ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂಬುದು ಕೆಲವೊಮ್ಮೆವಂಶವಾಹಿಯ ಮೇಲೆ ಅವಲಂಬಿತವಾಗಿರುತ್ತದೆ. ಪುರುಷನ ವಂಶವಾಹಿ ಮೇಲೆ ಮಗುವಿನ ಲಿಂಗವನ್ನೂ ಅಂದಾಜು ಮಾಡಲಾಗುತ್ತದೆ. ಉದಾಹರಣೆಗೆ, ಒಬ್ಬ ಪುರುಷನಿಗೆ ಸಹೋದರರು ಹೆಚ್ಚಿದ್ದರೆ, ಅವನಿಗೆ ಗಂಡುಮಗು ಹುಟ್ಟುವ ಸಾಧ್ಯತೆಯು ಹೆಚ್ಚಿರುತ್ತದೆ; ಸಹೋದರಿಯರು ಹೆಚ್ಚಿದ್ದರೆ ಅವನಿಗೆ ಹುಟ್ಟುವ ಮಗು ಹೆಣ್ಣು ಆಗಿರುತ್ತದೆ ಎಂದು ಈ ಹಿಂದೆಯೇ ಅಂದಾಜಿಸಿದ್ದರು ಕೆಲವು ಸಂಶೋಧಕರು.

‘ಎವಲ್ಯೂಷನರಿ ಬಯಾಲಜಿ’ ಎಂಬ ಆನ್‍ಲೈನ್ ಜರ್ನಲ್‍ನಲ್ಲಿ ಇದನ್ನೇ ಅನುಕರಿಸಿ ಸಂಶೋಧನೆಯೊಂದು ಪ್ರಕಟಗೊಂಡಿದೆ. ಇದರಲ್ಲಿ ಉತ್ತರ ಅಮೆರಿಕ ಹಾಗೂ ಯುರೋಪ್‍ನ 927 ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕುಟುಂಬಗಳ ಒಟ್ಟಾರೆ 5,56,387 ಜನರನ್ನು ಈ ಅಧ್ಯಯನ ಒಳಗೊಂಡು ಮಾಹಿತಿಯನ್ನು ಕಲೆಹಾಕಲಾಗಿತ್ತು.

ಆದರೆ ವಿಜ್ಞಾನಿಗಳು, ತಂದೆಯ ವಂಶವಾಹಿ ಮಕ್ಕಳ ಲಿಂಗದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶದ ಮೇಲೆ ಇನ್ನೂ ಸ್ಪಷ್ಟ ಸಾಕ್ಷ್ಯಗಳು ದೊರೆತಿಲ್ಲದ ಕಾರಣ ನಿಖರವಾಗಿ ಈ ಅಂಶವನ್ನು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ. ಇವೆಲ್ಲಕ್ಕೂ ಹೊರತಾಗಿ ಎವಲ್ಯೂಷನ್ ಬಯಾಲಜಿ ಅಧ್ಯಯನವು ಇತಿಹಾಸದ ಒಂದು ಅಂಶದೊಂದಿಗೆ ವೈಜ್ಞಾನಿಕವಾಗಿ ಅಂದಾಜು ಮಾಡಿತು.

ಮೊದಲನೇ ವಿಶ್ವಯುದ್ಧದ ನಂತರ ಗಂಡುಮಕ್ಕಳ ಜನನದ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡ ಒಂದು ಅಂಶದೊಂದಿಗೆ ವಂಶವಾಹಿಯ ಹಿನ್ನೆಲೆಯನ್ನು ಬಿಡಿಸಿಡಲು ಪ್ರಯತ್ನಿಸಿತು.

ಮಹಿಳೆಯು ಯಾವಾಗಲೂ ಮಗುವಿಗೆ ತನ್ನ ಅಂಡಾಣುವಿನಿಂದ ‘ಎಕ್ಸ್ ಕ್ರೋಮೊಸೋಮ್’ ಅನ್ನು ರವಾನೆ ಮಾಡುತ್ತಾಳೆ. ಆದರೆ ಪುರುಷ ವೀರ್ಯದ ಮೂಲಕ ಎಕ್ಸ್ ಕ್ರೋಮೊಸೋಮ್ ಅನ್ನು ರವಾನಿಸುವ ಮೂಲಕ ಹೆಣ್ಣುಮಗುವನ್ನು, ‘ವೈ ಕ್ರೋಮೊಸೋಮ್’ನ ಮೂಲಕ ಗಂಡುಮಗುವನ್ನು ಪಡೆಯಬಹುದು.

ಜನನಸಂಖ್ಯೆಯ ವಿಶ್ಲೇಷಣೆಯನ್ನು ಒಟ್ಟಾರೆಯಾಗಿ ನೋಡುವುದಾದರೆ, ಪುರುಷರಲ್ಲಿ ಎಕ್ಸ್ ಹಾಗೂ ವೈ ಕ್ರೋಮೋಸೋಮು ಸಮಪ್ರಮಾಣದಲ್ಲಿ ಬಿಡುಗಡೆಗೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ. ಆದರೆ ಕೆಲವು ದಂಪತಿಯಲ್ಲಿ ಈ ಸಮತೋಲನವು ಗಂಡು ಅಥವಾ ಹೆಣ್ಣು ಎಂಬ ಅಂಶದ ಮೇಲೆ ವಾಲುತ್ತದೆ ಎನ್ನುತ್ತಾರೆ ಸಂಶೋಧಕರು.

ಲೈಂಗಿಕಕ್ರಿಯೆಯ ನಂತರ ಮಹಿಳೆಯಲ್ಲಿನ ಅಂಡಾಣು ಫಲಿತಗೊಳ್ಳುವ ಅವಧಿ ಹಾಗೂ ಪುರುಷರಲ್ಲಿ ವೀರ್ಯ ಸ್ಖಲನಗೊಳ್ಳುವವರೆಗಿನ ಅವಧಿ ಇವೆರಡರ ವ್ಯತ್ಯಾಸದ ಮೇಲೆ ಈ ಅಂಶವನ್ನು ಕಂಡುಕೊಳ್ಳಲಾಗುತ್ತಿತ್ತು. ಹಲವು ದೇಶಗಳಲ್ಲಿ, ಇದುವರೆಗೂ ಲಭ್ಯವಿರುವ ದಾಖಲೆಗಳ ಪ್ರಕಾರ, ಈ ಅಂದಾಜಿನಲ್ಲಿ ಗಂಡುಮಕ್ಕಳೇ ಹೆಚ್ಚು ಜನಿಸಿರುವುದು. ಉದಾಹರಣೆಗೆ, ಬ್ರಿಟನ್ ಹಾಗೂ ಅಮೆರಿಕದಲ್ಲಿ, ನೂರು ಹೆಣ್ಣುಮಕ್ಕಳಿಗೆ 105 ಗಂಡುಮಕ್ಕಳ ಜನನದ ಅನುಪಾತ ದೊರೆತಿದೆ.

ಈ ಅಧ್ಯಯನವು, ಮಗುವಿನ ಲಿಂಗನಿರ್ಧಾರದಲ್ಲಿ ವಂಶವಾಹಿಯ ಪಾತ್ರದ ಕುರಿತ ಸಾಕ್ಷ್ಯವು ದೃಢವಾಗಿರುವುದಾಗಿ ಹೇಳಿಕೊಂಡಿದೆ. ಒಂದು ಕುಟುಂಬವೃಕ್ಷದ ಅಧ್ಯಯನವನ್ನೇ ತೆಗೆದುಕೊಂಡರೆ, ಗಂಡು ಅಥವಾ ಹೆಣ್ಣುಮಗುವಿನ ಜನನದಲ್ಲಿ ಆನುವಂಶಿಕ ಅಂಶ ಅಡಗಿರುತ್ತದೆ. ಉದಾಹರಣೆ, ಪುರುಷರಿಗೆ ಸಹೋದರರು ಹೆಚ್ಚಿದ್ದರೆ ಅವರಿಗೆ ಗಂಡುಮಗುವಾಗುವ ಸಾಧ್ಯತೆ ಹಾಗೂ ಸಹೋದರಿಯರು ಹೆಚ್ಚಿದ್ದರೆ ಹೆಣ್ಣುಮಗುವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಮಹಿಳೆಯರ ವಿಷಯದಲ್ಲಿ ಈ ಊಹೆ ಕಷ್ಟ.

ವಂಶವಾಹಿಯ ವ್ಯತ್ಯಾಸಗಳು, ವೀರ್ಯೋತ್ಪಾದನೆಯಲ್ಲಿನ ಎಕ್ಸ್ ಹಾಗೂ ವೈ ವೀರ್ಯಾಣುವಿನ ಸಂಖ್ಯೆಯೂ ಈ ಅಂದಾಜಿನ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಮಹಿಳೆ ಹಾಗೂ ಪುರುಷರಲ್ಲಿ ಈ ವಂಶವಾಹಿ ಅಂಶಗಳು ಇದ್ದರೂ ಪುರುಷರಲ್ಲಿ ಮಾತ್ರ ಚಟುವಟಿಕೆಯಿಂದ ಕೂಡಿರುತ್ತವೆ.

ಕುಟುಂಬವೃಕ್ಷದ ಅಧ್ಯಯನವು ತಿಳಿಸುವ ಪ್ರಕಾರ, ಗಂಡುಮಗು ಹಾಗೂ ಹೆಣ್ಣುಮಗುವಿನ ಜನನ ವಂಶವಾಹಿಯ ಅಂಶವನ್ನು ಒಳಗೊಂಡಿರುತ್ತದೆ. ಇದು ಮಹಿಳೆ ಹಾಗೂ ಪುರುಷರ ನಡುವಿನ ಜನಸಂಖ್ಯೆಯ ಪ್ರಮಾಣದ ಅನುಪಾತವನ್ನು ಸಮತೋಲನಗೊಳಿಸುವುದೂ ಆಗಿದೆ.

ಕೆಲವು ಸಂಶೋಧನೆಗಳು ತೋರುವ ಪ್ರಕಾರ, ಮೊದಲನೇ ವಿಶ್ವಯುದ್ಧದ ಸಂದರ್ಭ, ಗಂಡುಮಕ್ಕಳ ಜನನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿತು. ಯುದ್ಧಕ್ಕೆ ಹೋದ ಗಂಡುಮಕ್ಕಳು ಮರಳಿ ಬದುಕಿ ಬರುವ ಸಾಧ್ಯತೆಯೂ ಕಡಿಮೆಯಿದ್ದ ಕಾರಣ ಹೆಚ್ಚು ಗಂಡುಮಕ್ಕಳನ್ನು ಪಡೆಯಲು ಪೋಷಕರು ಹಂಬಲಿಸುತ್ತಿದ್ದರು. ಇದು ಮುಂದಿನ ಪೀಳಿಗೆಯಲ್ಲೂ ಗಂಡುಮಕ್ಕಳ ಜನನ ಪ್ರಮಾಣದ ಏರಿಕೆಗೆ ಕಾರಣವಾಗಿತ್ತು ಎಂದು ಸಂಶೋಧನೆಯು ತಿಳಿಸಿದೆ. ಇದನ್ನೇ ಜೆನೆಟಿಕ್ ಶಿಫ್ಟ್ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.