ಬೆಂಗಳೂರಿನ ಆಹಾರಪ್ರಿಯರ ನೆಚ್ಚಿನ ತಾಣವಾದ ವಿಶ್ವೇಶ್ವರಪುರಂನ ಸಜ್ಜನರಾವ್ ಸರ್ಕಲ್ ಸಮೀಪದ ಫುಡ್ಸ್ಟ್ರೀಟ್ ಬಹುತೇಕ ಸ್ತಬ್ಧವಾಗಿದೆ.

ಕೋವಿಡ್–19 ಮತ್ತು ಕಾಲರಾ ಭೀತಿ ಹಿನ್ನೆಲೆಯಲ್ಲಿ ಫುಡ್ಸ್ಟ್ರೀಟ್ನ ಹೋಟೆಲ್ಗಳ ಮೇಲೆ ಈಚೆಗೆ ದಾಳಿ ನಡೆಸಿದ ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ಶುಚಿತ್ವ ಕಾಯ್ದುಕೊಳ್ಳದ ಹೋಟೆಲ್ಗಳಿಗೆ ನೋಟಿಸ್ ನೀಡಿ, ಬೀಗ ಹಾಕಿದ್ದಾರೆ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಬಗೆಯ ತಿಂಡಿಗಳ ಘಮ್ಮನೆಯ ಪರಿಮಳದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದ ಫುಡ್ಸ್ಟ್ರೀಟ್ ಚಟುವಟಿಕೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.

ಅರ್ಧ ಕಿಲೋಮೀಟರ್ ರಸ್ತೆಯ ಎರಡೂ ಬದಿಯಲ್ಲಿದ್ದ ಹೋಟೆಲ್ಗಳಿಗೆ ಬೀಗ ಹಾಕಲಾಗಿದೆ.ಅವುಗಳ ಜತೆ ಇನ್ನುಳಿದ ಹೋಟೆಲ್ಗಳನ್ನೂ ಶುಚಿತ್ವ ಕಾರ್ಯಗಳಿಗಾಗಿ ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದಾರೆ. ಎಂಟು ದಿನ ಕಾಲಾವಕಾಶ ಕೋರಿರುವ ಈ ಹೋಟೆಲ್ಗಳ ಮಾಲೀಕರು ಈಗ ಸಾಮೂಹಿಕವಾಗಿ ಹೋಟೆಲ್ಶುಚಿತ್ವ ಕಾರ್ಯ ಆರಂಭಿಸಿದ್ದಾರೆ.

ಅಡುಗೆ ಮನೆ ಮತ್ತು ಕೈತೊಳೆಯುವ ಸ್ಥಳ, ಸರಾಗವಾಗಿ ನೀರು ಹರಿದು ಹೋಗಲು ಚರಂಡಿಗಳ ದುರಸ್ತಿ ಕಾಮಗಾರಿ ಮತ್ತು ಪೈಂಟಿಂಗ್ ಕೆಲಸಗಳು ಭರದಿಂದ ನಡೆಯುತ್ತಿರುವ ದೃಶ್ಯಗಳು ಫುಡ್ಸ್ಟ್ರೀಟ್ಗೆ ಭೇಟಿ ನೀಡಿದಾಗ ಕಂಡು ಬಂದವು.

‘ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಾವು ಸ್ವಯಂಪ್ರೇರಣೆಯಿಂದ ಹೋಟೆಲ್ ಬಂದ್ ಮಾಡಿ, ಕ್ಲೀನ್ ಮಾಡುತ್ತಿದ್ದೇವೆ. ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕೈಗೊಂಡ ಕ್ರಮವನ್ನು ಸ್ವಾಗತಿಸುತ್ತೇವೆ. ಅವರಿಗೆ ಎಲ್ಲ ಅಗತ್ಯ ಸಹಕಾರ ನೀಡುತ್ತೇವೆ’ ಎಂದು ವಿ.ವಿ. ಪುರಂ ಫುಡ್ಸ್ಟ್ರೀಟ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಣಿಕಂಠ ಹೇಳುತ್ತಾರೆ.

‘ಹೋಟೆಲ್ ಎಲ್ಲ ಸಿಬ್ಬಂದಿಗೂ ಮಾಸ್ಕ್, ಗ್ಲೌವ್ಸ್, ಏಪ್ರಾನ್, ತಲೆಗೆ ಟೊಪ್ಪಿಗೆ ಧರಿಸುವಂತೆ ಬಿಬಿಎಂಪಿ ಸಿಬ್ಬಂದಿ ಸೂಚಿಸಿದ್ದಾರೆ. ಹೋಟೆಲ್ನಲ್ಲಿಯೇ ಹಸಿ ಮತ್ತು ಒಣ ಕಸ ವಿಂಗಡಿಸುವಂತೆ ಮತ್ತು ಗ್ರಾಹಕರಿಗೆ ಬಿಸಿ ನೀರು ಪೂರೈಸುವಂತೆ ತಾಕೀತು ಮಾಡಿದ್ದಾರೆ. ಈ ಎಲ್ಲ ಷರತ್ತುಗಳಿಗೂ ಒಪ್ಪಿಗೆ ಸೂಚಿಸಿದ್ದೇವೆ. ಜತೆಗೆ ಹೆಚ್ಚುವರಿಯಾಗಿ ನಾವೂ ಒಂದಿಷ್ಟು ಸ್ವಚ್ಛತಾ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇವೆ’ ಎಂದು ವಾಸವಿ ಹೋಟೆಲ್ ಮಾಲೀಕ ಶಿವಕುಮಾರ್ ಧ್ವನಿಗೂಡಿಸಿದರು.

‘ಅಧಿಕಾರಿಗಳ ಸೂಚನೆಯಂತೆ ಹೋಟೆಲ್ಗಳಲ್ಲಿ ವಾಷ್ ಬೇಸಿನ್ ಅಳವಡಿಸಲಾಗುತ್ತಿದೆ. ಬಿಬಿಎಂಪಿ ಮಾಗರ್ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಮ್ಮ ಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಅವರು ‘ಮೆಟ್ರೊ’ಗೆ ತಿಳಿಸಿದರು.

‘ದಿಢೀರ್ ದಾಳಿ ನಡೆಸಿ ಬೀಗ ಹಾಕಿಲ್ಲ. ಹೋಟೆಲ್ ವಹಿವಾಟಿಗೆ ಅಡ್ಡಿಪಡಿಸುವ ಉದ್ದೇಶವೂ ಇಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಶುಚಿತ್ವ ಕಾಪಾಡುವಂತೆ ಫುಡ್ಸ್ಟ್ರೀಟ್ ಹೋಟೆಲ್ಗಳಿಗೆ ಸಾಕಷ್ಟು ಮುಂಚೆಯೇ ನೋಟಿಸ್ ನೀಡಲಾಗಿತ್ತು. ಅಡುಗೆ ತಯಾರಿಸುವ ಸ್ಥಳಗಳು ತುಂಬಾ ಗಲೀಜಾಗಿದ್ದವು. ಅಡುಗೆ ಮನೆಯಲ್ಲಿಯೇ ಪಾತ್ರೆ, ಪ್ಲೇಟ್ ತೊಳೆಯಲಾಗುತ್ತಿತ್ತು. ಅಡುಗೆ ಮನೆಯಲ್ಲಿಯೇಕೊಳಚೆ ನೀರು ಹರಿಯುತ್ತಿತ್ತು. ಕೋವಿಡ್ 19 ಮತ್ತು ಕಾಲರಾ ಭೀತಿ ಹಿನ್ನೆಲೆಯಲ್ಲಿ ಸ್ವಚ್ಛತೆ ವಿಷಯದಲ್ಲಿ ರಾಜಿ ಇಲ್ಲ’ ಎನ್ನುತ್ತಾರೆ ಆರೋಗ್ಯಾಧಿಕಾರಿಗಳಾದ ಡಾ. ದಾಕ್ಷಾಯಿಣಿ ಮತ್ತು ಡಾ. ಶಿವಕುಮಾರ್.

‘ಶಾಸಕ ಗರುಡಾಚಾರ್, ಕಾರ್ಪೊರೇಟರ್ ವಾಣಿ ವಿ. ರಾವ್ ಮತ್ತು ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಕೊರೊನಾ ಸೋಂಕು ಮತ್ತು ಕಾಲರಾ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಅದನ್ನು ನಾವೂ ಒಪ್ಪಿದ್ದೇವೆ.ಬಿಬಿಎಂಪಿ ಅಧಿಕಾರಿಗಳು 15 ದಿನ ಕಾಲಾವಕಾಶ ನೀಡಿದ್ದಾರೆ. ಅಷ್ಟು ದಿನ ಹೋಟೆಲ್ ಮುಚ್ಚಿದರೆ ಆಗುವ ನಷ್ಟ ಭರಿಸುವರು ಯಾರು? ಪ್ರತಿ ದಿನ ₹10 ಲಕ್ಷ ವಹಿವಾಟು ನಷ್ಟವಾಗುತ್ತಿದೆ. ಸೋಮವಾರದಿಂದ (ಮಾರ್ಚ್ 16ರಿಂದ) ಹೋಟೆಲ್ ತೆರೆಯಲು ತೀರ್ಮಾನಿಸಲಾಗಿದೆ’ ಎಂದು ಸಂಘದ ಖಜಾಂಚಿ ಮತ್ತು ದೇವಸಾಗರ ಹೋಟೆಲ್ ಮಾಲೀಕ ಜೀತೆಂದ್ರ ಕುಮಾರ್ ತಿಳಿಸಿದರು.

ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಂಡ ಮಾರ್ಷಲ್ ಮತ್ತು ಪೊಲೀಸರ ಸಹಾಯದಿಂದ ಮಾರ್ಚ್ 11ರಂದು ಫುಡ್ಸ್ಟ್ರೀಟ್ನ 23 ಹೋಟೆಲ್ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಆ ಪೈಕಿ ಶುಚಿತ್ವ ಕಾಯ್ದುಕೊಳ್ಳದ 13 ಹೋಟೆಲ್ಗಳಿಗೆ ನೋಟಿಸ್ ನೀಡಿ, ಬೀಗ ಜಡಿಯಲಾಗಿದೆ. ₹65 ಸಾವಿರ ದಂಡ ವಸೂಲಿ ಮಾಡಲಾಗಿದೆ

– ಬಿಬಿಎಂಪಿ ಕಮಿಷನರ್

ಎಂ..ಜಿ. ರಸ್ತೆ ಹೇಗಾಗಬೇಕು?

ಫುಡ್ಸ್ಟ್ರೀಟ್ ಅನ್ನು ಎಂ.ಜಿ. ರಸ್ತೆ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಒಳಚರಂಡಿಗಳು ಕಟ್ಟಿಕೊಂಡು ಚೇಂಬರ್ ತುಂಬಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಸಹಿಸಲು ಅಸಾಧ್ಯವಾದ ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. ದುರಸ್ತಿ ಮಾಡುವಂತೆ ಬಿಬಿಎಂಪಿಗೆ ದೂರು ನೀಡಿ ಒಂದು ತಿಂಗಳಾಯಿತು. ಏನೂ ಪ್ರಯೋಜನವಾಗಿಲ್ಲ. ಹೀಗಾದರೆ ಗ್ರಾಹಕರು ಹೇಗೆ ಇಲ್ಲಿಗೆ ಬರಬೇಕು

–ಶಿವಕುಮಾರ್, ವಾಸವಿ ಹೋಟೆಲ್ ಮಾಲೀಕ

ಕಾಲರಾ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಾರ್ವಜನಿಕರ ಆರೋಗ್ಯ ಮುಖ್ಯ.

– ಪಾಲಿಕೆ ಆರೋಗ್ಯ ಅಧಿಕಾರಿಗಳು

ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಂಡ ಮಾರ್ಷಲ್ ಮತ್ತು ಪೊಲೀಸರ ಸಹಾಯದಿಂದ ಮಾರ್ಚ್ 11ರಂದು ಫುಡ್ಸ್ಟ್ರೀಟ್ನ 23 ಹೋಟೆಲ್ಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದ್ದಾರೆ. ಆ ಪೈಕಿ ಶುಚಿತ್ವ ಕಾಯ್ದುಕೊಳ್ಳದ 13 ಹೋಟೆಲ್ಗಳಿಗೆ ನೋಟಿಸ್ ನೀಡಿ, ಬೀಗ ಹಾಕಲಾಗಿದೆ ಮತ್ತು ₹65 ಸಾವಿರ ದಂಡ ವಸೂಲಿ ಮಾಡಲಾಗಿದೆ.
–ಬಿ.ಎಚ್. ಅನಿಲ್ಕುಮಾರ್, ಬಿಬಿಎಂಪಿ ಕಮಿಷನರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.