ನವದೆಹಲಿ: ಆರು ವಾರಗಳ ಅಂತರಕ್ಕಿಂತ, ಮೂರು ತಿಂಗಳ ಅಂತರದಲ್ಲಿ ಪಡೆಯುವ ಆಕ್ಸ್ಫರ್ಡ್ ಕೋವಿಡ್ 19 ಲಸಿಕೆಯ ಎರಡು ಡೋಸೇಜ್ಗಳು ತುಂಬಾ ಪರಿಣಾಮಕಾರಿಯಾಗಲಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನದ ಪ್ರಕಾರ ಎರಡು ಡೋಸ್ಗಳಲ್ಲಿ ಮೊದಲ ಡೋಸ್ ಶೇ 76ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡುತ್ತದೆ.

ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ 3 ನೇ ಹಂತದ ಯಾದೃಚ್ಛಿಕ ನಿಯಂತ್ರಿತ ಪ್ರಯೋಗದ ವಿಶ್ಲೇಷಣೆಯ ಫಲಿತಾಂಶಗಳು, ಮೊದಲ ಡೋಸ್ ಲಸಿಕೆ, ಮೂರು ತಿಂಗಳ ಅಂತರದಲ್ಲಿ ಲಸಿಕೆ ತೆಗೆದುಕೊಳ್ಳುವವರೆಗೂ, ರಕ್ಷಣೆಯನ್ನು ವಿಸ್ತರಿಸಬಹುದು ಎನ್ನುತ್ತದೆ.

ಬ್ರಿಟನ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳೂ ಸೇರಿದಂತೆ ಸಂಶೋಧಕರ ಪ್ರಕಾರ, ಲಸಿಕೆ ಸರಬರಾಜು ಆರಂಭದಲ್ಲಿ ಸೀಮಿತವಾಗಿದ್ದರೂ ಈ ಡೋಸೇಜ್ಗಳು ಪ್ರಯೋಜನಕಾರಿ ಆಗಿವೆ. ಜನರಿಗೆ ವೇಗವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ನೆರವಾಗುತ್ತದೆ ಎನ್ನುತ್ತಾರೆ.

ಲಸಿಕೆಯ ಪೂರೈಕೆ ಕಡಿಮೆ ಇರುವ ಈ ಅವಧಿಯಲ್ಲಿ ಹೆಚ್ಚಿನ ಸಾರ್ವಜನಿಕರಿಗೆ ಆರೋಗ್ಯದ ಅನುಕೂಲ ಕಲ್ಪಿಸುವುದರತ್ತ ನೀತಿ ನಿರ್ಮಾಪಕರು ಯೋಜಿಸಬೇಕಿದೆ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಮುಖ ಲೇಖಕ ಪ್ರೊ. ಆಂಡ್ರ್ಯೂ ಪೊಲಾರ್ಡ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.