ಮೆಲನಿನ್ ಪ್ರಮಾಣದ ಆಧಾರದ ಮೇಲೆ ಚರ್ಮದ ಸಹಜ ಆರೈಕೆ ಅವಲಂಬಿಸಿರುತ್ತದೆ. ಬೇಸಿಗೆಯ ಶಾಖಕ್ಕೆ ಚರ್ಮದಲ್ಲಿ ಹೆಚ್ಚು ಜಿಡ್ಡಿನಂಶ ಉತ್ಪಾದನೆಯಾದರೆ, ಮಳೆಗಾಲದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಚರ್ಮ ಹಾಗೂ ಕೂದಲಿನ ಆರೈಕೆ ಮಾಡಿಕೊಳ್ಳುವುದು ಅನಿವಾರ್ಯ. ಚರ್ಮ ಹಾಗೂ ಕೂದಲು ನಳನಳಿಸುತ್ತಿದ್ದರೆ ಮುಪ್ಪನ್ನು ದೂರ ಇಟ್ಟ ಹಾಗೆ. ಆದರೆ, ಇವರೆಡೂ ಚೆನ್ನಾಗಿರಬೇಕೆಂದರೆ ಒಂದಷ್ಟು ಆರೈಕೆ ಮಾಡಿಕೊಳ್ಳಲೇಬೇಕು. ಅದಕ್ಕಾಗಿ ಇಲ್ಲಿವೆ ಕೆಲವು ಸಲಹೆಗಳು