ಡಾ ಉಷಾ ಬಿಆರ್, (ಸಮಾಲೋಚಕರು - OBGYN, ಫಲವತ್ತತೆ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್, ಫೋರ್ಟಿಸ್ ಆಸ್ಪತ್ರೆ)

ಕ್ಯಾನ್ಸರ್ ಇಂದಿಗೂ ಅತ್ಯಂತ ಭಯಾನಕ ರೋಗಗಳಲ್ಲಿ ಒಂದು, ಅದರಲ್ಲೂ ತಾಯಿಯಾಗುವ ಬಯಕೆ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್‌ನಂತಹ ಕಾಯಿಲೆ ತಗುಲಿದರೆ ತಾವು ಭವಿಷ್ಯದಲ್ಲಿ ಎಂದಿಗೂ ಗರ್ಭವತಿಯಾಗಲು ಸಾಧ್ಯವಿಲ್ಲವೇ? ಈ ಜನ್ಮದಲ್ಲಿ ಮಗು ಪಡೆಯಲು ಆಗುವುದಿಲ್ಲವೇ? ಎಂಬ ಭಯ ಕಾಡತೊಡಗುತ್ತದೆ. ಆದರೆ, ಕ್ಯಾನ್ಸರ್ ಬಂದ ಮಹಿಳೆಯೂ ಸಹ ಎಗ್ ಫ್ರೀಜಿಂಗ್ ಮಾಡುವ ಮೂಲಕ ತಮ್ಮ 'ಫಲವತ್ತತೆ'ಯ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದು, ಇದರಿಂದ ಭವಿಷ್ಯದಲ್ಲಿ ಈ ಎಗ್ ಫ್ರೀಜಿಂಗ್‌ನಿಂದ ತನ್ನದೇ ಆರೋಗ್ಯಕರ ಮಗುವನ್ನು ಪಡೆದುಕೊಳ್ಳಲು ಆ ಮಹಿಳೆ ಶಕ್ತಳಾಗಿರುತ್ತಾಳೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ವೈದ್ಯರು ವಿವರಿಸಿದ್ದಾರೆ.

ಏನಿದು ಎಗ್ ಫ್ರೀಜಿಂಗ್?

ಎಗ್ ಫ್ರೀಜಿಂಗ್ ಅಂದರೆ, ನಮ್ಮದೇ ದೇಹದಲ್ಲಿರುವ ಅಂಡಾಣುಗಳನ್ನು ದೇಹದಿಂದ ಹೊರತೆಗೆದು ಶೀತಲೀಕರಣ ಮಾಡುವ ಮೂಲಕ ಸಂರಕ್ಷಿಸಿಕೊಳ್ಳುವುದು. ಸದ್ಯಕ್ಕೆ ಮಗು ಬೇಡವೆಂದುಕೊಳ್ಳುವ ಯಾವುದೇ ಮಹಿಳೆಯು ೩೦ ವರ್ಷ ಒಳಗಾಗಿ ತಮ್ಮಲ್ಲಿರುವ ಫಲವತ್ತಾದದ ಅಂಡಾಣುಗಳನ್ನು ವೈದ್ಯರ ಸಹಾಯದ ಮೇರೆಗೆ ಘನೀಕರಿಸಿ ಇಡಬಹುದು. ಭವಿಷ್ಯದಲ್ಲಿ ಅಂದರೆ ವಯಸ್ಸಾದ ಬಳಿಕ ಈ ಘನೀಕರಿಸಿ ಇಟ್ಟಂತಹ ಅಂಡಾಣುಗಳ ಸಹಾಯದಿಂದ ಮಗುವನ್ನು ಪಡೆದುಕೊಳ್ಳಬಹುದು. ಹೀಗೆ ಫ್ರೀಜ್ ಮಾಡಿ ಆಸ್ಪತ್ರೆಗಳಲ್ಲಿ ಇಡಲಾಗುವ ಅಂಡಾಣುಗಳು ಕನಿಷ್ಠ ೧೦ ವರ್ಷಗಳ ವರೆಗೂ ಅದರ ಗುಣಮಟ್ಟವನ್ನು ಕಳೆದುಕೊಳ್ಳುವುದಿಲ್ಲ. ಮಹಿಳೆಯು ತನ್ನ ೪೦ನೇ ವಯಸ್ಸಿನಲ್ಲಿಯೂ ಗುಣಮಟ್ಟದ ಅಂಡಾಣುಗಳಿಂದ ಆರೋಗ್ಯಕರ ಮಗುವನ್ನು ಪಡೆದುಕೊಳ್ಳಬಹುದು.

ಎಗ್ ಫ್ರೀಜಿಂಗ್‌ನ ಲಾಭವೇನು?

ಸಾಮಾನ್ಯವಾಗಿ ಮಹಿಳೆಯರು ತಮ್ಮ ವೃತ್ತಿ ಬದುಕು, ಶಿಕ್ಷಣ ಅಥವಾ ಇತರೆ ಆರೋಗ್ಯ ಸಮಸ್ಯೆಯಿಂದ ೩೦ನೇ ವಯಸ್ಸಿನೊಳಗೆ ಮಗು ಪಡೆಯಲು ಸಾಧ್ಯವಾಗುವುದಿಲ್ಲ, ವಯಸ್ಸಾಗುತ್ತಿದ್ದಂತೆ ತನ್ನಲ್ಲಿರುವ ಅಂಡಾಣುಗಳ ಗುಣಮಟ್ಟವೂ ಕುಸಿಯುತ್ತಿರುತ್ತದೆ, ಅಂತಹ ಮಹಿಳೆಯರು ತಮ್ಮ ಗುಣಮಟ್ಟದ ಅಂಡಾಣುಗಳನ್ನು ಸಣ್ಣ ವಯಸ್ಸಿನಲ್ಲಿಯೇ ಘನೀಕರಿಸುವ ಮೂಲಕ ಶೇಖರಿಸಬಹುದು, ಇದನ್ನೇ ಎಗ್ ಫ್ರೀಜಿಂಗ್ ಎನ್ನಲಾಗುವುದು, ಇತ್ತೀಚೆಗೆ ಇದೊಂದು ಟ್ರೆಂಡಿಂಗ್ ಆಗಿದ್ದು, ನಟಿಯರು, ಸೆಲೆಬ್ರೆಟೀಸ್ ಹೀಗೆ ಸಾಕಷ್ಟು ಜನರು ಎಗ್ ಫ್ರೀಜಿಂಗ್‌ನ ಮೊರೆ ಹೋಗುತ್ತಾರೆ. ಇತ್ತೀಚೆಗೆ ತೆಲುಗು ನಟ ರಾಮ್‌ಚರಣ್ ಅವರ ಪತ್ನಿಯೂ ಸಹ ಮೊದಲೇ ಮಾಡಿಸಿದ್ದ ಎಗ್‌ಫ್ರೀಜಿಂಗ್‌ನಿಂದ ಇತ್ತೀಚೆಗೆ ಮಗು ಪಡೆದುಕೊಂಡಿದ್ದು ಸುದ್ದಿಯಾಗಿತ್ತು.

ಎಗ್ ಫ್ರೀಜಿಂಗ್ ಸಾಧ್ಯವಾಗುವುದು ಹೇಗೆ?

ವೆಟ್ರಿಫಿಕೇಶನ್ ತಂತ್ರದ ಸಹಾಯದಿಂದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಗ್ ಫ್ರೀಜಿಂಗ್ ಸಾಕಷ್ಟು ವಿಧಾನಗಳು ವೈದ್ಯಕೀಯ ಲೋಕದಲ್ಲಿ ಕಂಡು ಬರಲಿದೆ, ಅದರಲ್ಲಿ ಪ್ರಮುಖವಾಗಿ ಕ್ರಯೋಪ್ರೆಸರ್ವೇಶನ್ (cryopreservation), ಎಂಬ್ರೋಯ್ ಫ್ರೀಜಿಂಗ್ ( Embryo freezing), ಗೊನಾಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ ಅಗೊನಿಸ್ಟ್ಸ್ (GnRHa) ಚಿಕಿತ್ಸೆ Gonadotropin-releasing hormone agonists (GnRHa) therapy ಈ ವಿಧಾನಗಳ ಮೂಲಕ ಫಲವತ್ತತೆಯನ್ನು ಸಂರಕ್ಷಿಸಬಹುದು. ಈ ಮೂರು ವಿಧಾನಗಳು ವಿಭಿನ್ನವಾಗಿದೆ, ಅವರ ಆರೋಗ್ಯದ ಅನುಗುಣಕ್ಕೆ ತಕ್ಕಂತೆ ಈ ವಿಧಾನಗಳ ಮೂಲಕ ತಮ್ಮ ಫಲವತ್ತತೆಯನ್ನು ಘನೀಕರಿಸಲಾಗುವುದು.

ಕ್ಯಾನ್ಸರ್ ಮಹಿಳೆಯರಿಗೂ ಇದು ವರದಾನ: ಕೆಲವು ಮಹಿಳೆಯರು ವಯಸ್ಸಿಗೂ ಮುನ್ನವೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಕೀಮೋಥೆರಪಿ, ಶಸ್ತ್ರಚಿಕಿತ್ಸೆ ಹಾಗೂ ರೇಡಿಯೇಷನ್‌ಗಳಿಗೆ ಒಳಗಾಗುವ ಮುನ್ನ ತನ್ನ ಅಂಡಾಣುಗಳನ್ನು ಸಹ ಘನೀಕರಿಸಿಡಬಹುದು, ಗುಣಮುಖವಾದ ಬಳಿಕ ಆ ಅಂಡಾಣುಗಳನ್ನು ಬಳಸಿಕೊಂಡು ಆರೋಗ್ಯಕರ ಮಗುವನ್ನು ಪಡೆದುಕೊಳ್ಳಬಹುದು. ತಮ್ಮ ಕ್ಯಾನ್ಸರ್ ಅಂಡಾಣುಗಳ ಮೂಲಕ ಮಗುವಿಗೆ ಹರಡುವ ಅಪಾಯವಿಲ್ಲ. ಇನ್ನೂ ಕೆಲವರು, ಬಹುಬೇಗನೇ ಮೆನೋಪಾಸ್‌ಗೆ ಒಳಗಾಗುವ ಮಹಿಳೆಯರು ಸಹ ಈ ವಿಧಾನದ ಪ್ರಯೋಜನ ಪಡೆದುಕೊಳ್ಳಬಹುದು.

ಯಾವ ವಯಸ್ಸಿನೊಳಗೆ ಶೇಖರಣೆ ಮಾಡಬಹುದು:

ಎಗ್‌ಫ್ರೀಜಿಂಗ್ ಪ್ರಕ್ರಿಯೆಗೆ ಒಳಗಾಗಲು ಬಯಸುವ ಮಹಿಳೆಯು ೩೫ ವರ್ಷ ಆಗುವ ಒಳಗೆ ಸಂರಕ್ಷಿಸಿಟ್ಟುಕೊಂಡರೆ ಉತ್ತಮ ಎನ್ನಲಾಗುತ್ತದೆ. ೩೦ನೇ ವಯಸ್ಸಿನ ಒಳಗೆ ಇಟ್ಟುಕೊಳ್ಳುವುದು ಇನ್ನೂ ಸೂಕ್ತ. ಏಕೆಂದರೆ ವಯಸ್ಸಾಗುತ್ತಲೇ ಗುಣಮಟ್ಟದ ಅಂಡಾಣು ಪ್ರಮಾಣ ಕುಸಿಯಲಿದೆ, ತಾಯಿಯಾಗುವ ಸಾಧ್ಯತೆ ಕ್ಷೀಣಿಸಬಹುದು. ಸಾಮಾನ್ಯವಾಗಿ ಗರ್ಭಧಾರಣೆಗೆ ೬ ರಿಂದ ೮ ಅಂಡಾಣುಗಳು ಬೇಕಾಗುತ್ತದೆ, ಆದರೆ, ೩೫ ವಯಸ್ಸಿನ ಒಳಗಿನವರು ಒಂದು ಆವೃತ್ತಿಗೆ ೧೦-೧೫ ಅಂಡಾಣುಗಳನ್ನು ಶೇಖರಿಸಿದರೆ ಒಳಿತು.

ಇನ್ನು, ಈ ಮೊದಲೇ ಫ್ರೀಜ್ ಮಾಡಲಾದ ಎಗ್ ಬಳಸಿ ೪೦ನೇ ವಯಸ್ಸಿನಲ್ಲೂ ಮಹಿಳೆ ಮಗು ಪಡೆದರೂ ಆ ಮಗು ಆರೋಗ್ಯವಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.