ಹದಿಹರೆಯದಲ್ಲಿ ಸೌಂದರ್ಯ ಪ್ರಜ್ಞೆ ಬೆಳೆಯುವುದು ಅತ್ಯಂತ ಸಾಮಾನ್ಯ. ಸುಂದರವಾಗಿ ಕಾಣಬೇಕೆಂಬುದು ಮಾನವ ಸಹಜ ಗುಣ. ಅದು ಹದಿಹರೆಯದವರಲ್ಲಿ ಯೌವನಾವಸ್ಥೆಯಲ್ಲಿರುವವರಲ್ಲಿ ಕೊಂಚ ಹೆಚ್ಚು ಎನ್ನಬಹುದು.ಅಹಿತಕರ ಆಹಾರಾಭ್ಯಾಸಗಳು, ದೈಹಿಕ ಶ್ರಮದ ಕೊರತೆ, ಸಹಪಾಠಿಗಳ ವರ್ತನೆಗಳ ಪ್ರಭಾವ, ಜಂಕ್ ಫುಡ್ ಸೇವನೆ ಮುಂತಾದವುಗಳಿಂದ ಈಗಿನ ಹದಿಹರೆಯದವರಲ್ಲಿ ಅಧಿಕ ತೂಕದ ಸಮಸ್ಯೆಯನ್ನು ಕಾಣಬಹುದಾಗಿದೆ. ಇದಕ್ಕೆ ವಿರುದ್ಧ ತೆಳ್ಳಗೆ ಇರುವುದೇ ಸೌಂದರ್ಯ ಎಂಬ ಸಮಾಜದ ಧೋರಣೆ ಯುವ ಜನತೆಯ ಮೇಲೆ ಇನ್ನೂ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಸಾಮಾಜಿಕ ಜಾಲತಾಣಗಳು , ಫೇಸ್ ಬುಕ್ , ಇನ್‌ಸ್ಟಾಗ್ರಾಮ್ ರೀಲ್ ಗಳು ಪ್ರಭಾವವು ಯುವಜನತೆಯ ಮೇಲೆ ಹಾಗೂ ಅವರ ತೂಕ, ಸೌಂದರ್ಯ, ಆಹಾರಾಭ್ಯಾಸಗಳ ಮೇಲೆ ಪ್ರಭಾವ ಬೀರುತ್ತದೆ. ಅನೇಕ ರೀತಿಯ ಡಯಟ್ ಪ್ಲ್ಯಾನ್‌ಗಳು, ಕ್ರಾಷ್ ಡಯಟ್‌ಗಳು, ನೈಜತೆ ದೂರವಾಗಿರುವ ಡಯಟ್ ಗುರಿಗಳನ್ನು ಹೊಂದುವ ಭರದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುಕೊಳ್ಳುತ್ತಿದ್ದಾರೆ. ಅಧ್ಯಯನಗಳ ಪ್ರಕಾರ ಶೇ.50ರಷ್ಟು ಯುವಜನತೆ ತಮ್ಮ ದೇಹ ಸೌಂದರ್ಯದ ಬಗ್ಗೆ ಅಸಮಾಧಾನವನ್ನು ಹೊಂದಿರುವವರಾಗಿರುತ್ತಾರೆ.

ಏನಿದು ಟೀನೇಜ್ ಡಯಟಿಂಗ್ / ಫಾಡ್ ಡಯಟಿಂಗ್
ಸುಂದರವಾದ ತೆಳು ಶರೀರವನ್ನು ಪಡೆಯಲು ಯುವಜನತೆ ತಮ್ಮ ವರ್ತನೆ, ಆಹಾರಾಭ್ಯಾಸ, ವ್ಯಾಯಾಮದ ತೀವ್ರತೆಗಳನ್ನೂ ಕೂಡ ಬದಲಾಯಿಸುತ್ತಿದ್ದಾರೆ. ಈ ಡಯಟ್ ಪ್ಲ್ಯಾನ್‌ಗಳನ್ನು ತಾತ್ಕಾಲಿಕವಾಗಿದ್ದು ಕೇವಲ ತೂಕ ಕಳೆದುಕೊಳ್ಳುವುದಕ್ಕಷ್ಟೇ ಕೇಂದ್ರಿಕರಿಸುತ್ತವೆ. ಹಲವರು ಡಯಟ್ ಮಾತ್ರೆಗಳು, ಸ್ವಯಂ ಪ್ರೇರಿತವಾಗಿ ಆಹಾರ ಸೇವಿಸಿದ ನಂತರ ಬಾಯಿಗೆ ಬೆರಳಿಟ್ಟು ವಾಂತಿ ಮಾಡುವ ಅಭ್ಯಾಸ, ಉಪವಾಸ, ಊಟ ತಿಂಡಿಗಳನ್ನು ಬಿಡುವುದು, ಲಾಕ್ಸೆಟಿವ್ ಹಾಗೂ ಡೈಯೂರೆಟಿಕ್‌ಗಳ ಬಳಕೆಯಂತಹ ಡಯಟ್ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ದುಷ್ಪರಿಣಾಮಗಳು :
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಸಾಮಾನ್ಯವಾದ ತೂಕವನ್ನು ಹೊಂದಿದ್ದರೂ ಸಹ “ಫೀಲ್ ಫ್ಲಾಟ್” ಧೋರಣೆ ಹೆಚ್ಚಾಗುತ್ತಿದೆ. ಇದು ಸಾಮಾಜಿಕ ಜಾಲತಾಣ, ಸಹಪಾಠಿಗಳ ಒತ್ತಡದ ಪ್ರಭಾವಗಳಿರಬಹುದಾಗಿದೆ. ಅಹಿತಕರ ಆಹಾರಾಭ್ಯಾಸಗಳು ಅಥವಾ ಕ್ರಾಷ್ ಡಯಟ್ ಅನೇಕ ಅಪೌಷ್ಠಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಅಪೌಷ್ಠಿಕತೆಯಿಂದ ಹಾಗೂ ದೇಹಕ್ಕೆ ಅವಶ್ಯವಿರುವ ಕಾರ್ಬೋಹೈಡ್ರೇಟ್, ಫ್ಯಾಟ್ , ಪ್ರೋಟೀನ್, ಖನಿಜಾಂಶಗಳು, ವೈಟಮಿನ್‌ಗಳ ಕೊರತೆಯಿಂದ ಬೆಳವಣಿಗೆಯಲ್ಲಿ ವ್ಯತ್ಯಯವಾಗಬಹುದಾಗಿದೆ. ಯುವತಿಯರಲ್ಲಿ ಮುಟ್ಟಿನ ಏರುಪೇರುಗಳನ್ನು ಗಮನಿಸಬಹುದಾಗಿದೆ. ಮೂಳೆಗಳಲ್ಲಿನ ಸಾಂದ್ರತೆ ಕಡಿಮೆಯಾಗಬಹುದಾಗಿದೆ.

ಮಾನಸಿಕ ಪರಿಣಾಮಗಳು :
ಅಹಿತಕರ ಡಯಟ್ ಪ್ಲಾನ್‌ಗಳಿಂದ ಮಾನಸಿಕ ಖಿನ್ನತೆ, ಅಶಾಂತಿ, ಮನಸ್ಸನ್ನು ಕೇಂದ್ರಿಕರಿಸುವ ಶಕ್ತಿ, ಏಕಾಗ್ರತೆಯ ಕೊರತೆಯುಂಟಾಗಬಹುದಾಗಿದೆ. ಹೆಚ್ಚು ದಿನಗಳ ಕಾಲ ಕ್ರಾಷ್ ಡಯಟ್ ಮಾಡಿದ ನಂತರ ಇದ್ದಕಿದ್ದಂತೆ ಹೆಚ್ಚು ಆಹಾರ ಸೇವಿಸುವ / ದೊಡ್ಡ ಭೋಜನದ ಅಭ್ಯಾಸಕ್ಕೆ ಬಲಿಯಾಗಬಹುದು.

ಮಾಡಬಹುದಾದ್ದೇನು ?
ದೇಹದ ತೂಕಕ್ಕಿಂತ ಆರೋಗ್ಯಕರವಾಗಿರುವುದು ಮುಖ್ಯವಾಗುತ್ತದೆ. ನೈಜತೆಗೆ ವಿರುದ್ಧವಾದ ತೂಕ ಕಳೆದುಕೊಳ್ಳುವ ಗುರಿಯನ್ನು ದೂರ ಮಾಡಬೇಕು. ಸೇವಿಸುವ ಆಹಾರ ಹಾಗೂ ಅದರ ಪ್ರಾಮುಖ್ಯತೆಯನ್ನು ಅರಿವುದು ಮುಖ್ಯವಾಗುತ್ತದೆ. ನಮ್ಮ ಜೀವನಶೈಲಿಗೆ ಅನುಗುಣವಾಗಿ ಆಹಾರ ಸೇವನೆ ಅವಶ್ಯಕ.

ಸಿಹಿ ತಿನಿಸು, ಪಾನೀಯಗಳು, ಜಂಕ್ ಆಹಾರಗಳ ಸೇವನೆಯನ್ನು ಮಿತವಾಗಿ ಬಳಸುವುದು ಸೂಕ್ತ. ಶರೀರಕ್ಕೆ ಅನುಗುಣವಾಗಿ ದೈಹಿಕ ವ್ಯಾಯಾಮ, ಯೋಗ, ಧ್ಯಾನ ಅಥವಾ ದೈಹಿಕ ಇತರೆ ಚಟುವಟಿಕೆ, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಜಡತ್ವವನ್ನು ಚಿಂತಿಸುವ ಬದಲಾಗಿ ಆಹಾರದ ಪೌಷ್ಠಿಕತೆಯ ಬಗ್ಗೆ ಗಮನಹರಿಸುವುದು ಉತ್ತಮ. ಬೆಳವಣಿಗೆಗ ಅವಶ್ಯಕವಿರುವ ಪೌಷ್ಠಿಕಾಂಶದ ಬಗ್ಗೆ ಗಮನಹರಿಸುವುದು ಒಳಿತು.

ಆಹಾರದಲ್ಲಿ ಕೊಬ್ಬಿನಾಂಶದ ಅವಶ್ಯಕತೆ ದೇಹದ ಬೆಳವಣಿಗೆಗೆ ಹಾಗೂ ವಿಟಮಿನ್‌ಗಳನ್ನು ಜೀವಕೋಶ ಹೀರಿಕೊಳ್ಳಲು ಮತ್ತು ಶರೀರದ ಇತರೆ ಕಿಣ್ವಗಳು ಹಾಗೂ ಹಾರ್ಮೋನ್‌ಗಳ ಕಾರ್ಯ ನಿರ್ವಹಣೆಗೆ ಅವಶ್ಯಕವಿದ್ದು ಅತಿಯಾಗಿ ಆಹಾರದಲ್ಲಿ ಕೊಬ್ಬನ್ನು ಕಡಿತಗೊಳಿಸುವುದು ಒಳಿತಲ್ಲ.

(ಲೇಖಕರು: ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.