ಹಚ್ಚೆಯನ್ನು (ಟ್ಯಾಟೂ) ಈಗ ಆತ್ಮವಿಶ್ವಾಸ, ಸ್ವ-ಅಭಿವ್ಯಕ್ತಿಯ ಮಾಧ್ಯಮದ ರೂಪದಲ್ಲಿ ನೋಡಲಾಗುತ್ತಿದೆ. ಚಿತ್ರವೊಂದು ಅದನ್ನು ಧರಿಸಿದವನ ವ್ಯಕ್ತಿತ್ವ, ಆತನ ನಂಬಿಕೆ, ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಗತಿಸಿಹೋದ ಆತ್ಮೀಯರನ್ನು ಗೌರವಿಸಲು, ಪ್ರೀತಿಪಾತ್ರರನ್ನು ಸದಾ ನೆನಪಿನಲ್ಲಿಡಲು, ಹೀಗೆ ಎಲ್ಲದಕ್ಕೂ ‘ಟ್ಯಾಟೂ’ ಬಳಕೆಯಾಗುತ್ತಿದೆ.

ಅಮೆರಿಕದ ಪ್ರತಿ ಹತ್ತರಲ್ಲಿ ನಾಲ್ಕು ಮಂದಿ ತಮ್ಮ ಮೈಮೇಲೆ ಕನಿಷ್ಠ ಒಂದಾದರೂ ಹಚ್ಚೆ ಹಾಕಿಸಿರುತ್ತಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ನಮ್ಮಲ್ಲಿ ಅದರ ಪ್ರಮಾಣ ಸ್ವಲ್ಪ ಕಡಿಮೆ ಇರಬಹುದು. ಹೊಸ ತಲೆಮಾರಿನವರಿಗೆ ಟ್ಯಾಟೂ ಬಗ್ಗೆ ಹೆಚ್ಚಿನ ಒಲವು ಇದೆ. ಆದರೆ, ಹಚ್ಚೆಗಳು ಎಷ್ಟು ಸುರಕ್ಷಿತ? ಇವುಗಳಲ್ಲಿರುವ ಅಪಾಯಗಳೇನು?

ಹಚ್ಚೆ ಅಪಾಯಕಾರಿಯೇ?

ಹಚ್ಚೆ ಹಾಕಿಸಿಕೊಂಡ ಕೆಲವರಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿರುವುದು ನಿಜವಾದರೂ ‘ಹಚ್ಚೆ ಹಾಕಿಸಿಕೊಳ್ಳುವುದು ಅಪಾಯಕಾರಿ’ ಎಂದು ನಿಖರವಾಗಿ ಹೇಳಬಹುದಾದಷ್ಟು ಪುರಾವೆಗಳಿಲ್ಲ. ಹಚ್ಚೆ ಹಾಕಿಸಿದ ಕೆಲವು ದಿನಗಳವರೆಗೆ ಆ ಜಾಗವು ಕೆಂಪಾಗಿರುವುದು, ಊತ ಹಾಗೂ ನೋವು ಕಾಣಿಸಿಕೊಳ್ಳುವುದು ಸ್ವಾಭಾವಿಕ. ಹೆಚ್ಚಿನವರಲ್ಲಿ ಇದಕ್ಕಿಂತ ಹೆಚ್ಚಿನ ಲಕ್ಷಣಗಳು ಕಾಣಿಸುವುದಿಲ್ಲ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ.

l ಹಚ್ಚೆ ಹಾಕಿಸಿ ಕೆಲವು ದಿನ, ವಾರ ಅಥವಾ ತಿಂಗಳುಗಳ ಬಳಿಕ ಕೆಲವರಲ್ಲಿ ಸೋಂಕು, ಅಲರ್ಜಿ ಕಾಣಿಸುವುದಿದೆ. ಅತಿಯಾದ ನೋವು, ತುರಿಕೆ, ಜ್ವರ, ನವೆ ಕಾಣಿಸಿಕೊಂಡ ಉದಾಹರಣೆಗಳೂ ಇವೆ

lಶುಚಿಯಾಗಿರದ ಉಪಕರಣ, ಕಳಪೆ ಗುಣಮಟ್ಟದ ಶಾಯಿಯ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ

lಟ್ಯಾಟೂಗಳು ಕ್ಯಾನ್ಸರ್ಗೂ ಕಾರಣವಾಗುತ್ತವೆ ಎಂದು ಕೆಲವರು ಹೇಳುತ್ತಾರೆ. ಆದರೆ, ಈ ಬಗ್ಗೆ ನಿಖರ ಅಧ್ಯಯನಗಳು ನಡೆದಿಲ್ಲ

lಹಚ್ಚೆ ಹಾಕಿಸಿದ ಜಾಗದಲ್ಲೇ ಚರ್ಮದ ಕ್ಯಾನ್ಸರ್ ಕಾಣಿಸಿಕೊಂಡ ಕೆಲವು ಉದಾಹರಣೆಗಳಿವೆ. ಹಚ್ಚೆಯಲ್ಲಿ ಬಳಸಿದ ಶಾಯಿಯೇ ಅದಕ್ಕೆ ಕಾರಣ ಇರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಆದರೆ ಅದನ್ನು ಸಾಬೀತುಪಡಿಸಲು ಬೇಕಾದಷ್ಟು ಆಧಾರಗಳು ಲಭ್ಯವಾಗಿಲ್ಲ

lಹಚ್ಚೆಯ ಶಾಯಿಯಲ್ಲಿ ಇರುವ ‘ಟೈಟಾನಿಯಂ ಡಯಾಕ್ಸೈಡ್’ ಎಂಬ ರಾಸಾಯನಿಕವು ದುಗ್ಧರಸ ಗ್ರಂಥಿಯಲ್ಲಿ ಸೇರಿಕೊಂಡು ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂಬುದು 2017ರಲ್ಲಿ ನಡೆಸಿದ್ದ ಒಂದು ಅಧ್ಯಯನದಲ್ಲಿ ತಿಳಿದು ಬಂದಿತ್ತು. ಆದರೆ, ಇದು ಹೇಗೆ ಸಂಗ್ರಹವಾಗುತ್ತದೆ, ದೀರ್ಘಾವಧಿಯಲ್ಲಿ ಎಂಥ ಸಮಸ್ಯೆ ಉಂಟುಮಾಡುತ್ತದೆ ಎಂಬ ಬಗ್ಗೆ ಅಧ್ಯಯನ ಆಗಿಲ್ಲ

lಹಚ್ಚೆ ಹಾಕಿಸಿಕೊಂಡ ಬಳಿಕ ಕೆಲವರಲ್ಲಿ ಅಸಾಮಾನ್ಯವಾದಂಥ ಆರೋಗ್ಯ ಸಮಸ್ಯೆ ಕಾಣಿಸಿಕೊಂಡದ್ದಿದೆ. ನೋವು ಸಹಿಸಲಾಗದೆ, ಕೆಲವರು ಶಸ್ತ್ರಚಿಕಿತ್ಸೆ ಮೂಲಕ ಹಚ್ಚೆಯನ್ನು ತೆಗೆಸಿದ ಉದಾಹರಣೆಗಳಿವೆ

lಹಚ್ಚೆ ಹಾಕಿಸುವ ಪ್ರಕ್ರಿಯೆಯು ಚರ್ಮದ ಮೇಲ್ಪದರ ಮತ್ತು ಮಧ್ಯಮ ಪದರವನ್ನು ಗಾಸಿಗೊಳಿಸುತ್ತದೆ. ಹಚ್ಚೆಯಲ್ಲಿ ಬಳಸಿದ ಶಾಯಿ ಮತ್ತು ಅದಕ್ಕೆ ಮಿಶ್ರಣ ಮಾಡಿದ ನೀರಿನಲ್ಲಿ ರೋಗಾಣುಗಳಿದ್ದರೆ ಅದರಿಂದ ಅಲರ್ಜಿ ಸಂಭವಿಸಬಹುದು ಎಂದು ವೈದ್ಯರು ಹೇಳುತ್ತಾರೆ.

lಹಚ್ಚೆಯಲ್ಲಿ ಬಳಸುವ ನೀಲಿ, ಹಳದಿ, ಹಸಿರು ಮತ್ತು ವಿಶೇಷವಾಗಿ ಕೆಂಪು ಬಣ್ಣದ ಶಾಯಿಯು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಹಲವು ವರ್ಷಗಳ ನಂತರವೂ ಅಪಾಯ ಸಂಭವಿಸಬಹುದು

lಹಚ್ಚೆ ಹಾಕಿಸಿದ ವ್ಯಕ್ತಿಗೆ ಯಾವತ್ತಾದರೂ ಎಂಆರ್ಐ ಸ್ಕ್ಯಾನ್ ಮಾಡಿಸುವ ಸಂದರ್ಭ ಬಂದರೆ, ಸ್ಕ್ಯಾನಿಂಗ್ ನಂತರ ಹಚ್ಚೆಯ ಜಾಗದಲ್ಲಿ ಊತ, ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಳಸಿದ ಶಾಯಿಯ ಗುಣಮಟ್ಟ ಹೇಗಿದೆ ಎಂಬುದರ ಮೇಲೆ ಇದರ ತೀವ್ರತೆ ಅವಲಂಬಿಸಿರುತ್ತದೆ. ಎಂಆರ್ಐ ಚಿತ್ರದ ಸ್ಪಷ್ಟತೆಯ ಮೇಲೆ ಹಚ್ಚೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು

lಹಚ್ಚೆ ಹಾಕಿಸುವವರು ಉಪಕರಣಗಳನ್ನು ಸರಿಯಾಗಿ ಶುಚಿಗೊಳಿಸದಿದ್ದರೆ ರಕ್ತದ ಮೂಲಕ ಹರಡುವ ಹೆಪಿಟೈಟಿಸ್ ಬಿ/ಸಿ, ಎಚ್ಐವಿಯಂಥ ಸೋಂಕುಗಳು ಅಂಟಿಕೊಳ್ಳುವ ಅಪಾಯ ಇರುತ್ತದೆ

ಎಚ್ಚರ ಇರಲಿ

ಹಚ್ಚೆಯಿಂದ ಹೆಚ್ಚಿನ ಅಪಾಯ ಇರುವುದಿಲ್ಲ ಎಂದು ಹೇಳಬಹುದಾದರೂ ಹಚ್ಚೆ ಹಾಕಿಸುವುದಕ್ಕೂ ಮುನ್ನ ಕೆಲವು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ

lಹಚ್ಚೆ ಹಾಕಿಸುವ ಸ್ಟುಡಿಯೊ ಹಾಗೂ ಕಲಾವಿದನ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಳ್ಳಿ. ಹೆಸರಾಂತ ಕಲಾವಿದರಿಂದಲೇ ಹಚ್ಚೆ ಹಾಕಿಸುವುದು ಸುರಕ್ಷಿತ

lಹಚ್ಚೆ ಹಾಕುವುದಕ್ಕೂ ಮುನ್ನ ಕಲಾವಿದರು ಕೈ ಸ್ವಚ್ಛಗೊಳಿಸಿದ್ದಾರೆಯೇ, ಕೈಗವಸು ಹಾಕಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ

lಕಲಾವಿದರು ಉಪಕರಣ ಸ್ವಚ್ಛಗೊಳಿಸಿದ್ದಾರೆಯೇ, ಹೊಸ ಸೂಜಿ ಹಾಗೂ ಇತರ ವಸ್ತುಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ

lಹಚ್ಚೆ ಹಾಕಿಸಿದ ಜಾಗದ ಚರ್ಮವು ಸಹಜ ಸ್ಥಿತಿಗೆ ಬರಲು ಕೆಲವು ದಿನಗಳೇ ಬೇಕಾಗುತ್ತವೆ. ಅಷ್ಟು ಕಾಲ ಆ ಜಾಗವನ್ನು ಸ್ವಚ್ಛವಾಗಿಡಲು ವಿಶೇಷ ಕಾಳಜಿ ವಹಿಸಿ. ದಿನಕ್ಕೆ ನಾಲ್ಕಾರು ಬಾರಿ ಸೌಮ್ಯವಾದ ಮಾಯಿಶ್ಚರೈಸರ್ಗಳನ್ನು ಹಚ್ಚಿರಿ

lಹಚ್ಚೆ ಹಾಕಿಸಿ ಕೆಲವು ವಾರ ಆ ಜಾಗಕ್ಕೆ ನೇರವಾಗಿ ಬಿಸಿಲು ಬೀಳದಂತೆ ಎಚ್ಚರವಹಿಸಬೇಕು. ಚರ್ಮವು ಸಂಪೂರ್ಣ ಸಹಜ ಸ್ಥಿತಿಗೆ ಬರುವವರೆಗೆ ನದಿ, ಕೆರೆ ಮುಂತಾದ ನೀರಿನ ಮೂಲಗಳಿಂದ ದೂರ ಇರುವುದು ಸುರಕ್ಷಿತ. ಹಚ್ಚೆ ಹಾಕಿಸಿದ ಕೆಲವೇ ದಿನಗಳ ಬಳಿಕ ಈಜಾಡಲು ಹೋಗಿ, ವ್ಯಕ್ತಿಯೊಬ್ಬರು ಸೋಂಕಿಗೆ ಒಳಗಾಗಿ ಸತ್ತಿರುವ ಉದಾಹರಣೆ ಇದೆ

lಚರ್ಮ ಸಂಪೂರ್ಣ ಸಹಜ ಸ್ಥಿತಿಗೆ ಬರಲು ಕನಿಷ್ಠ ಎರಡು ವಾರ ಬೇಕು. ಈ ಅವಧಿಯಲ್ಲಿ ಆಗಾಗ ಮುಟ್ಟುವುದಾಗಲಿ, ತುರಿಸುವುದಾಗಲಿ ಮಾಡಬಾರದು

lಯಾವುದೇ ಸಮಸ್ಯೆ ಕಾಣಿಸಿಕೊಂಡರೆ ತಡಮಾಡದೆ ವೈದ್ಯರನ್ನು ಭೇಟಿಮಾಡಿ. ಆರೋಗ್ಯದ ಮೇಲೆ ಸಮಸ್ಯೆಯಾಗುವ ಲಕ್ಷಣಗಳು ಕಾಣಿಸಿಕೊಂಡರೆ ಚರ್ಮರೋಗ ತಜ್ಞರನ್ನು ಭೇಟಿಮಾಡಿ, ಹಚ್ಚೆಯನ್ನು ತೆಗೆಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.