ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಜನರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆಗೆ ಒತ್ತು ನೀಡುತ್ತಿದ್ದಾರೆ. ‘ಜರ್ನಲ್ ಆಫ್ ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ (ಜೆಎಪಿಐ)’ ನಡೆಸಿರುವ ಅಧ್ಯಯನವು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಪಟ್ಟಿಗೆ ಹೊಸದೊಂದನ್ನು ಸೇರ್ಪಡೆಗೊಳಿಸಿದೆ. ಅದುವೇತೆಂಗಿನ ಎಣ್ಣೆ!

ಜೆಎಪಿಐ ಜುಲೈ ಆವೃತ್ತಿಯಲ್ಲಿ ತೆಂಗಿನ ಎಣ್ಣೆಗೆ ಸಂಬಂಧಿಸಿದ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು, ತೆಂಗಿನ ಎಣ್ಣೆಯಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳ ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಕಾರ್ಯನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ತೆಂಗಿನ ಎಣ್ಣೆಯಲ್ಲಿರುವ ಸೂಕ್ಷ್ಮಜೀವಿ ನಿವಾರಕ ಅಂಶವು ಮಾನವ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿರುವ ಉರಿಯೂತ ಶಮನಗೊಳಿಸುವ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಕೊರೊನಾ ಗುಣಪಡಿಸಲು ನೆರವಾಗುವ ಉತ್ಪನ್ನಗಳತ್ತ ಗಮನಹರಿಸುವಂತೆ ಆಯುರ್ವೇದ ಔಷಧಿ ಕ್ಷೇತ್ರಕ್ಕೆ ಸರ್ಕಾರ ಸೂಚಿಸಿರುವ ಮಧ್ಯೆಯೇ, 4000 ವರ್ಷಗಳ ಹಿಂದೆಯೇ ತೆಂಗಿನ ಎಣ್ಣೆಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತಿತ್ತು ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ:Covid-19 India | ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣ? ಇಲ್ಲಿದೆ ಸಮಗ್ರ ಮಾಹಿತಿ

ತೆಂಗಿನ ಎಣ್ಣೆ ಮತ್ತು ಅದರ ಉತ್ಪನ್ನಗಳು ಮಾನವನಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗನಿರೋಧಕ ಕಣಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ನೆರವಾಗುವ ಔಷಧಿಯಂತೆ ಕಾರ್ಯನಿರ್ವಹಿಸುತ್ತಿವೆ ಎಂದೂ ಅಧ್ಯಯನ ತಿಳಿಸಿದೆ. ಆದರೆ, ಈ ಕುರಿತು ಮಾನವನ ಮೇಲೆ ನಡೆದ ಪ್ರಯೋಗ ಬಹಳ ಕಡಿಮೆ ಎನ್ನಲಾಗಿದೆ.

‘ತೆಂಗಿನ ಎಣ್ಣೆಯ ಮೇಲಿನ ಈ ಅಧ್ಯಯನ ನಡೆಸಲು ಕೊರೊನಾ ವೈರಸ್ ಮುಖ್ಯ ಕಾರಣವಲ್ಲ. ಆದರೆ, ತೆಂಗಿನ ಎಣ್ಣೆಯನ್ನು ಹೆಚ್ಚು ಸೇವಿಸುವ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ನಿಂದ ಗುಣಮುಖರಾಗುತ್ತಿರುವುದು ನಿಜ’ ಎಂದು ಅಧ್ಯಯನ ವರದಿ ಸಿದ್ಧಪಡಿಸಿದವರಲ್ಲಿ ಪ್ರಮುಖರಾದ ಡಾ. ಶಶಾಂಕ್ ಜೋಷಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.