಾತಿ ನೀಡುವುದು ಅತ್ಯಂತ ಅವಶ್ಯಕ. ಯಾವುದೇ ರಾಜ್ಯಕ್ಕೆ ಹೋದರೂ ಎರಡರಿಂದ ಮೂರು ಜಾತಿಗಳು ಮಾತ್ರ ರಾಜಕೀಯ ಅಧಿಕಾರ ಅನುಭವಿಸುತ್ತಿವೆ. ಎಲ್ಲಾ ಜಾತಿಗಳಿಗೂ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂಬ ಕಾರಣಕ್ಕೆ ಮೀಸಲಾತಿ ನೀಡಲಾಗಿತ್ತು. ಈಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಅಸಮಾನತೆ ಹೆಚ್ಚಾಗುವ ಸಾಧ್ಯತೆ ಇದೆ. 1995ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಕಲ್ಪಿಸಿದರು. ಅದಕ್ಕೂ ಮುನ್ನ 1956ರಲ್ಲಿ ಕುರುಬ ಸಮುದಾಯದ ವೈ.ರಾಮಚಂದ್ರ ಬೆಂಗಳೂರಿನ ಮೇಯರ್ ಆಗಿದ್ದರು. ತದ ನಂತರ 1995ರ ತನಕ ಒಕ್ಕಲಿಗರು, ಕುರುಬರು, ತಿಗಳರು, ಮುಸ್ಲಿಂ, ದಲಿತರು, ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೇಯರ್ ಸ್ಥಾನ ಸಿಗಲೇ ಇಲ್ಲ. ಮೀಸಲಾತಿ ದೊರಕಿದ ನಂತರ ಹಲವರು ಮೇಯರ್ ಆಗಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಜಾತಿ ಜನಗಣತಿ ವರದಿ ಪಡೆದು ಜಾರಿಗೊಳಿಸುವ ಧೈರ್ಯ ಮಾಡಬೇಕಿತ್ತು. ಆದರೆ, ಅವರು ಸಬೂಬು ಹೇಳಿ ನುಣುಚಿಕೊಂಡರು. ಬಸವರಾಜ ಬೊಮ್ಮಾಯಿ ಅವರು ಈಗ ಯಾವುದೇ ಸಬೂಬು ಹೇಳದೆ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಒಪ್ಪಬೇಕು. ಅದರ ಪ್ರಕಾರ ಮೀಸಲಾತಿ ನೀಡಬೇಕು. ದೇವರಾಜ ಅರಸ್, ವಿ.ಪಿ.ಸಿಂಗ್ ಮಾದರಿಯಲ್ಲಿ ಬಸವರಾಜ ಬೊಮ್ಮಾಯಿ ಅವರೂ ಹಿಂದುಳಿದ ವರ್ಗಗಳ ಹಿತೈಷಿ ಎಂದು ಇತಿಹಾಸದಲ್ಲಿ ಉಳಿಯಬೇಕು.
–ಮುಕುಡಪ್ಪ, ಹಿಂದುಳಿದ ದಲಿತ(ಹಿಂದ) ಸಮಿತಿ ಅಧ್ಯಕ್ಷ

‘ಸುಪ್ರೀಂ ಪ್ರಶ್ನೆಗಳಿಗೆ ಸಮೀಕ್ಷೆಯಲ್ಲಿ ಉತ್ತರವಿದೆ’
ಈಗಿರುವ ಸಾಮಾಜಿಕ ನ್ಯಾಯಾದ ಜೊತೆಗೆ ರಾಜಕೀಯ ನ್ಯಾಯವೂ ಮುಖ್ಯ. ಸುಪ್ರೀಂ ಕೋರ್ಟ್ ಕೇಳುತ್ತಿರುವ ಪ್ರಶ್ನೆಗಳಿಗೆ ಕಾಂತರಾಜು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ ಅಂಕಿ–ಅಂಶ ಸಹಿತ ಉತ್ತರವಿದೆ. ಈ ವರದಿ ಕೇವಲ ಹಿಂದುಳಿದ ವರ್ಗಗಳಿಗೆ ಸಂಬಂಧಿಸದ ವಿವರ ಮಾತ್ರ ಒದಗಿಸುವುದಿಲ್ಲ, ಎಲ್ಲಾ ಸಮುದಾಯಗಳ ಸ್ಥಿತಿಗತಿಯನ್ನು ತಿಳಿಸುತ್ತದೆ.

ರಾಜಕೀಯ ಮೀಸಲಾತಿ ಉಳಿಸಿಕೊಳ್ಳಲು ಇನ್ನೊಂದು ಆಯೋಗ ರಚನೆ ಮಾಡಬೇಕಿಲ್ಲ, ಅದರ ಅಗತ್ಯವೂ ಇಲ್ಲ. ಈವರೆಗೆ ಯಾವ ಸಮುದಾಯಗಳಿಗೆ ಎಷ್ಟು ರಾಜಕೀಯ ಅವಕಾಶ ಸಿಕ್ಕಿದೆ, ಯಾವ ಸಮುದಾಯಗಳು ವಂಚಿತವಾಗಿವೆ ಎಂಬ ಅಂಶಗಳು ಈ ವರದಿಯಲ್ಲೇ ಅಡಕವಾಗಿದೆ. ಸುಪ್ರೀಂ ಕೋರ್ಟ್ ಹೇಳುವ ಮಾನದಂಡವನ್ನು ಈಗ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅನುಸರಿಸಿದರೆ, ಮುಂದಿನ ದಿನಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲೂ ರಾಜಕೀಯ ಮೀಸಲಾತಿ ಇಲ್ಲದಂತೆ ಆಗಲಿದೆ. ಕಾಂತರಾಜ್ ಆಯೋಗದ ವರದಿಯನ್ನು ಕೂಡಲೇ ಸರ್ಕಾರ ಸ್ವೀಕಾರ ಮಾಡಬೇಕು. ಅಗತ್ಯ ಎನಿಸಿದರೆ ಅದನ್ನು ಅಧ್ಯಯನಕ್ಕೆ ಒಳಪಡಿಸಬಹುದು. ಆದರೆ, ಅದರಲ್ಲಿರುವ ಅಂಕಿ–ಅಂಶ ಬಳಸಿಕೊಳ್ಳಲು ತೊಂದರೆಯೇನೂ ಇಲ್ಲ. ಇನ್ನೊಂದು ಆಯೋಗ ರಚನೆ ಮಾಡುವುದೆಂದರೆ ಕಾಲಹರಣವೇ ಹೊರತು ಬೇರೇನೂ ಆಗುವುದಿಲ್ಲ.
–ಆರ್.ಕೆ.ಸಿದ್ರಾಮಣ್ಣ, ವಿಧಾನ ಪರಿಷತ್ತಿನ ಮಾಜಿ ಸದಸ್ಯ

ಮೀಸಲಾತಿಯೂ ವಂಶಪಾರಂಪರ್ಯ ಆಗಬಾರದು
ವರ್ಣಾಶ್ರಮ ವ್ಯವಸ್ಥೆಯೇ ಜಾತಿಯಾಗಿ ಬದಲಾಗಿದ್ದು, ಈ ವ್ಯವಸ್ಥೆ ಭಾರತೀಯ ಸಮಾಜವನ್ನು ಅವನತಿಯ ಅಂಚಿಗೆ ದೂಡಿದೆ. ಈಗ ಮೀಸಲಾತಿ ವಿರೋಧಿಗಳು ಶಕ್ತಿಶಾಲಿಗಳಾಗಿದ್ದಾರೆ. ಹೀಗಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೀಸಲಾತಿ ರೀತಿಯಲ್ಲೇ ರಾಜಕೀಯ ಮೀಸಲಾತಿಯೂ ಅಗತ್ಯವಿದೆ.

ಮಂಡಲ್ ಆಯೋಗದ ವರದಿ ಆಧರಿಸಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಗೆ ಕರ್ನಾಟಕ ಚಾಲನೆ ಕೊಟ್ಟಿತು. ಯಾವುದೇ ಸೌಲಭ್ಯ ಸಿಗದವರಿಗೆ ಮೀಸಲಾತಿ ಅನುಕೂಲಕರ ದಾರಿಯಾಗಿತ್ತು. ಆದರೆ, ಶ್ರೀಮಂತರಿಗೆ, ಪ್ರಬಲ ಜಾತಿಯವರಿಗೆ ಮೀಸಲಾತಿಯ ಅಗತ್ಯವಿಲ್ಲ. ಹಿಂದುಳಿದವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಅಗತ್ಯವಿದೆ.

ರಾಜಕೀಯ ಮೀಸಲಾತಿಯಂತೂ ಇತ್ತೀಚೆಗೆ ಪಿತ್ರಾರ್ಜಿತ ಆಸ್ತಿಯಂತಾಗಿದೆ. ತಂದೆ ಪ್ರಭಾವಿಯಾಗಿದ್ದರೆ ಮಕ್ಕಳಿಗೆ ರಾಜಕೀಯ ಮೀಸಲಾತಿ ಲಾಭ ಅನಾಯಸವಾಗಿ ದಕ್ಕುತ್ತಿದೆ ಅಥವಾ ದಕ್ಕಿಸಿಕೊಡಲಾಗುತ್ತಿದೆ. ಅರ್ಹತೆ ಇಲ್ಲದಿದ್ದರೂ ಮೀಸಲಾತಿ ಅಡಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರೆ ‘ಯೋಗ್ಯತೆ ಇದ್ದವರಿಗೆ ಯೋಗವಿಲ್ಲ’ ಎಂಬಂತಾಗುತ್ತದೆ. ಸಚಿವರ ಮಕ್ಕಳೇ ಸಚಿವನಾಗುವುದು, ಶಾಸಕರ ಮಕ್ಕಳೇ ಶಾಸಕನಾಗುವ ವಂಶಪಾರಂಪರ್ಯ ರಾಜಕಾರಣಕ್ಕೆ ಈ ಮೀಸಲಾತಿ ಬಳಕೆಯಾಗುತ್ತಿದೆ. ಇದು ತಪ್ಪಬೇಕು.

ಕೆಲವೊಮ್ಮೆ ಅನರ್ಹರೂ ರಾಜಕೀಯ ಮೀಸಲಾತಿಯ ಸೌಲಭ್ಯ ಪಡೆಯುವಂತಾಗುತ್ತದೆ. ಇದು ಸುಗಮ ರಾಜಕೀಯ ಆಡಳಿತಕ್ಕೆ ಧಕ್ಕೆ ತರುವ ಸಂಗತಿ. ಮೀಸಲಾತಿ ಸೌಲಭ್ಯ ಪಡೆದು ನಿಜವಾದ ಅರ್ಥದಲ್ಲಿ ಆಡಳಿತ ನಡೆಸಿದರೆ ಅದಕ್ಕೊಂದು ಅರ್ಥ ಬರುತ್ತದೆ ಮತ್ತು ಅಂತಹ ಮೀಸಲಾತಿ ನಿಜಕ್ಕೂ ಸಾರ್ಥಕವಾಗುತ್ತದೆ.
–ಡಾ.ವರದಾ ಶ್ರೀನಿವಾಸ್, ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.