ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ನಮ್ಮ ದಿನಚರಿಯ ಬಳಕೆಗಳಲ್ಲಿ ಒಂದಾಗಿದೆ. ಮಾಸ್ಕ್ ಹಾಗೂ ಅಂತರದ ಜೊತೆಗೆ ಸ್ಯಾನಿಟೈಸರ್ ಕೂಡ ನಮ್ಮ ಅಗತ್ಯ ವಸ್ತುವಾಗಿದೆ. ರೋಗಾಣುಗಳು ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಹ್ಯಾಂಡ್ ಸ್ಯಾನಿಸೈಟರ್ ಬಳಕೆ ಕಡ್ಡಾಯವಾಗಿದೆ. ಅಲ್ಲದೇ ಕಳೆದ ಹಲವು ದಿನಗಳಿಂದ ನಾವು ಇದನ್ನು ಬಳಸುತ್ತಲೇ ಇದ್ದೇವೆ. ಆದರೆ ಅತಿಯಾದ ಸ್ಯಾನಿಟೈಸರ್ ಬಳಕೆಯಿಂದ ದೇಹಕ್ಕೆ ಉಪಯುಕ್ತವಾಗುವ ಬ್ಯಾಕ್ಟೀರಿಯಾಗಳು ಸಾಯುತ್ತಿವೆ.

ಆಲ್ಕೋಹಾಲ್ ಅಂಶ ಇರುವ ಸ್ಯಾನಿಟೈಸರ್ಗಳು ರೋಗ ಹರಡುವುದನ್ನು ತಡೆಯಲು ಪರಿಣಾಮಕಾರಿ ಎಂಬುದನ್ನು ವೈದ್ಯಕೀಯ ವರದಿಗಳು ಸಾಬೀತು ಪಡಿಸಿವೆ. ಅದೇನೇ ಇದ್ದರೂ ಅತಿಯಾದ ಬಳಕೆಯಿಂದ ಚರ್ಮದ ಉರಿಯೂತದಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೇ ಅತಿಯಾದ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯಿಂದ ಒಣ ಚರ್ಮ, ಸುಟ್ಟಂತಾಗುವುದು, ಚರ್ಮ ಒಡೆಯುವುದು, ರಕ್ತ ಸೋರುವುದು ಮುಂತಾದ ಸಮಸ್ಯೆಗಳನ್ನು ಜನರು ಈಗಾಗಲೇ ಎದುರಿಸುತ್ತಿದ್ದಾರೆ. ಆ ಕಾರಣಕ್ಕೆ ಸ್ಯಾನಿಟೈಸರ್ ಬಳಸುವ ಮುನ್ನ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವುದು ಉತ್ತಮ. ಇದರಿಂದ ಚರ್ಮ ವ್ಯಾಧಿಗಳು ಬರದಂತೆ ಸುರಕ್ಷಿತವಾಗಿರಬಹುದು.

ಕಡಿಮೆ ಬಳಕೆ

ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದೇ ಆಗಲಿ ಅತಿಯಾದರೆ ಹಾನಿಕಾರಕ. ಇದು ಹ್ಯಾಂಡ್ ಸ್ಯಾನಿಟೈಸರ್ಗೂ ಅನ್ವಯಿಸುತ್ತದೆ. ಸೀಮಿತವಾದ ಬಳಕೆಯಿಂದ ಬ್ಯಾಕ್ಟೀರಿಯಾಗಳು ಹಾಗೂ ರೋಗಾಣುಗಳಿಂದ ದೂರವಿರಬಹುದು. ಒಂದು ವೇಳೆ ಹಾಗೆ ಮಾಡದೆ ಅತಿಯಾಗಿ ಬಳಸಿದರೆ ಚರ್ಮದ ವ್ಯಾಧಿಗಳು ಕಾಣಿಸಿಕೊಳ್ಳುವುದು ಖಚಿತ.

ಅನಗತ್ಯ ರಾಸಾಯನಿಕ ಬಳಕೆ ಬೇಡ

ಹ್ಯಾಂಡ್ ಸ್ಯಾನಿಟೈಸರ್ಗಳಲ್ಲಿ ಬಳಸುವ ಅತಿಯಾದ ರಾಸಾಯನಿಕಗಳು ಆರೋಗ್ಯಕ್ಕೂ ಹಾನಿಕಾರಕ. ಮನುಷ್ಯನ ಚರ್ಮ ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಸ್ಯಾನಿಟೈಸರ್ನಲ್ಲಿರುವ ರಾಸಾಯನಿಕ ಅಂಶವು ಒಬ್ಬರಿಗೆ ಉಪಯುಕ್ತವಾದರೆ ಇನ್ನೊಬ್ಬರಿಗೆ ಅಪಾಯವಾಗಬಹುದು. ಹೀಗಾಗಿ ಅತಿಯಾಗಿ ಬಳಸುವುದಕ್ಕಿಂತ ನೇರ ಉಪಾಯಗಳನ್ನು ಹುಡುಕಿಕೊಳ್ಳಬೇಕು.

ಮಾಯಿಶ್ಚರೈಸರ್ ಹಚ್ಚುವ ಮುನ್ನ..

ನೀವು ಹಲವು ದಿನಗಳಿಂದ ಹ್ಯಾಂಡ್ ಸ್ಯಾನಿಟೈಸರ್ ಬಳಸುತ್ತಿದ್ದರೆ ನಿಧಾನಕ್ಕೆ ನಿಮ್ಮ ಕೈಯಲ್ಲಿ ಚರ್ಮದ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗಿರುತ್ತದೆ. ಹಾಗಾದರೆ ಅಗತ್ಯವಿಲ್ಲದೇ ಇದ್ದರೆ ಸಂಪೂರ್ಣವಾಗಿ ಸ್ಯಾನಿಟೈಸರ್ ಬಳಕೆ ನಿಲ್ಲಿಸುವುದು ಉತ್ತಮ. ಮನೆಮದ್ದು ಹಾಗೂ ನೋವು ನಿವಾರಕಗಳನ್ನು ಬಳಸುವ ಜೊತೆಗೆ ಮಾಯಿಶ್ಚರೈಸರ್ಗಳನ್ನು ಬಳಸಿ. ಇದು ಚರ್ಮಕ್ಕೆ ಸರಿಯಾದ ಆರೈಕೆ ನೀಡುವುದಲ್ಲದೇ ಪುನಃ ಮೊದಲಿನ ರೂಪ ನೀಡುತ್ತದೆ. ಕೈಗಳು ಒಡೆಯುವುದನ್ನು ತಪ್ಪಿಸಲು ರಾತ್ರಿ ಕೈಗವಸು ಧರಿಸಿ.

ಒಂದು ವೇಳೆ ನೀವು ಇಸುಬು ಅಥವಾ ಒಣಚರ್ಮ ಸಮಸ್ಯೆಯಿಂದ ಬಳಲುತ್ತಿದ್ದರೆ ಮಾಯಿಶ್ಚರೈಸರ್ ಹಚ್ಚುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಸ್ಯಾನಿಟೈಸರ್ ಹಾಗೂ ಮಾಯಿಶ್ಚರೈಸರ್ ಎರಡನ್ನೂ ಬಳಸುವುದರಿಂದ ಒಣ ಚರ್ಮ ನಿವಾರಣೆಯಾಗಬಹುದು. ಆದರೆ ಇಸುಬು, ಚರ್ಮದ ಉರಿಯೂತ ಹಾಗೂ ಸೋರಿಯಾಸಿಸ್ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಸೋಪಿನಲ್ಲಿ ಕೈ ತೊಳೆಯುವುದು ಎಂದಿಗೂ ಉತ್ತಮ ಆಯ್ಕೆ

ಹ್ಯಾಂಡ್ ಸ್ಯಾನಿಟೈಸರ್ ಬದಲು ಸೋಪು ಹಾಗೂ ನೀರಿನಿಂದ ಕೈ ತೊಳೆಯುವುದು ಎಂದಿಗೂ ಉತ್ತಮ. ಇದರಿಂದ ಚರ್ಮದ ಅಲರ್ಜಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ನಿಮ್ಮ ಬಳಿ ಬೇರೆ ಯಾವುದೇ ಆಯ್ಕೆ ಇಲ್ಲದಿದ್ದಾಗ ಮಾತ್ರ ಹ್ಯಾಂಡ್ ಸ್ಯಾನಿಟೈಸರ್ ಬಳಸಿ. ಇಲ್ಲವಾದಲ್ಲಿ ನಂಜು ನಿರೋಧಕ ಸೋಪ್ ಬಳಸಿ ಕೈ ತೊಳೆಯುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.