ಮಕ್ಕಳು ತಪ್ಪು ಮಾಡಿದರೆ, ತುಂಟತನ ಮಾಡಿದರೆ ಶಿಕ್ಷಿಸುವುದಕ್ಕಿಂತ ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ತಿಳಿಸಿ ಹೇಳಬೇಕು. ಎಷ್ಟು ಮಂದಿ ಪೋಷಕರು ತಾಳ್ಮೆ ಕಳೆದುಕೊಳ್ಳದೇ ಈ ರೀತಿ ತಿಳಿವಳಿಕೆ ಹೇಳುತ್ತಾರೆ?

‘ಬರಿ ಮಾತಿಗೆಲ್ಲ ಜಗ್ಗಲ್ಲ ನನ್ನ ಮಗ. ನಿನ್ನೆಯೂ ಹೋಂವರ್ಕ್ ಮಾಡಿರಲಿಲ್ಲ. ಕೋಪ ನೆತ್ತಿಗೇರಿತ್ತು, ಹೊಡೆಯೋಣ ಅಂದ್ರೆ ನಂಗೆ ಪೆಟ್ಟಾಗುತ್ತೆ. ಅದಕ್ಕೆ ಮೇಣದ ಬತ್ತಿ ತಗೊಂಡು ಕೈಮೇಲೆ ಜಿನುಗಿಸಿದ್ದೆ. ಇವತ್ತು ಹೋಂವರ್ಕ್ ಮಾಡಿರ್ತಾನೆ’ ಎಂದು ಹೇಳುವಾಗ ಸಹೋದ್ಯೋಗಿ ಸುನೀತಾ ಮುಖದಲ್ಲಿ ಮಗನಿಗೆ ಕೊಟ್ಟ ಶಿಕ್ಷೆ ಸರಿಯಿದೆ ಎಂಬ ಭಾವವಿತ್ತು.

ಮಕ್ಕಳಿಗೆ ಹೊಡೆದರೆ, ಹೆದರಿಸಿದರೆ ಮಾತ್ರ ಹೇಳಿದ್ದನ್ನು ಕೇಳುವುದು ಎನ್ನುವ ಅಭಿಪ್ರಾಯ ಬಹಳ ಮಂದಿಯಲ್ಲಿದೆ. ಸಾಮಾನ್ಯವಾಗಿ ಶಿಕ್ಷೆಯಲ್ಲಿ ಎರಡು ರೀತಿ. ಒಂದು ಭಾವನಾತ್ಮಕ (ಎಮೋಷನಲ್) ಮತ್ತೊಂದು ದೈಹಿಕ ಶಿಕ್ಷೆ. ಭಾವನಾತ್ಮಕವಾಗಿ ಎಂದರೆ ನಿಂದಿಸುವುದು. ‘ನಿನ್ನಿಂದ ಏನೂ ಆಗಲ್ಲ, ನೀನೊಬ್ಬ ಅಪ್ರಯೋಜಕ, ನಿನ್ನ ಯೋಗ್ಯತೆಯೇ ಇಷ್ಟು’ ಹೀಗೆ.. ಇನ್ನು ದೈಹಿಕವಾಗಿ ಅಂದರೆ ಹೊಡೆಯವುದು. ಬೆರಳೆಣಿಕೆಯ ಉದಾಹರಣೆಗಳನ್ನು ಬಿಟ್ಟು ಇಂತಹ ಶಿಕ್ಷೆಯಿಂದ ನಡವಳಿಕೆಯನ್ನು ಬದಲಿಸಿಕೊಂಡ ಮಕ್ಕಳೆಷ್ಟು ಅಂದರೆ ಉತ್ತರಿಸುವುದು ಸ್ವಲ್ಪ ಕಷ್ಟ. ತಾಳ್ಮೆಯನ್ನು ಕಳೆದುಕೊಳ್ಳದೆ, ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ಶಿಕ್ಷಿಸುವುದೂ ಒಂದು ಕಲೆ.

ಹೀಗೂ ಶಿಕ್ಷಿಸಬಹುದು..

ವ್ಯಾಯಾಮ: ಮಗು ಏನಾದರೂ ತಪ್ಪು ಮಾಡಿದರೆ ಹೊಡೆಯುವ ಬದಲು ವಯಸ್ಸಿಗನುಗುಣವಾಗಿ ವ್ಯಾಯಾಮವನ್ನು ಮಾಡಿಸಿ. ಶಿಕ್ಷಿಸುವ ಉದ್ದೇಶ ಒಂದಾದರೆ ಅದರಿಂದಾಗುವ ಉಪಯೋಗ ಹಲವು.

ಮನೆಗೆಲಸ: ಸುಮಾರು 20–25 ಸಣ್ಣಪುಟ್ಟ ಮನೆಗೆಲಸಗಳನ್ನು ಪಟ್ಟಿ ಮಾಡಿ ಒಂದೊಂದಕ್ಕೂ ನಿರ್ದಿಷ್ಟ ಅಂಕಗಳನ್ನು ನಿಗದಿಪಡಿಸಿ. ಮಗು ತಪ್ಪು ಮಾಡಿದಾಗ ಮನೆಗೆಲಸಗಳನ್ನು ಮಾಡುವ ಮೂಲಕ ಅಂಕಗಳನ್ನು ಗಳಿಸಲು ಹೇಳಿ. ಉದಾಹರಣೆಗೆ ಮಕ್ಕಳು ಸ್ನೇಹಿತರಿಗೋ, ತಮ್ಮ ತಂಗಿಯರಿಗೋ ಹೊಡೆದರೆ ಮನೆಗೆಲಸಗಳನ್ನು ಮಾಡುವ ಮೂಲಕ ಅಂಕಗಳನ್ನು ಸಂಪಾದಿಸುವವರೆಗೂ ಮತ್ತೆ ಅವರೊಟ್ಟಿಗೆ ಆಡಲು ಬಿಡುವುದಿಲ್ಲವೆಂದು ತಾಕೀತು ಮಾಡಿ.

ಮಗುವಿನ ತುಂಟತನ ಹೆಚ್ಚಾದರೆ ಲಿವಿಂಗ್ ಹಾಲ್ನ ಒಂದು ಕಾರ್ನರ್ನಲ್ಲಿ ನಿರ್ದಿಷ್ಟ ಸಮಯದವರೆಗೂ ಸುಮ್ಮನೆ ಕೂರಿಸಿ. ಮಕ್ಕಳಿಗೆ ಸುಮ್ಮನೆ ಕೂರುವುದಕ್ಕಿಂತ ಬಹುದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಆ ಭಯಕ್ಕಾದರೂ ಮಗು ತುಂಟತನ ಮಾಡುವುದನ್ನು ಕಡಿಮೆ ಮಾಡುತ್ತದೆ.

ಸಮಯದ ನಿಗದಿ: ಯಾವುದೇ ಕೆಲಸಗಳಿಗೆ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ ವಯಸ್ಸಿಗನುಗುಣವಾಗಿ ನೀವೇ ಸಮಯವನ್ನು ನಿಗದಿಪಡಿಸಿ. ನಿರ್ದಿಷ್ಟ ಸಮಯದಲ್ಲಿ ಕೆಲಸ ಮುಗಿಸದಿದ್ದರೆ ಅವರ ನೆಚ್ಚಿನ ವಿಷಯಗಳಿಂದ ವಂಚಿತರಾಗುವಿರಿ ಎಂಬುದನ್ನು ತಿಳಿಹೇಳಿ. ಉದಾಹರಣೆಗೆ ನೆಚ್ಚಿನ ಕಾರ್ಟೂನ್, ವಿಡಿಯೋ ಗೇಮ್, ಪಾರ್ಕ್ನಲ್ಲಿನ ಆಟ ಇತ್ಯಾದಿ.

ಮಕ್ಕಳು ಶಾಲೆಯಲ್ಲಿನ ಕಲಿಕೆಯಲ್ಲಿ ಹಿಂದುಳಿದಿದ್ದರೆ ಅಥವಾ ಹೋಂವರ್ಕ್ ಅನ್ನು ಸರಿಯಾದ ಸಮಯದಲ್ಲಿ ಮುಗಿಸದಿದ್ದರೆ ಅಂತಹ ಮಕ್ಕಳಿಗೆ ಮನೆಯಲ್ಲಿ ಇನ್ನಷ್ಟು ಸಮಯವನ್ನು ನೀಡಿ. ವರ್ಕ್ ಶೀಟ್ಗಳನ್ನೂ ಬಳಸಬಹುದು.

ಶಿಕ್ಷೆಯ ಜಾರ್: ಒಂದಷ್ಟು ಸೃಜನಾತ್ಮಕ ಚಟುವಟಿಕೆಗಳನ್ನೋ, ಗಿಡಗಳಿಗೆ ನೀರು ಹಾಕುವಂತಹ ಕೆಲಸಗಳನ್ನೋ ಮಕ್ಕಳೊಟ್ಟಿಗೆ ಕೂತು ಚರ್ಚಿಸಿ ಚೀಟಿಯಲ್ಲಿ ಬರೆದು ಡಬ್ಬಿಯಲ್ಲಿ ಹಾಕಿಡಿ. ಶಿಕ್ಷೆಯ ವಿಚಾರ ಬಂದಾಗ ಚೀಟಿಯೊಂದನ್ನು ತೆಗೆದು ಅದರಲ್ಲಿ ಬರೆದಿರುವುದನ್ನು ಮಾಡಲು ಹೇಳಿ.

ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ವಿನಾಕಾರಣ ಹಠ ಮಾಡುತ್ತಿದ್ದರೆ, ನೋಡಿದ್ದೆಲ್ಲವನ್ನೂ ಕೊಡಿಸುವಂತೆ ಪೀಡಿಸುತ್ತಿದ್ದರೆ ಎಲ್ಲರ ಮುಂದೆ ಕೂಗಾಡಿ ಹೊಡೆಯದಿರಿ. ಮನೆಯಿಂದ ಹೊರಡುವಾಗಲೆ ಮಕ್ಕಳಿಗೆ ಹೊರಗೆ ಹೋಗುತ್ತಿರುವ ಕಾರಣವನ್ನು ತಿಳಿಸಿ, ಹೇಳಿದ್ದನ್ನು ಕೇಳುವಂತೆ ತಾಕೀತು ಮಾಡಿ.

ಸಮಾಧಾನವೂ ಬೇಕು: ಎಲ್ಲ ಸಮಯದಲ್ಲೂ ಮಕ್ಕಳಿಗೆ ಶಿಕ್ಷೆ ನೀಡುವುದೇ ಪರಿಹಾರವಲ್ಲ. ಹಟ, ಮೊಂಡಾಟಕ್ಕೆ ಸಮಾಧಾನವೂ ಒಂದು ರೀತಿಯ ಮದ್ದು. ಪಾರ್ಕ್ನಲ್ಲಿ ಸುತ್ತಾಡಿಸಿ, ಮನೆಯಲ್ಲಿ ಸಾಕು ನಾಯಿಯಿದ್ದರೆ ಅದನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಸಮಾಧಾನಪಡಿಸಿ.

ಮಕ್ಕಳು ಮನೆಯಲ್ಲಿನ ವಸ್ತುಗಳನ್ನು, ಆಟದ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡುತ್ತಿದ್ದರೆ ಆಟವಾದ ನಂತರ ಅವರಿಂದಲೇ ಕೋಣೆಯನ್ನು ಶುಚಿಗೊಳಿಸಿ. ಹೇಳಿದ್ದನ್ನು ಕೇಳದಿದ್ದರೆ ಅವರ ನೆಚ್ಚಿನ ಆಟದ ವಸ್ತುಗಳನ್ನು ಬಚ್ಚಿಡಿ, ಶುಚಿಗೊಳಿಸಿದ ನಂತರ ಕೊಡುವುದಾಗಿ ಹೇಳಿ. ಅದಕ್ಕೋಸ್ಕರವಾದರೂ ಮಕ್ಕಳು ಹೇಳಿದ್ದನ್ನು ಮಾಡುತ್ತಾರೆ. ಅಭ್ಯಾಸವಾದ ನಂತರ ನಿಮ್ಮ ಗೈರುಹಾಜರಿಯಲ್ಲೂ ಅವರೇ ಕೋಣೆಯನ್ನು ಶುಚಿಯಾಗಿಡುತ್ತಾರೆ.

ಕೂತು ಮಾತಾಡುವ ಮುಖಾಂತರವೂ ಸಾಕಷ್ಟು ಬದಲಾವಣೆಗಳನ್ನು ಮಕ್ಕಳ ನಡವಳಿಕೆಯಲ್ಲಿ ತರಬಹುದು. ಪರಿಸ್ಥಿತಿಗೆ ಸರಿಹೊಂದುವಂತಹ ಕಥೆಗಳನ್ನು ಹೇಳಿ ಅಥವಾ ನಿಮ್ಮ ಅನುಭವಕ್ಕೆ ಬಂದಿರುವ ನೈಜ ಘಟನೆಗಳ ಉದಾಹರಣೆಗಳನ್ನು ಕೊಡುವ ಮುಖಾಂತರವೂ ಅವರ ಮನಸ್ಸನ್ನು ಪರಿವರ್ತಿಸಬಹುದು.

ಭಾವನಾತ್ಮಕ ಶಿಕ್ಷೆಗೆ ಸೂಕ್ತ ಉದಾಹರಣೆಯಂತಿದ್ದ ಪೋಟೊ ಒಂದು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಭಿಕ್ಷುಕನನ್ನು ತೋರಿಸುತ್ತಾ ಮಗನಿಗೆ ‘ನೀನು ಚೆನ್ನಾಗಿ ಓದದಿದ್ರೆ ಇವನಂತೆ ಆಗುತ್ತೀಯಾ’ ಎಂದು ನಿಂದಿಸುತ್ತಿರುವ ತಾಯಿ ಒಂದೆಡೆಯಾದರೆ, ‘ನೀನು ಚೆನ್ನಾಗಿ ಓದಿದರೆ ಇಂತಹವರಿಗೆ ಸಹಾಯ ಮಾಡಬಹುದು’ ಎಂದು ಪ್ರೇರೇಪಿಸುವ ತಾಯಿ ಮತ್ತೊಂದೆಡೆ. ವಿಚಾರ ಒಂದೇ ಆದರೂ ಹೇಳುವ ರೀತಿ ಬದಲಾಗಿದೆ ಅಷ್ಟೆ. ಶಿಕ್ಷಿಸುವ ವಿಷಯದಲ್ಲೂ ನಾವು ಮಾಡಬೇಕಿರುವುದು ಇದೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.