ಬೇಸಿಗೆಯಲ್ಲಿ ತ್ವಚೆ ಅಥವಾ ಚರ್ಮದ ಕಾಳಜಿ ವಹಿಸದಿದ್ದರೆ, ಸನ್ ಟ್ಯಾನ್, ಚರ್ಮದ ಡೀಹೈಡ್ರೇಷನ್, ಬೆವರು ಹಾಗೂ ದೂಳಿನ ಅಲರ್ಜಿಯಂತಹ ಸಮಸ್ಯೆ ಕಾಡುತ್ತದೆ. ಜೊತೆಗೆ, ಅಂದವೂ ಕೆಡುತ್ತದೆ. ಈ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ತ್ವಚೆಯ ರಕ್ಷಣೆಗಾಗಿ ಸಿಕ್ಕ, ಸಿಕ್ಕ ಕ್ರೀಮ್‌ಗಳ ಮೊರೆ ಹೋಗುತ್ತಾರೆ. ಹಾಗೆ ಮಾಡುವುದರ ಬದಲಿಗೆ,ಬೇಸಿಗೆ ಆರಂಭವಾದ ಕೂಡಲೇ ಚರ್ಮದ ಕಾಳಜಿ ಮಾಡಿದರೆ ಸಾಕು. ಹಾಗಾದರೆ, ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿದೆ ಕೆಲವೊಂದು ಟಿಪ್ಸ್;

ಸನ್‌ಸ್ಕ್ರೀನ್ ಬಳಕೆ

ಸೂರ್ಯನ ಕಿರಣವು ನೇರವಾಗಿ ಚರ್ಮವನ್ನು ತಾಕದಂತೆ ರಕ್ಷಿಸಿಕೊಳ್ಳಲು ಸನ್‌ಕ್ರೀಮ್ ಬಳಕೆ ಮಾಡಬೇಕು. ಮನೆಯಿಂದ ಹೊರಗಡೆ ಹೋಗುವಾಗ ತಪ್ಪದೇ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ. ಬೇಸಿಗೆಯಲ್ಲಿ ಯವಿ ಕಿರಣಗಳಿಂದ ರಕ್ಷಣೆ ಪಡೆಯಲು, ದಿನದಲ್ಲಿ ಕನಿಷ್ಠ ಮೂರು ಬಾರಿಯಾದರೂ ಸನ್‌ಸ್ಕ್ರೀನ್ ಲೋಷನ್ ಇದನ್ನು ಹಚ್ಚಿಕೊಳ್ಳಬೇಕು. ಎಸ್‌ಪಿಎಫ್ ಅಂಶವಿರುವ ಸನ್‌ಸ್ಕ್ರೀನ್ ಲೋಷನ್ ಬಳಕೆ ಉತ್ತಮ.

ಸ್ಕ್ರಬ್ ಮಾಡಿ

ಬೇಸಿಗೆಯಲ್ಲಿ ದೂಳಿನಿಂದ ಚರ್ಮದ ಅಂದ ಕೆಡುತ್ತದೆ. ಹಾಗಾಗಿ ವಾರದಲ್ಲಿ ಎರಡು ಬಾರಿಯಾದರೂ ಸ್ಕ್ರಬ್ ಮಾಡಿಕೊಳ್ಳಬೇಕು. ಮನೆಯಲ್ಲೇ ಹಣ್ಣು ಹಾಗೂ ತರಕಾರಿಯಿಂದ ತಯಾರಿಸಿದ ಸ್ಕ್ರಬ್ ಬಳಸುವುದು ಉತ್ತಮ. ಚರ್ಮಕ್ಕೆ ಸ್ಕ್ರಬ್ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೇ ಕಲೆ, ಮೊಡವೆಯಂತಹ ಸಮಸ್ಯೆಯಿಂದಲೂ ಪರಿಹಾರ ಕಂಡುಕೊಳ್ಳಬಹುದು.

ಮೇಕಪ್

ಬೇಸಿಗೆಯಲ್ಲಿ ಢಾಳವಾದ ಮೇಕಪ್ ಚರ್ಮಕ್ಕೆ ಅಷ್ಟು ಒಳ್ಳೆಯದಲ್ಲ. ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ತೆಳುವಾಗಿ ಮೇಕಪ್ ಹಚ್ಚಿ. ಹಾಗೆಯೇ, ರಾತ್ರಿ ಮಲಗುವ ಮುನ್ನ ತಪ್ಪದೇ ಸ್ವಚ್ಛವಾಗಿ ಮೇಕಪ್ ತೆಗೆದು ಮಲಗಬೇಕು. ಇಲ್ಲದಿದ್ದರೆ, ಮೇಕಪ್ ಹಾಗೂ ದೂಳಿನಿಂದ ಚರ್ಮದ ಮೇಲಿನ ರಂಧ್ರಗಳು ಮುಚ್ಚಿ ಮೊಡವೆ, ಕಪ್ಪುಕಲೆ, ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚಬಹುದು.

ಕೂದಲ ಕಾಳಜಿ

ಬೇಸಿಗೆಯಲ್ಲಿ ಚರ್ಮದಷ್ಟೇ ಕೂದಲಿನ ಕಾಳಜಿ ಮಾಡುವುದು ಮುಖ್ಯ. ಇದು ಸವಾಲು ಕೂಡ. ಕೂದಲ ಬುಡದಲ್ಲಿ ಬೆವರು ಅಂಟಿ ತಲೆಹೊಟ್ಟು, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆ ಕಾರಣಕ್ಕೆ ವಾರದಲ್ಲಿ ಮೂರು ಬಾರಿಯಾದರೂ ತಲೆಸ್ನಾನ ಮಾಡುವುದು ಅವಶ್ಯ. ಕೂದಲ ಬುಡಕ್ಕೆ ವಾರಕ್ಕೊಮ್ಮೆಯಾದರೂ ನೀಟಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಂಡು ಸ್ನಾನ ಮಾಡಬೇಕು. ಬೇಸಿಗೆಯಲ್ಲಿ ರಾಸಾಯನಿಕರಹಿತ ಶ್ಯಾಂಪೂ ಬಳಕೆ ಉತ್ತಮ.

ಚರ್ಮದ ಕಾಳಜಿಗೆ ಆಹಾರ

ಬೇಸಿಗೆ ಆರಂಭವಾಗಿ ತಾಪಮಾನ ಹೆಚ್ಚಿದ ಕೂಡಲೇ ಚರ್ಮದಲ್ಲಿ ಹಲವು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಈ ಕಾಲದಲ್ಲಿ ಹೆಚ್ಚು ದ್ರವರೂಪದ ಆಹಾರ ಸೇವಿಸಬೇಕು. ತಿಳಿಮಜ್ಜಿಗೆ, ಎಳನೀರು ಸೇವಿಸುವುದು ಉತ್ತಮ. ಕಲ್ಲಂಗಡಿ ಹಣ್ಣು, ಮೋಸಂಬಿಯಂತಹ ಹಣ್ಣು ತಿನ್ನಬೇಕು. ಬೇಸಿಗೆಯಲ್ಲಿ ದಿನಕ್ಕೆ ಕನಿಷ್ಠ 4 ಲೀಟರ್ ನೀರು ಕುಡಿಯಬೇಕು. ಹಸಿ ಅಥವಾ ಅರೆಬೆಂದ ತರಕಾರಿ ಸೇವಿಸಬೇಕು. ದಿನಕ್ಕೊಮ್ಮೆಯಾದರೂ ತರಕಾರಿ ಸಲಾಡ್ ಸೇವಿಸಬೇಕು. ಪ್ರೊಟೀನ್ ಹಾಗೂ ಖನಿಜಾಂಶವುಳ್ಳ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.