ಬೀದಿ ಬದಿ ಉಣ್ಣುವ ಆಯ್ಕೆ ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು. ಆಹಾರ–ಆರೋಗ್ಯ ಒಂದು ಇನ್ನೊಂದಕ್ಕೆ ಪೂರಕ. ಎರಡನೇ ಮಾತಿಲ್ಲ. ಬೀದಿಯಲ್ಲಿ ಉಣ್ಣುವ ಬಗ್ಗೆ ತಾತ್ಸಾರ ಇದ್ದರೆ, ಆರೋಗ್ಯ ಸಂಬಂಧಿ ಹುಷಾರಿ ನಡೆಗಳನ್ನು ರೂಢಿಯಲ್ಲಿಟ್ಟಿಕೊಂಡಿದ್ದರೆ ಇತ್ತ ತಲೆ ಹಾಕಬೇಡಿ. ಆದರೆ, ಬಾಯಿರುಚಿ ಮತ್ತು ಹಸಿವಾದೆಡೆ ಮೃಷ್ಟಾನ್ನ ಇಲ್ಲದೊಡೆ ಏನು ಮಾಡುವುದು? ಅಂಥ ಸಮಯದಲ್ಲಿ ಅಪದ್ಬಾಂಧವ ಬೇಕೆನಿಸಿದರೆ ನಗರದ ದಶ ದಿಕ್ಕುಗಳಲ್ಲಿ, ಆಯಕಟ್ಟಿನ ಗಲ್ಲಿಗಳಲ್ಲಿ ನಿಮಗೆ ಬಯಲು ಆಹಾರ (ಸ್ಟ್ರೀಟ್ ಫುಡ್) ಲಭ್ಯ. ಅಪರಾತ್ರಿಯಲ್ಲೂ ಬಿಸಿ ಬಿಸಿ ಮಾಡಿ ಬಡಿಸುವವರಿದ್ದಾರೆ. ಎಗ್ ರೈಸ್ ಅನ್ನೋದು ‘ಎಗ್ ಫ್ರೈಡ್ ರೈಸ್‘ಗೆ ಸ್ಥಳೀಯ ನಾಮ. ಚೀನೀ ಶೈಲಿಯ ಫ್ರೈಡ್ ರೈಸ್ ಆಹಾರ ಸಂಸ್ಕೃತಿಯನ್ನು ಹೀಗೆ ದೇಸೀಯಕ್ಕೆ ಒಗ್ಗಿಸಿಕೊಂಡಿದ್ದು. ಇಂಥಲ್ಲಿ ಎಗ್ ರೈಸ್ ಸವಿದರೆ ಅದರ ಮಜವೇ ಬೇರೆ.

ನಗರ ಕೇಂದ್ರದಿಂದ ದೂರವಿರುವ ಫೀನಿಕ್ಸ್ ಮಾಲ್ ಶಾಪಿಂಗ್, ತಡರಾತ್ರಿ ಪಿವಿಆರ್ ಅಥವಾ ಗೋಪಾಲನ್ ಸಿನಿಮಾ ಶೋ ಮುಗಿದ ಮೇಲೆ ಮನೆಗೆ ಮರಳುವಾಗ ಹಸಿವಾದರೆ! ಮಾಲ್ ಫುಡ್ಕೋರ್ಟ್ ಆಯ್ಕೆ ಮೀರಿ ಇನ್ನೇನಾದರೂ ಬೇಕೆನಿಸಿದರೆ, ಅಂಥ ಸಮಯದಲ್ಲಿ ಮನೆಗೆ ಸಮೀಪದ ಇನ್ನೆಲ್ಲೂ ಉಣ್ಣಲು ವ್ಯವಸ್ಥೆ ಇಲ್ಲ ಎಂದೆನಿಸಿದರೆ ತಲೆ ಕೆಡಿಸಿಕೊಳ್ಳಬೇಡಿ.

ಟಿನ್ ಫ್ಯಾಕ್ಟರಿ ಬಸ್ ಸ್ಟಾಪ್ನಿಂದಐಟಿಪಿಎಲ್ ಕಡೆಗೆ ಹೋಗುವ ದಾರಿಯಲ್ಲಿ ಫ್ಲೈ ಓವರ್ ಪಕ್ಕ ಸಣ್ಣದೊಂದು ಗಲ್ಲಿ ಇದೆ. ಅದರ ಕಾರ್ನರ್ನಲ್ಲೇ ಮೊಟ್ಟೆ ಆಮ್ಲೇಟ್ ಘಮ ಘಮದ ಪುಟ್ಟ ಹೊಟೇಲ್ ಇದೆ. ಆಮ್ಲೇಟ್, ಅರ್ಧ ಬೇಯಿಸಿದ ಆಮ್ಲೇಟ್ ಅಥವಾ ಬುಲ್ಸ್ಐ ಆಮ್ಲೇಟ್ ಮತ್ತು ಎಗ್ ರೈಸ್ ಸವಿಯುವುದಕ್ಕೆ ಫರ್ಫೆಕ್ಟ್ ಜಾಗ..

ಫೀನಿಕ್ಸ್, ಗೋಪಾಲನ್ ಮಾಲ್, ಐಟಿಪಿಎಲ್, ಟಿನ್ ಫ್ಯಾಕ್ಟರಿ ಕಡೆ ರಾತ್ರಿ ಹೋದರೆ, ಅಥವಾ ಕೋಲಾರ, ಸಿಲ್ಕ್ಬೋರ್ಡ್, ಐಟಿಪಿಎಲ್ ಕಡೆಯಿಂದ ಶಹರಿಗೆ ವಾಪಸ್ ಆಗುವಾಗ ಒಂದು ಟ್ರೈ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.