ಹೆತ್ತವರಲ್ಲಿರುವ ಸಾಮಾನ್ಯ ಮನಸ್ಥಿತಿಯೆಂದರೆ, ತಮ್ಮ ಮಗು ಅವರು ಕನಸು ಕಂಡ ಜೀವನವನ್ನು ನಡೆಸಬೇಕೆಂಬುದು. ತಮಗೆ ಸಾಧಿಸಲು ಅಸಾಧ್ಯವಾದದ್ದನ್ನು ಮಕ್ಕಳು ಸಾಧಿಸಬೇಕೆನ್ನುವ ಆಶಯ. ಇದನ್ನು ಮಾಡುವ ಬದಲು ಮಕ್ಕಳೇ ಆರಿಸಿದ ವೃತ್ತಿಯನ್ನು ಮಾಡಲು ಅವರಿಗೆ ಬೆಂಬಲಿಸಿ.

‘ಸಿಮ್ರಾನ್ ಡೈರೀಸ್’ ಇದೊಂದು ಮಕ್ಕಳ ಪುಸ್ತಕ, ಇದರ ಲೇಖಕಿ ಇಶಿತಾ ಕತ್ಯಾಲ್. ಅಕ್ಷರಗಳನ್ನು ಕೂಡಿಸಿ ಕಾಮಿಕ್ಸ್ ಪುಸ್ತಕಗಳನ್ನು ಓದುವ ಹೊತ್ತಿಗಾಗಲೇ ಪುಸ್ತಕ ಬರೆದು ದಾಖಲೆ ಬರೆದಾಕೆ. ಆಗಿನ್ನೂ ಅವಳಿಗೆ ಕೇವಲ ಹತ್ತು ವರ್ಷ. ಅಷ್ಟೇ ಅಲ್ಲದೆ ನ್ಯೂಯಾರ್ಕ್‌ನ ಟೆಡೆಕ್ಸ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಭಾರತೀಯ ಮಕ್ಕಳಲ್ಲಿ ಮೊದಲಿಗಳು ಹಾಗೂ ಏಷ್ಯಾ ಫೆಸಿಪಿಕ್ ಭಾಗದ ಟೆಡೆಕ್ಸ್ ಯುವ ಕಾರ್ಯಕ್ರಮಗಳ ಸಂಘಟಕಿ.

ಇಶಿತಾಳಲ್ಲಿ ಮಾತ್ರವಲ್ಲ, ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆಯಿರುತ್ತದೆ; ಮಣ್ಣಿನೊಳಗಿನ ಚಿನ್ನದಂತೆ. ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿಯುಳ್ಳ ಶಿಕ್ಷಕರು ಅಥವಾ ಪೋಷಕರು ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಕಂಡುಹಿಡಿಯಬಲ್ಲರು. ಚಿತ್ರಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಇವುಗಳ ಹೊರತಾಗಿಯೂ ಮಗುವಿನಲ್ಲಿ ಎಲೆಮರೆಯಾಗಿರುವ ಅನೇಕ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಜವಾಬ್ದಾರಿ ಪೋಷಕರದ್ದು. ಆದರೆ ನಾವು ಎಷ್ಟೋ ಬಾರಿ ಅತಿ ಸೂಕ್ಷ್ಮ ವಿಚಾರಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತೇವೆ.

ಉದಾಹರಣೆಗೆ ಮಗು ಪರಿಚಯವಾದವರನ್ನು ತನ್ನ ಮಾತಿನಿಂದ ಆಕರ್ಷಿಸುತ್ತಿದೆ ಎಂದರೆ, ಅದಕ್ಕೆ ಗಮನಾರ್ಹ ಸಂವಹನ ಕೌಶಲವಿದೆ ಎಂದರ್ಥ. ಯಾರಾದರು ಗೇಲಿ ಮಾಡಿದಾಗ ಹಾಸ್ಯವನ್ನು ನಗುತ್ತಾ ಸ್ವೀಕರಿಸಿದೆ ಎಂದರೆ ಎಲ್ಲವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಗುಣವಿದೆ ಎನ್ನಬಹುದು. ಹೋಂವರ್ಕ್ ಮತ್ತು ಹವ್ಯಾಸ ಎರಡನ್ನೂ ಸರಿದೂಗಿಸುತ್ತಿದೆ ಎಂದರೆ ಅಂತಹ ಮಗುವಿಗೆ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಅದನ್ನು ಕಾರ್ಯರೂಪಗೊಳಿಸುವ ಸಾಮರ್ಥ್ಯವಿದೆ ಎಂದರ್ಥ. ಇಂತಹಾ ವಿಚಾರಗಳೇ ಮಗುವಿನ ಭವಿಷ್ಯವನ್ನು ನಿರ್ಧರಿಸಬಲ್ಲವು.

ಗುರುತಿಸುವುದು ಹೀಗೆ

* ಮಗವಿನ ನೈಸರ್ಗಿಕ ಪ್ರವೃತ್ತಿಯನ್ನು ಗಮನಿಸಿ: ಮಗು ತನ್ನ ಬಿಡುವಿನ ಸಮಯದಲ್ಲಿ ಸಂತೋಷದಿಂದ ಮಾಡುವ ಕೆಲಸಗಳನ್ನು ಗಮನಿಸಿ. ಅದು ಮಗುವಿನ ಆಸಕ್ತಿಯ ವಿಚಾರಗಳನ್ನು ಪ್ರತಿಬಿಂಬಿಸುತ್ತದೆ.

* ಶಿಕ್ಷಕರ ಸಲಹೆಗಳನ್ನು ಕೇಳಿ: ಮಗು ಮನೆಗಿಂತ ಶಾಲೆಯಲ್ಲೆ ಹೆಚ್ಚು ಸಮಯ ಕಳೆಯುತ್ತದೆ. ಹಾಗಾಗಿ ಶಿಕ್ಷಕರೊಟ್ಟಿಗಿನ ಮಗುವಿನ ಒಡನಾಟ ಕೂಡ ಹೆಚ್ಚೇ ಇರುತ್ತದೆ. ಆದ್ದರಿಂದ ಮಗುವಿನ ವರ್ತನೆ ಮತ್ತು ಆಸಕ್ತಿಯ ಬಗ್ಗೆ ಶಿಕ್ಷಕರೊಟ್ಟಿಗೆ ಚರ್ಚಿಸಿ.

* ಆಯ್ಕೆ ಮಾಡುವ ಚಟುವಟಿಕೆಗಳನ್ನು ಗಮನಿಸಿ: ನಿಮ್ಮ ಮಗು ಇಷ್ಟಪಟ್ಟು ಆಡುವ ಆಟಗಳು, ಆಯ್ಕೆ ಮಾಡುವ ಸ್ನೇಹಿತರು ಮತ್ತು ತೊಡಗಿಸಿಕೊಳ್ಳುವ ಚಟುವಟಿಕೆಗಳನ್ನು ಗಮನಿಸಿ. ಯಾವ ಬಗೆಯ ಚಟುವಟಿಕೆಗಳು ನಿಮ್ಮ ಮಗುವನ್ನು ಹೆಚ್ಚು ಸಮಯ ಹಿಡಿದಿಡಬಲ್ಲದೊ ಅದು ಅದರ ನೆಚ್ಚಿನದ್ದಾಗಿರುತ್ತದೆ.

* ಟಿವಿ ನೋಡುವಾಗ ಮಗುವಿನ ಆಯ್ಕೆಯ ಕಾರ್ಯಕ್ರಮಗಳನ್ನು ಗಮನಿಸಿ. ಮಗು ಇಷ್ಟಪಟ್ಟು ನೋಡುವ ಕಾರ್ಯಕ್ರಮಗಳು ಮತ್ತು ಕಾರ್ಟೂನ್‌ಗಳು ಮಗುವಿನ ಆಸಕ್ತಿಯನ್ನು ತಿಳಿಸುತ್ತವೆ.

* ಮಗುವಿಗೂ ಕೊಂಚ ಸ್ವಾತಂತ್ರ್ಯ ನೀಡಿ: ಪ್ರತಿಯೊಂದು ಮಗುವೂ ವಿಭಿನ್ನ ಮತ್ತು ವಿಶಿಷ್ಟ. ತನಗೆ ಬೇಕಾದ ಆಯ್ಕೆಯನ್ನು ಮಾಡಲು ಮಗುವಿಗೆ ಅವಕಾಶ ಕೊಟ್ಟು ಸರಿ/ ತಪ್ಪುಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಿ. ಜೊತೆಗಿದ್ದು ಪ್ರೋತ್ಸಾಹಿಸಿ.

* ಮಗುವಿನ ಕುತೂಹಲಕ್ಕೆ ಕಿವಿಗೊಡಿ: ಮಗು ಯಾವಾಗಲೂ ತನ್ನಿಷ್ಟದ ಹಾಗೂ ಆಸಕ್ತಿಯ ವಿಷಯದಲ್ಲಿ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತದೆ. ನೀವೆಷ್ಟೆ ಉತ್ತರಿಸಿದರೂ ಅದರ ಕುತೂಹಲ ತಣಿಯುವುದೇ ಇಲ್ಲ.

* ಶೈಕ್ಷಣಿಕವಾಗಿ ಮುಂದಿದ್ದರೆ ಮಗುವಿಗೆ ಓದಿನಲ್ಲಿ ಹೆಚ್ಚು ಆಸಕ್ತಿಯಿದೆ ಎಂದರ್ಥ. ಆಸಕ್ತಿಯ ವಿಷಯಾನುಸಾರ ಭವಿಷ್ಯವನ್ನು ನಿರ್ಧರಿಸಬಹುದು.

* ಮಗುವಿನ ಆಸಕ್ತಿ ಮತ್ತು ನಡವಳಿಕೆಯನ್ನು ಸಂಗಾತಿಯೊಂದಿಗೆ ಚರ್ಚಿಸಿ. ಸಾಧ್ಯವಾದರೆ ಶಿಕ್ಷಕರೊಂದಿಗೆ, ಕುಟುಂಬದ ಹಿರಿಯರೊಂದಿಗೂ ಕೂತು ಮಾತಾಡಿ ಅವರ ಸಲಹೆಗಳನ್ನು ಕೇಳಿ.

(ಲೇಖಕಿ: ತುಮಕೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.