ದಿನ ಭವಿಷ್ಯ: ಸತ್ಕಾರ್ಯದ ಯತ್ನಗಳು ಕೈಗೂಡಲು ತಾಳ್ಮೆ ವಹಿಸುವುದು ಸೂಕ್ತ
Published 22 ನವೆಂಬರ್ 2024, 18:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಊರಿನ ಪ್ರಮುಖರಿಂದ ಅಪೇಕ್ಷೆ ಇಲ್ಲದಿದ್ದರೂ ಬೇಕಾದ ಕೆಲಸಗಳು ನಡೆಯಬಹುದು. ಒಟ್ಟಿನಲ್ಲಿ ಯಾವುದೇ ಬದಲಾವಣೆ ಇದ್ದರೂ ಸೂಕ್ತವಾದ ಕಾಲ. ಹಣದ ವಿಚಾರದಲ್ಲಿ ಮಿತ ವ್ಯಯಿಗಳಾಗುವಿರಿ.
ವೃಷಭ
ತೈಲ ವ್ಯಾಪಾರ ವ್ಯವಹಾರಗಳಲ್ಲಿ ಪೈಪೋಟಿಗಳು ಹೆಚ್ಚಿದ್ದರೂ ಯೋಚನೆಗೆ ಸರಿಯಾದ ತೃಪ್ತಿಕರ ಆದಾಯವಿರುವುದು. ಉದ್ದೇಶದಲ್ಲಿಯೂ ಯಾರಿಗೂ ಸಾಲದ ರೂಪದಲ್ಲಿ ಹಣ ನೀಡಬೇಡಿ.
ಮಿಥುನ
ಲೆಕ್ಕಪತ್ರಗಳಿಲ್ಲದೆ ಕೇವಲ ನಂಬಿಕೆಯಲ್ಲಿ ವ್ಯವಹಾರ ಮಾಡುವುದು ಸರಿಯಲ್ಲ. ಸತ್ಕಾರ್ಯದ ಯತ್ನಗಳು ಕೈಗೂಡಲು ತಾಳ್ಮೆ ವಹಿಸುವುದು ಸೂಕ್ತ. ಗೆಳೆಯರ ಅಪರೂಪದ ಭೇಟಿ ಜತೆ ಮಾತುಕತೆ ನಡೆಯುವುದು.
ಕರ್ಕಾಟಕ
:ಕೈಗೊಂಡ ಸಂಸ್ಥೆಯ ಅಥವಾ ವೈಯಕ್ತಿಕವಾದ ಅಭಿವೃದ್ಧಿಯ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆದು ಹೋಗುವುದು. ಸಾಂಸಾರಿಕ ಸುಖದಲ್ಲಿ ಅಭಿವೃದ್ಧಿಯನ್ನು ಇಂದು ನೀವು ಅಪೇಕ್ಷಿಸಬಹುದು.
ಸಿಂಹ
ಆಪ್ತರ ಕಷ್ಟಗಳ ಕಡೆಗೆ ಗಮನ ಕೊಡಿ. ಅದರಿಂದ ಸಂಬಂಧಗಳೂ ವೃದ್ಧಿಯಾಗುತ್ತವೆ. ಜತೆಯಲ್ಲಿ ಪುಣ್ಯ ಸಂಪಾದನೆಯೂ ಆಗುವುದು. ಭಕ್ತಿಯಿಂದ ಮಲ್ಲಿಕಾರ್ಜುನನನ್ನು ಆರಾಧಿಸಿ ಶುಭವಾಗುವುದು.
ಕನ್ಯಾ
ಕಾರ್ಯರಂಗದಲ್ಲಿ ಉತ್ಸಾಹದ ಚಟುವಟಿಕೆಯಿಂದ ಸಂತೋಷ ಇರುವುದು. ಮನೆಯ ವಿಷಯಗಳತ್ತ ಹಾಗೂ ದೈನಂದಿನ ಆಗುಹೋಗುವ ಬಗ್ಗೆ ಗಮನಹರಿಸಿ. ಮಕ್ಕಳಿಗೆ ಜೀವನದ ಪಾಠವನ್ನು ಹೇಳುವಿರಿ.
ತುಲಾ
ಸದಾಕಾಲ ಕಾರ್ಯಪ್ರವೃತ್ತರಾಗಿ ದುಡಿಯುವ ಉತ್ತಮ ಫಲಗಳು ಅನುಭವಕ್ಕೆ ಬರಲಿವೆ. ಅನ್ಯರಿಗೆ ಸಹಾಯ ಮಾಡುವಾಗ ಪ್ರತಿಫಲವನ್ನು ಅಪೇಕ್ಷಿಸಬೇಡಿ. ಹೊಸವಾಹನ ಅಥವಾ ಮನೆ ಖರೀದಿಯ ಯೋಗವಿದೆ.
ವೃಶ್ಚಿಕ
ವ್ಯವಸ್ಥಿತವಾಗಿ ದಿನಚರಿ ರೂಪಿಸಿಕೊಂಡರೆ ಕೆಲಸಗಳನ್ನು ಅಂತಿಮ ಹಂತಕ್ಕೆ ತಲುಪಿಸಲು ಸಾಧ್ಯವಾಗುತ್ತದೆ. ಪಾಲುದಾರಿಕೆಯಲ್ಲಿ ಮೋಸ ಹೋಗುವ ಲಕ್ಷಣಗಳಿರುವುದರಿಂದ ಹೆಚ್ಚಿನ ಗಮನವಿರಲಿ.
ಧನು
ವಂಚನೆಯ ಕಡೆಗೆ ಕರೆದೊಯ್ಯುವ ಪ್ರಯತ್ನ ಸ್ನೇಹಿತರ ಬಳಗದಲ್ಲಿ ನಡೆಯಲಿದೆ. ಉದ್ಯೋಗ ವ್ಯವಹಾರದಲ್ಲಿನ ತಲ್ಲೀನತೆ ಧನಾರ್ಜನೆಗೆ ಕಾರಣವಾಗುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಮಕರ
ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವು ಪಡೆಯುವಲ್ಲಿ ಯಶಸ್ವಿಯಾಗುವಿರಿ. ಅತಿ ಸರಳತೆಯನ್ನು ಸಹಚರರು ದುರುಪಯೋಗ ಪಡಿಸಿಕೊಳ್ಳುವರು. ಸ್ವತಂತ್ರವಾಗಿ ಮಾಡುವ ವ್ಯವಹಾರದಲ್ಲಿ ಯಶಸ್ಸು ಲಭಿಸುವುದು.
ಕುಂಭ
ಪೀಠೋಪಕರಣಗಳ ವ್ಯಾಪಾರಸ್ಥರು ಪ್ರದರ್ಶನ ಮಾರಾಟದಂಥ ಯೋಜನೆಯಿಂದ ಅಥವಾ ಜಾಹೀರಾತುಗಳ ಮೂಲಕ ಬೆಳಕಿಗೆ ಬರುವ ಪ್ರಯತ್ನ ಮಾಡಬಹುದು. ಧಾರ್ಮಿಕ ಶ್ರದ್ಧೆ ಬೆಳೆಸಿಕೊಳ್ಳಿ
ಮೀನ
ವ್ಯವಹಾರದಲ್ಲಿ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ತಂದುಕೊಳ್ಳುವುದು ಅನಿವಾರ್ಯ. ಮಕ್ಕಳ ಸಂಗೀತ ಹಾಗೂ ಚಿತ್ರಕಲೆಯ ಅಭಿರುಚಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದು.