ನಾವೆಲ್ಲಾ ಪ್ರತಿನಿತ್ಯ ಗಮನಿಸುವ ಹಾಗೆ ರಸ್ತೆ ಅಪಘಾತ ಮತ್ತು ಇತರೆ ಅಪಘಾತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಹೀಗೆ ಅಪಘಾತಕ್ಕೆ ಒಳಗಾದವರಲ್ಲಿ ಅನೇಕ ಮಂದಿ ಕಾಲು, ಕೈ ಮೂಳೆ ಮುರಿತಕ್ಕೆ ಒಳಗಾಗಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಅಧಿಕ ರಕ್ತಸ್ರಾವಗೊಂಡು ಸೋಂಕಿಗೆ ತುತ್ತಾದವರ ಸಂಖ್ಯೆ ಹೆಚ್ಚಿದೆ. ಈ ಸೋಂಕಿನ ಸಮಸ್ಯೆಗೆ ಚಿಕಿತ್ಸೆ ಇದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಶ್ರೀವತ್ಸ ಸುಬ್ರಹ್ಮಣ್ಯ.

ಇಂತಹ ಪ್ರಕರಣಗಳ ಕುರಿತು ಮಾಹಿತಿ ಹಂಚಿಕೊಂಡಿರುವ ತಜ್ಞರು, ಅಪಘಾತದಲ್ಲಿ ಕೈ, ಕಾಲು ಮೂಳೆ ಮುರಿತಕ್ಕೆ ಒಳಗಾದವರಲ್ಲಿ ರಕ್ತಪರಿಚಲನೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ವೇಳೆ ರೋಗಿಗೆ ರಾಡ್ ಮತ್ತು ಪಿನ್‌ಗಳನ್ನು ಹಾಕಿ ಶಸ್ತ್ರಚಿಕಿತ್ಸೆಗಳನ್ನೂ ಮಾಡಲಾಗುತ್ತದೆ. ಆದರೆ ಅವೆಲ್ಲವನ್ನೂ ಮೀರಿಯೂ ಕೂಡ ಸೋಂಕಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಂದರ್ಭಗಳಲ್ಲಿ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿಯು ಎದುರಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಯ ಸಮಸ್ಯೆಯನ್ನು ನಿವಾರಿಸಬಹುದು ಎಂದು ತಜ್ಞ ಡಾ. ಶ್ರೀವತ್ಸ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಚಿಕಿತ್ಸೆ ಹೇಗಿರುತ್ತದೆ ?

ಅಪಘಾತದಿಂದ ಮೂಳೆ ಮುರಿದಿರುತ್ತದೆ ಜೊತೆಗೆ ರೋಗಿಯು ಸೋಂಕಿಗೆ ಒಳಗಾಗಿರುತ್ತಾನೆ. ಈ ಸಂದರ್ಭದಲ್ಲಿ ವೈದ್ಯರು ಸೋಂಕಿತ ಮೂಳೆಯನ್ನು ತೆಗೆದು ಹಾಕಿ, ತದನಂತರ ಇಂಟರ್ ಲಾಕಿಂಗ್ ಮೊಳೆಗಳ ಮೂಲಕ ಮೂಳೆ ಸ್ಥಿರಗೊಳಿಸುತ್ತಾರೆ. ಈ ವೇಳೆ ವೈದ್ಯರು ಸೋಂಕು ಮತ್ತೆ ಮರುಕಳಿಸದಂತೆ ಆಂಟಿಬಯೋಟಿಕ್ ಕೋಟ್ ಬೀಡ್ಸ್ ಗಳನ್ನ ಕೂಡ ಬಳಸುತ್ತಾರೆ. ಅದಲ್ಲದೆ ರಕ್ತ ಚಲನೆಯನ್ನು ಸರಿಪಡಿಸುವುದಕ್ಕೆ ಮಸಲ್ ಫ್ಲಾಪ್ ಕೂಡ ಬಳಸುತ್ತಾರೆ. ಈ ಮೂಲಕ ರೋಗಿಯು ಚಿಕಿತ್ಸೆಯ ಮರುದಿನವೇ ಸ್ಟ್ರಾಂಡ್ ಸಹಾಯದಿಂದ ಓಡಾಡುವಂತೆ ಮಾಡಲಾಗುತ್ತದೆ. ಈ ಚಿಕಿತ್ಸೆಯಲ್ಲಿನ ವಿಶೇಷವೆಂದರೆ ಮೂಳೆಯು ಮತ್ತೆ ಬೆಳೆಯುವಂತಾಗಲು ರೋಗಿಗೆ ಬೋನ್ ಗ್ರಾಫ್ಟಿಂಗ್ ಗೆ ಒಳಪಡಿಸಲಾಗುತ್ತದೆ. ಈ ವೇಳೆ ರೋಗಿಯ ನಡುವಿನಿಂದ ಮೂಳೆಯ ಬೆರಕೆಯನ್ನು ತೆಗೆದುಕೊಂಡು ಖಾಲಿ ಇರುವ ಸ್ಥಳದಲ್ಲಿ ಸಿಂಥೆಟಿಕ್ ಮೂಳೆಯನ್ನು ಇರಿಸಲಾಗುತ್ತದೆ. ಈ ರೀತಿಯ ಚಿಕಿತ್ಸೆಯಲ್ಲಿ ಕೆಲವೇ ದಿನಗಳಲ್ಲಿ ರೋಗಿಯ ಮೂಳೆ ಮುರಿತ ಸರಿಹೋಗುವುದರ ಜೊತೆಗೆ ಗಾಯವು ವಾಸಿಯಾಗುತ್ತದೆ. ಅಲ್ಲದೆ ಮೂಳೆ ಬೆಳಗೆಯಾಗುವ ಸಾಧ್ಯತೆಗಳು ಕೂಡ ಹೆಚ್ಚಿರುತ್ತವೆ.

ಸೂಕ್ತ ವೈದ್ಯಕೀಯ ವಿಧಾನದ ಮೂಲಕ ಗಂಭೀರ ಸಮಸ್ಯೆಗೆ ಒಳಗಾದ ಮೂಳೆಯನ್ನು ಕೂಡಾ ಯಶಸ್ವಿಯಾಗಿ ಗುಣಪಡಿಸಬಹುದು ಎಂದು ವೈದ್ಯ ಶ್ರೀ ವತ್ಸ ಸುಬ್ರಹ್ಮಣ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.