ನವದೆಹಲಿ: ಕೋವಿಡ್ –19 ಸೋಂಕು ತಗುಲಿದ್ದ ಮಕ್ಕಳಲ್ಲಿ ಟೈಪ್ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಂಶವು ಅಧ್ಯಯನ ಮೂಲಕ ತಿಳಿದುಬಂದಿದೆ ಎಂದು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ವರದಿ ಮಾಡಿದೆ.

ಸೋಂಕಿಗೆ ಒಳಗಾದ ಮಕ್ಕಳಲ್ಲಿ ಆರಂಭಿಕ ಹಂತದಲ್ಲಿ ಟೈಪ್ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಭವಿಷ್ಯದಲ್ಲಿ ಅದರ ತೀವ್ರತೆ ಹೆಚ್ಚಾಗಲಿದೆ ಎಂದು ವರದಿಯಾಗಿದೆ.

ಟೈಪ್ –1 ಮಧುಮೇಹ ಲಕ್ಷಣಗಳೆಂದರೆ, ಅಸಹಜ ಬಾಯಾರಿಕೆ ಮತ್ತು ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ದೃಷ್ಟಿ ಮಸುಕಾಗುವುದು, ಸುಸ್ತು ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್ ಥೆರಪಿ ಮತ್ತು ಚುಚ್ಚುಮದ್ದು ಪಡೆಯುವುದೇ ಇದಕ್ಕಿರುವ ಚಿಕಿತ್ಸೆ ಎನ್ನಲಾಗಿದೆ

ಹಿಂದಿನ ಅಧ್ಯಯನಗಳಲ್ಲಿ, ಕೋವಿಡ್–19ಗೆ ಒಳಗಾದ ಮಕ್ಕಳಲ್ಲಿ ಐಸ್ಲೆಟ್ ಪ್ರತಿಕಾಯಗಳು ಕಂಡುಬಂದಿವೆ. ಮೇದೋಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು ಹಾನಿಗೊಳಗಾದಾಗ ಇವು ಉತ್ಪತ್ತಿಯಾಗುತ್ತದೆ. ಒಬ್ಬರ ರಕ್ತದ ಮಾದರಿಗಳಿಂದ ಈ ಸ್ವಯಂ ಪ್ರತಿಕಾಯಗಳು ಟೈಪ್ 1 ಮಧುಮೇಹವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ ಎಂದು ತಿಳಿದುಬಂದಿದೆ.

ಈ ಅಧ್ಯಯನದಲ್ಲಿ ಸಂಶೋಧಕರು ಜರ್ಮಿನಿಯ ಇನ್ಸ್ಟಿಟ್ಯೂಟ್ ಆಫ್ ಡಯಾಬಿಟೀಸ್ ರಿಸರ್ಚ್, ಹೆಮೊಟ್ ಮ್ಯುನಿಕ್ ವರದಿಯನ್ನೂ ಸೇರಿಸಿದ್ದಾರೆ. ಇವರ ಪ್ರಕಾರ, ಅದಾಗಲೇ ಲಕ್ಷಣರಹಿತ ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದರೆ, ಅಂಥವರಲ್ಲಿ ಮಧುಮೇಹದ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.