ವಿವಿಧ ತರಕಾರಿ, ಕಾಳುಗಳಿಂದ ತಯಾರಿಸುವ ಸಲಾಡ್ ತಿನ್ನುವುದರಿಂದ ಹಸಿವು ನೀಗುವ ಜೊತೆಗೆ, ದೇಹಕ್ಕೆ ಪ್ರೊಟೀನ್, ವಿಟಮಿನ್, ಮಿನರಲ್, ಕ್ಯಾಲ್ಸಿಯಂನಂತಹ ಪೌಷ್ಟಿಕಾಂಶಗಳು ದೊರೆಯುತ್ತವೆ. ಸಲಾಡ್ ಸೇವನೆ ದೇಹದಲ್ಲಿ ಶಕ್ತಿ ವೃದ್ಧಿಸುವ ಜೊತೆಗೆ, ಆರೋಗ್ಯವೂ ಸುಧಾರಿಸುತ್ತದೆ. ವೈವಿಧ್ಯಮಯ ರೆಸಿಪಿಗಳ ಸಹಿತ ವಿವಿಧ ಬಗೆಯ ಸಲಾಡ್‌ಗಳನ್ನು ಇಲ್ಲಿ ವಿವರಿಸಿದ್ದಾರೆ ವೇದಾವತಿ ಹೆಚ್.ಎಸ್.

ಎಲೆಕೋಸಿನ ಸಲಾಡ್

ಬೇಕಾಗುವ ಸಾಮಗ್ರಿಗಳು: ಎಲೆಕೋಸು 200ಗ್ರಾಂ, ಕೆಂಪು ಎಲೆಕೋಸು 200ಗ್ರಾಂ, ಇಂಗ್ಲಿಷ್ ಸೌತೆಕಾಯಿ 1, ಅವಕಾಡೊ (ಬೆಣ್ಣೆಹಣ್ಣು)1, ಕ್ಯಾರೆಟ್ 1, ಈರುಳ್ಳಿ 1, ನಿಂಬೆ ಹಣ್ಣು ಅರ್ಧ ಹೋಳು, 1 ಟೇಬಲ್ ಚಮಚ ಮಸ್ಟರ್ಡ್ ಪೇಸ್ಟ್, 4 ಟೇಬಲ್ ಚಮಚ ಆಲಿವ್ ಆಯಿಲ್, ಅರ್ಧ ಟೀ ಚಮಚ ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ: ಎರಡು ರೀತಿಯ ಎಲೆಕೋಸನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಸೌತೆಕಾಯಿ, ಅವಕಾಡೊ, ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಕ್ಯಾರೆಟ್ ಸಿಪ್ಪೆ ತೆಗೆದು ತುರಿದುಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇವುಗಳನ್ನು ಒಂದು ತಟ್ಟೆಯಲ್ಲಿ ಹಾಕಿ. ಬಳಿಕ ನಿಂಬೆರಸ, ಉಪ್ಪು, ಮಸ್ಟರ್ಡ್ ಪೇಸ್ಟ್, ಆಲಿವ್ ಆಯಿಲ್, ಕಾಳುಮೆಣಸಿನ ಪುಡಿಯನ್ನು ಒಂದು ಬೌಲಿಗೆ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತರಕಾರಿಗಳ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ರುಚಿಕರವಾದ ಮತ್ತು ಆರೋಗ್ಯಕರವಾದ ಸಲಾಡ್ ಸವಿಯಿರಿ.

ಪ್ರೋಟಿನ್ಸ್ ಸಲಾಡ್

ಬೇಕಾಗುವ ಸಾಮಗ್ರಿಗಳು: ಮೊಳಕೆ ಕಟ್ಟಿದ ಕಡಲೆಕಾಳು ಒಂದು ಕಪ್, ಮೊಳಕೆ ಕಟ್ಟಿದ ಹೆಸರು ಕಾಳು ಒಂದು ಕಪ್, ಪನ್ನೀರ್ 200ಗ್ರಾಂ ಚಿಕ್ಕದಾಗಿ ಕತ್ತರಿಸಿ ಕೊಳ್ಳಿ, ಈರುಳ್ಳಿ 1 ಚಿಕ್ಕದಾಗಿ ಕತ್ತರಿಸಿ, ಟೊಮೆಟೊ 1 ಚಿಕ್ಕದಾಗಿ ಕತ್ತರಿಸಿ, ಕೊತ್ತಂಬರಿ ಸೊಪ್ಪು 2ಟೇಬಲ್ ಚಮಚ ಚಿಕ್ಕದಾಗಿ ಕತ್ತರಿಸಿ, ಅರ್ಧ ಕಪ್ ಶೇಂಗಾ ಬೀಜ (ಹುರಿದು ಸಿಪ್ಪೆ ತೆಗೆದು ಎರಡು ಭಾಗ ಮಾಡಿಕೊಳ್ಳಿ), ಚಿಕ್ಕದಾಗಿ ಕತ್ತರಿಸಿದ ಮಾವಿನ ಕಾಯಿ, ಬ್ಲ್ಯಾಕ್ ಸಾಲ್ಟ್ ರುಚಿಗೆ ತಕ್ಕಷ್ಟು. ಜೀರಿಗೆ ಪುಡಿ 2 ಟೀ ಚಮಚ, ಚಿಕ್ಕದಾಗಿ ಹೆಚ್ಚಿಕೊಂಡ ಹಸಿ ಮೆಣಸಿನಕಾಯಿ , ಕಾಲು ಟೀ ಚಮಚ ಕಾಳು ಮೆಣಸಿನ ಪುಡಿ, ಚಾಟ್ ಮಸಾಲ, ಅರ್ಧ ಟೀ ಚಮಚ, ಅರ್ಧ ನಿಂಬೆಹಣ್ಣು

ತಯಾರಿಸುವ ವಿಧಾನ: ಒಂದು ಬೌಲಿನಲ್ಲಿ ಮೊಳಕೆ ಕಾಳುಗಳನ್ನು ಹಾಕಿ ಕೊಳ್ಳಿ. ಜೊತೆಗೆ ಕತ್ತರಿಸಿದ ಪನ್ನೀರು, ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಹುರಿದ ಶೇಂಗಾ, ಮಾವಿನ ಕಾಯಿ, ಬ್ಲಾಕ್ ಸಾಲ್ಟ್, ಹುರಿದು ಪುಡಿ ಮಾಡಿದ ಜೀರಿಗೆ ಪುಡಿಯನ್ನು ಹಾಕಿ. ನಂತರ ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ, ಕಾಳುಮೆಣಸಿನ ಪುಡಿ, ಚಾಟ್ ಮಸಾಲೆ, ನಿಂಬೆ ಹಣ್ಣಿನ ರಸವನ್ನು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ಸರ್ವ್ ಮಾಡುವಾಗ ಚಿಕ್ಕ ಚಿಕ್ಕ ಬೌಲಿನಲ್ಲಿ ಹಾಕಿ ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪು, ಮಾವಿನ ಕಾಯಿ ಚೂರು ಮತ್ತು ಶೇಂಗಾ ಬೀಜದಿಂದ ಅಲಂಕರಿಸಿ. ರುಚಿಕರವಾದ ಪ್ರೋಟೀನ್ ಸಾಲಾಡ್ ತಯಾರಿಸಿ ಸವಿಯಿರಿ.

ಎಬಿಸಿ ಸಲಾಡ್

ಬೇಕಾಗುವ ಸಾಮಗ್ರಿಗಳು: ತಲಾ ಒಂದು ಸೇಬು ಹಣ್ಣು, ಕ್ಯಾರೆಟ್ , ಬೀಟ್ರೂಟ್ , 50 ಗ್ಲಾಂ ಆಲಿವ್ವ್ಆಯಿಲ್, ಅರ್ಧ ನಿಂಬೆ ಹಣ್ಣು, ಅರ್ಧ ಚಮಚ ಕಾಳು ಮೆಣಸು, ಚಕ್ಕೆ ಪುಡಿ, ಜೇನುತುಪ್ಪ, ದನಿಯಾಪುಡಿ, ಜೀರಿಗೆ ಪುಡಿ, 2 ಚಮಚ ಸಿಪ್ಪೆ ಬಿಡಿಸಿದ ಶೇಂಗಾ, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಸೇಬುಹಣ್ಣಿನ ಬೀಜವನ್ನು ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕ್ಯಾರೆಟ್ ಮತ್ತು ಬೀಟ್ರೂಟ್ ಸಿಪ್ಪೆ ತೆಗೆದು ತುರಿದುಕೊಳ್ಳಿ. ಚಿಕ್ಕ ಬೌಲಿಗೆ ಆಲಿವ್ ಆಯಿಲ್(ಎಬಿಸಿ), ಕಾಳುಮೆಣಸು, ಚಕ್ಕೆ ಪುಡಿ, ಜೇನುತುಪ್ಪ, ಉಪ್ಪು, ದನಿಯಾ, ಜೀರಿಗೆ ಹಾಕಿ ಮಿಶ್ರಣ ಮಾಡಿ. ಇದನ್ನು ತಯಾರಿಸಿಟ್ಟುಕೊಂಡ ಎಬಿಸಿ ಮಿಶ್ರಣಕ್ಕೆ ಸೇರಿಸಿ. ಶೇಂಗಾ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಕರವಾದ ಮತ್ತು ಆರೋಗ್ಯಕರವಾದ ಸಲಾಡ್ ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.