ಬೆಂಗಳೂರು: ಕೊರೊನಾ ಸೋಂಕಿನ ಎರಡನೆಯ ಅಲೆಯು ಮೊದಲನೆಯ ಅಲೆಗಿಂತ ತೀವ್ರವಾಗಿದ್ದು ಸೋಂಕಿನ ತೀವ್ರತೆ, ಸೋಂಕಿತರ ಸಂಖ್ಯೆ ಎಲ್ಲದರಲ್ಲೂ ಮೊದಲನೆಯ ಅಲೆಯನ್ನು ಮೀರುತ್ತಿದೆ.

ಜನರು ಅನೇಕ ಸಂಖ್ಯೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದು, ಮನೆಯಿಂದಲ್ಲೂ ಸಹ ಅನೇಕರು ಸೋಂಕಿತರಾಗುತ್ತಿದ್ದಾರೆ. ಅಂತಹ ಸಂದರ್ಭದಲ್ಲಿಸಾಮೂಹಿಕವಾಗಿ ಶೌಚಾಲಯಗಳನ್ನು ಬಳಸುವುದರಿಂದ ಹಾಗೂ ಶೌಚಾಲಯಗಳನ್ನು ಫ್ಲಶ್ ಮಾಡುವುದರಿಂದ ಸಹ ಸೋಂಕು ಇತರರಿಗೆ ಹರಡಬಹುದಾಗಿದೆ ಎಂದು ಅಧ್ಯಯನಗಳು ತಿಳಿಸುತ್ತಿವೆ.

ಇದು ಹೇಗೆ ಸಾಧ್ಯ?
ಎಲ್ಲರಿಗೂ ತಿಳಿದಿರುವಂತೆ ಕೊರೊನಾ ಸೋಂಕು ಕೆಮ್ಮುವುದರಿಂದ ಹಾಗೂ ಸೀನುವುದರಿಂದ , ಮಾತನಾಡುವಾಗ ಹೊರಹೊಮ್ಮುವ ಉಸಿರಾಟದ ಹನಿಗಳಿಂದ ಹರಡುತ್ತದೆ. ಅದೇ ರೀತಿ ಸೋಂಕಿತರ ಮಲ ಹಾಗೂ ಮೂತ್ರಗಳಲ್ಲಿಯೂ ಸಹ ವೈರಾಣುವಿರುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಸೋಂಕಿತರು ಉಪಯೋಗಿಸಿದ ಶೌಚಾಲಯಗಳನ್ನು ಫ್ಲಶ್ ಮಾಡಿದಾಗ ಹೊರಹೊಮ್ಮುವ ಬಯೋಏರಸಾಲ್ ನಿಂದ ವೈರಾಣುವುವಾತಾವರಣದಲ್ಲಿ ಹರಡಿ ಸೋಂಕನ್ನು ಹರಡಬಹುದಾಗಿದೆ. ಸಾಮೂಹಿಕವಾಗಿ ಬಳಸುವ ಶೌಚಾಲಯಗಳಲ್ಲಿ ಇದು ಸಹಜವಾಗಿದೆ.

ನೂರು ಫ್ಲಶ್ ಗಳಿಂದ ಹತ್ತಾರು ಸಾವಿರದ ಪ್ರಮಾಣದಲ್ಲಿ ವೈರಾಣುವಾತಾವರಣದಲ್ಲಿ ಹರಡಬಹುದಾಗಿದೆ ಎಂದು ಫ್ಲೋರಿಡಾ ವಿವಿಯ ಅಧ್ಯಯನಗಳು ತಿಳಿಸುತ್ತದೆ.

ಇಂತಹ ಸೋಂಕಿತ ಹನಿಗಳು 5 ಅಡಿ ಎತ್ತರಕ್ಕೆ ಹಾಗೂ ಫ್ಲಶ್ ಮಾಡಿದ 20 ಸೆಕೆಂಡುಗಳಿಗೂ ಹೆಚ್ಚು ಹೊತ್ತು ಇರಬಹುದಾಗಿದೆ. ವೈರಾಣುವಿನ ಅಳತೆಯ 3 ಮೈಕ್ರೋಮೀಟರ್ ಗಿಂತ ಕಡಿಮೆಯಿದ್ದು ವಾತಾವರಣದಲ್ಲಿ ಹೆಚ್ಚು ಹೊತ್ತು ಇರಬಹುದಾಗಿದೆ.

ಇದನ್ನು ತಡೆಯಲು ಮಾಡಬಹುದಾದದ್ದೇನು?

ಸಾಮಾಜಿಕ ಶೌಚಾಲಯಗಳನ್ನು ಎಚ್ಚರಿಕೆಯಿಂದ ಬಳಸುವುದು ಮುಖ್ಯ

ಫ್ಲಶ್ ಮಾಡಿದೊಡನೆ ಟಾಯ್ಲೆಟ್ ಮುಚ್ಚಳವನ್ನು ಹಾಕುವುದನ್ನು ಮರೆಯಬಾರದು

ಶೌಚಾಲಯಗಳನ್ನು ಪದೇ ಪದೇ ಸ್ವಚ್ಛಗೊಳಿಸುವುದು ಉತ್ತಮ

ಶೌಚಾಲಯಗಳಲ್ಲಿ ಗಾಳಿ ಬೆಳಕು ಇರುವಂತೆ ನೋಡಿಕೋಳ್ಳುವುದು

ಶೌಚಾಲಯಗಳಲ್ಲಿ ಎಕ್ಸಾಸ್ಟ್ ಫ್ಯಾನ್ಗಳ ಬಳಕೆ ಉತ್ತಮ

ಶೌಚಾಲಯಗಳನ್ನು ಉಪಯೋಗಿಸಿದ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು ಮುಖ್ಯವಾಗುತ್ತದೆ.

(ಲೇಖಕರುಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು, ಹಿರಿಯ ದಂತ ವೈದ್ಯರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.