ಲಾಕ್ಡೌನ್ ಆಗಿ ಮನೆಯಲ್ಲಿಯೇ ಲಾಕ್ ಆಗಿರೋ ಸಂದರ್ಭದಲ್ಲಿ ಮುಸಲ್ಮಾನರ ಪವಿತ್ರ ಮಾಸ ರಂಜಾನ್ ಆರಂಭವಾಗಿದೆ. ದಿನವಿಡಿ ಉಪವಾಸವಿದ್ದು ಹಸಿದಿರೋ ದೇಹವನ್ನು ತಣಿಸಲು ಕರಾವಳಿ ಭಾಗದಲ್ಲಿ ಮನೆಗಳಲ್ಲಿಯೇ ವಿಧವಿಧವಾದ ಭೋಜನಗಳು ತಯಾರಾಗುತ್ತವೆ. ಪ್ರತಿದಿನ ಹೊಸ ಅಡುಗೆಗಳನ್ನು ತಯಾರಿಸಿ ಮನೆ ಮಂದಿಗೆ ಇಫ್ತಾರ್ ಸಮಯದಲ್ಲಿ ಬಡಿಸಿ ಖುಷಿ ಪಡುತ್ತಿದ್ದಾರೆ ಹೆಂಗಳೆಯರು. ರಂಜಾನ್ನ ಇಫ್ತಾರ್ ಸಮಯಕ್ಕೆ ತಯಾರಿಸುವ ಮಂದಿ ಬಿರಿಯಾನಿ, ಕಸ್ಟರ್ಡ್ ಪಾಯಸ, ಎಳೆನೀರಿನ ಪುಡ್ಡಿಂಗ್ ಮಾಡುವ ವಿಧಾನವನ್ನು ಫಾತಿಮಾ ಇಶ್ರತ್ ಇಲ್ಲಿ ವಿವರಿಸಿದ್ದಾರೆ. ತಯಾರಿಸಿ ಸವಿದು ನೋಡಿ.

ಎಳನೀರಿನ ಪುಡ್ಡಿಂಗ್

ಬೇಕಾಗುವ ಸಾಮಗ್ರಿಗಳು: ಚೈನಾ ಗ್ರಾಸ್ – 8 ಗ್ರಾಂ, ಹಾಲು – 750 ಮಿಲಿ ಲೀಟರ್, ಮಿಲ್ಕ್ಮೇಡ್ – ಮುಕ್ಕಾಲು ಟಿನ್, ಗಂಜಿ ಇರುವ ಎಳನೀರು – 1, ಅಲಂಕಾರಕ್ಕೆ ಪಿಸ್ತಾ, ಬಾದಾಮಿ, ದ್ರಾಕ್ಷಿ, ಗೋಡಂಬಿ.

ತಯಾರಿಸುವ ವಿಧಾನ: ಚೈನಾ ಗ್ರಾಸ್ ಅನ್ನು ನೀರಲ್ಲಿ 5 ನಿಮಿಷ ನೆನೆಸಿಡಿ. ಆಮೇಲೆ ಚೆನ್ನಾಗಿ ತೊಳೆಯಿರಿ. ಅದಕ್ಕೆ 300 ಮಿಲಿ ಲೀಟರ್ ನೀರು ಸೇರಿಸಿ ಚೆನ್ನಾಗಿ ಕಾಯಿಸಿ. ಕೈ ಆಡಿಸುತ್ತಿರಿ. ಅದಕ್ಕೆ 750 ಮಿಲಿ ಲೀಟರ್ ಹಾಲು ಹಾಕಿ ಕುದಿಸುತ್ತ ಮುಕ್ಕಾಲು ಟಿನ್ ಮಿಲ್ಕ್ ಮೇಡ್ ಹಾಕಿ ಚೆನ್ನಾಗಿ ಕೈಯಾಡಿಸಿ.

ಮಿಕ್ಸಿ ಜಾರ್ಗೆ ಎಳನೀರು ಮತ್ತು ಅದರ ಗಂಜಿ ಹಾಕಿ ಅರೆಯಿರಿ. ಈ ಮಿಶ್ರಣವನ್ನು ಕುದಿಯುತ್ತಿರೋ ಹಾಲಿಗೆ ಹಾಕಿ ಕದಡುತ್ತಿರಿ. ಸ್ವಲ್ಪ ಏಲಕ್ಕಿ ಪುಡಿ ಹಾಕಿ. ಚೆನ್ನಾಗಿ ಕುದಿದ ಮೇಲೆ ಒಂದು ಪುಡ್ಡಿಂಗ್ ಬೌಲ್ಗೆ ಸುರಿಯಿರಿ. ಅದನ್ನು ಪಿಸ್ತಾ, ಬಾದಾಮಿ, ದ್ರಾಕ್ಷಿ, ಗೋಡಂಬಿಯಂತಹ ಒಣಹಣ್ಣುಗಳಿಂದ ಅಲಂಕರಿಸಿ ಫ್ರಿಜ್ನಲ್ಲಿಟ್ಟು ನಂತರ ಬಡಿಸಿರಿ.

ಮಂದಿ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಚಿಕನ್– 1 ಕೆಜಿ, ಕಾಳುಮೆಣಸಿನ ಪುಡಿ – 1/4 ಟೀ ಚಮಚ, ಜೀರಿಗೆ – ಒಂದೂವರೆಟೀ ಚಮಚ, ಮ್ಯಾಗಿ ಚಿಕನ್ ಸ್ಟಾಕ್ – 2 ತುಂಡು, ಕೆಂಪು ಫುಡ್ ಕಲರ್ – ಸ್ವಲ್ಪ, ದೊಣ್ಣೆ ಮೆಣಸು – 2(ಮಧ್ಯಮ ಗಾತ್ರದ್ದು) ಕೊತ್ತಂಬರಿ ಸೊಪ್ಪು – 3 ಟೇಬಲ್ ಚಮಚ, ಪುದಿನ – 2 ಟೇಬಲ್ ಚಮಚ, ಅಡುಗೆಎಣ್ಣೆ – 200 ಮಿಲಿ ಲೀಟರ್, ಬಾಸ್ಮತಿ ಅಕ್ಕಿ – 1 ಕೆ.ಜಿ., ಏಲಕ್ಕಿ – 4, ಲವಂಗ– 4, ಚಕ್ಕೆ – 1 ತುಂಡು, ಡ್ರೈ ಲಿಂಬೆ – 1, ಅರಸಿನ ಪುಡಿ –ಕಾಲು ಟೀ ಚಮಚ, ಹಸಿಮೆಣಸಿನಕಾಯಿ – 4-5, ಚಾರ್ಕೋಲ್ – 1.

ತಯಾರಿಸುವ ವಿಧಾನ: ದೊಡ್ಡದಾಗಿ ತುಂಡರಿಸಿಕೊಂಡು ಚಿಕನ್ ತುಂಡುಗಳನ್ನು ಚಿಕ್ಕ ಚಿಕ್ಕ ತೂತುಗಳನ್ನು ಮಾಡಿ. ಪಾತ್ರೆಯೊಂದರಲ್ಲಿ ಕಾಳುಮೆಣಸಿನ ಪುಡಿ, ಜಜ್ಜಿದ ಜೀರಿಗೆ, ಚಿಕ್ಕದಾಗಿ ತುಂಡು ಮಾಡಿದ ಚಿಕನ್ ಸ್ಟಾಕ್, ನೆನೆಸಿಟ್ಟುಕೊಂಡ ಪುಡ್ ಕಲರ್, ಸಣ್ಣಗೆ ಹೆಚ್ಚಿಕೊಂಡ ದೊಣ್ಣೆ ಮೆಣಸು, ಕೊತ್ತಂಬರಿ ಸೊಪ್ಪು, ಪುದಿನ, ಎಣ್ಣೆ ಹಾಗೂ ಚಿಕನ್ ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ಮ್ಯಾಗಿ ಸ್ಟಾಕ್ನಲ್ಲಿ ಉಪ್ಪು ಇರುವುದರಿಂದ ಉಪ್ಪು ಸೇರಿಸಿಬೇಡಿ. ಇದನ್ನು 2 ಗಂಟೆ ಕಾಲ ಇಡಿ.

ಬಾಸ್ಮತಿ ಅಕ್ಕಿಯನ್ನು ತೊಳೆದು 1 ಗಂಟೆ ನೆನೆಸಿಡಿ. ನೆನೆಸಿಟ್ಟುಕೊಂಡ ಚಿಕನ್ ತುಂಡುಗಳನ್ನು ದೊಡ್ಡ ಉರಿಯಲ್ಲಿ 3 ನಿಮಿಷ ಬೇಯಿಸಿಕೊಂಡು, ನಂತರ ಸಣ್ಣ ಉರಿಯಲ್ಲಿ 15 ನಿಮಿಷ ಬೇಯಿಸಿ. ನಂತರ ಚಿಕನ್ ತುಂಡಿನ ಇನ್ನೊಂದು ಭಾಗವನ್ನು 15 ನಿಮಿಷ ಬೇಯಿಸಿ. ಇನ್ನೊಂದು ಕಡೆ ಪಾತ್ರೆಗೆ ನೀರು ಹಾಕಿ ಅದಕ್ಕೆ ಏಲಕ್ಕಿ, ಲವಂಗ, ಚಕ್ಕೆ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಡ್ರೈ ಲಿಂಬೆ, ಎರಡು ಟೇಬಲ್ ಚಮಚ ಎಣ್ಣೆ ಹಾಗೂ ನೆನೆಸಿಟ್ಟುಕೊಂಡು ಅಕ್ಕಿಯನ್ನು ನೀರು ಸೋಸಿ ಹಾಕಿ. ಅಕ್ಕಿ ಶೇ 90 ಭಾಗ ಬೆಂದ ಮೇಲೆ ನೀರು ಸೋಸಿ ಬೆಂದ ಚಿಕನ್ ಮೇಲೆ ಚೆನ್ನಾಗಿ ಹರಡಿ. ನಂತರ ಸ್ವಲ್ಪ ಅರಿಸಿನದ ನೀರನ್ನು ಎಲ್ಲಾ ಕಡೆ ಆಗುವಂತೆ ಅನ್ನದ ಮೇಲೆ ಚಿಮುಕಿಸಿ. 4ರಿಂದ 5 ಹಸಿಮೆಣಸಿನಕಾಯಿಯನ್ನು ದೂರ ದೂರಕ್ಕೆ ಇಡಿ. ಅನ್ನದ ಮಧ್ಯೆ ಸಣ್ಣ ಬೌಲ್ನಲ್ಲಿ ಚಾರ್ಕೋಲ್ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ. ನಂತರ ಆವಿ ಹೊರಹೋಗದಂತೆ ಪಾತ್ರೆಯನ್ನು ಚೆನ್ನಾಗಿ ಮುಚ್ಚಿ. 10 ನಿಮಿಷ ಸಣ್ಣ ಉರಿಯಲ್ಲಿ ದಮ್ ಬರಿಸಿ. 15 ನಿಮಿಷಗಳಾದ ಮೇಲೆ ಚೆನ್ನಾಗಿ ಮಿಶ್ರಣ ಮಾಡಿ.ಅಲಂಕಾರಕ್ಕೆ ಲಿಂಬೆ ಕತ್ತರಿಸಿ, ಈರುಳ್ಳಿ ದುಂಡಗೆ ಕತ್ತರಿಸಿ ಇಡಿ. ಈಗ ‘ಮಂದಿ ಬಿರಿಯಾನಿ’ ಮನೆ ಮಂದಿಯೊಂದಿಗೆ ಕೂತು ಸವಿಯಿರಿ.

ಕಸ್ಟರ್ಡ್ ಪಾಯಸ

ಬೇಕಾಗುವ ಸಾಮಗ್ರಿಗಳು: ಒಣಹಣ್ಣುಗಳು – ನಿಮಗೆ ಬೇಕಾಗುವಷ್ಟು, ಹಾಲು – ಅರ್ಧ ಲೀಟರ್ , ಚಿಟಿಕೆ ಉಪ್ಪು, ಸಕ್ಕರೆ – ಒಂದೂವರೆ ಕಪ್, ಕಸ್ಟರ್ಡ್ ಪುಡಿ – ಒಂದೂವರೆ ಟೇಬಲ್ ಚಮಚ, ಬಾಳೆಹಣ್ಣು – 2, ದಾಳಿಂಬೆ – 1, ಸೇಬು – 1, ತುಪ್ಪ, ಶ್ಯಾವಿಗೆ

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಬಾದಾಮಿ, ದ್ರಾಕ್ಷಿ, ಖರ್ಜೂರ ಅಥವಾ ನಿಮಗಿಷ್ಟವಾದ ಒಣಹಣ್ಣು ಹಾಗೂ ಶ್ಯಾವಿಗೆ ಹಾಕಿ ಚೆನ್ನಾಗಿ ಹುರಿಯಿರಿ. ಅದಕ್ಕೆ ಅರ್ಧ ಲೀಟರ್ ಹಾಲು, ಸ್ವಲ್ಪ ನೀರು ಸೇರಿಸಿ ಹಾಕಿ ಚೆನ್ನಾಗಿ ಕೈ ಆಡಿಸುತ್ತಿರಿ. ರುಚಿಗೆ ಬೇಕಾದಷ್ಟು ಸಕ್ಕರೆ ಹಾಕಿ. ಒಂದು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲಸುತ್ತಿರಿ.

ಒಂದು ಬೌಲ್ಗೆ ತಣ್ಣಗಿನ ಹಾಲು ಹಾಕಿ ಅದಕ್ಕೆ ಒಂದೂವರೆ ಚಮಚ ಕಸ್ಟರ್ಡ್ ಪುಡಿ ಹಾಕಿ ಕಲಸಿ ಬಾಣಲೆಯಲ್ಲಿರೋ ಮಿಶ್ರಣಕ್ಕೆ ಸೇರಿಸಿ ಕೈ ಆಡಿಸಿ. ಪೂರ್ತಿ ತಣ್ಣಗಾದ ಮೇಲೆ ಫ್ರಿಜ್ನಲ್ಲಿಡಿ. ಬಡಿಸುವಾಗ ಅದಕ್ಕೆ ನಿಮಗೆ ಇಷ್ಟವಾದ ಯಾವುದೇ ತಾಜಾ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ ಚೆನ್ನಾಗಿ ಮಿಕ್ಸ್ ಮಾಡಿ. ಹೆಚ್ಚಿದ ಬಾಳೆಹಣ್ಣುಗಳಿಂದ ಅಲಂಕರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.