ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 27 ಗುರುವಾರ 2024– ಸಮಸ್ಯೆಗಳು ಹಿಮದಂತೆ ಕರಗಲಿವೆ
Published 26 ಜೂನ್ 2024, 18:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ರಕ್ಷಕರು ಕಾವಲಿಗೆ ಇರುವ ಸಮಯದಲ್ಲಿ ಯಾವುದೇ ಸೋಮಾರಿತನ ಮಾಡಬೇಡಿ. ನಿರ್ಲಕ್ಷ್ಯ ಹಲವು ನಷ್ಟಕ್ಕೆ ಕಾರಣವಾಗಬಹುದು. ಶಾಂತಿಯಿಂದ ವರ್ತಿಸಿದರೆ ಸಮಸ್ಯೆಗೆ ಪರಿಹಾರ ಲಭ್ಯ.
ವೃಷಭ
ಸಕುಟುಂಬ ಸಮೇತರಾಗಿ ಮನೆದೇವರ ದರ್ಶನ ಮಾಡುವ ಆಸೆ ಕನಸಾಗಿ ಉಳಿಯುತ್ತದೆ. ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಿಸುವಿರಿ. ವಸ್ತ್ರಾಭರಣ ಖರೀದಿ ಯೋಗವಿದೆ.
ಮಿಥುನ
ಈ ಕ್ಷಣದಲ್ಲಿ ಹಣವು ಸಮೃದ್ಧವಾಗಿದೆ ಎಂದು ಮನಸ್ಸಿಗೆ ಬಂದ ಹಾಗೆ ಖರ್ಚು ಮಾಡುವ ಪ್ರವೃತ್ತಿ ಬೇಡ. ಮಗಳು ವಿವಾಹ ವಿಚಾರದಲ್ಲಿ ತೋರುತ್ತಿರುವ ಅಸಡ್ಡೆ ಅಸಮಾಧಾನಕ್ಕೆ ಕಾರಣವಾಗುವುದು.
ಕರ್ಕಾಟಕ
ಆತ್ಮೀಯ ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯವನ್ನು ಹೊಂದುವಿರಿ. ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ. ಸತ್ಫಲಗಳು ದೊರಕಲಿದೆ.
ಸಿಂಹ
ದಿನಚರಿಯ ಬದಲಾವಣೆಗಾಗಿ ಸಣ್ಣ ಪ್ರಮಾಣದ ಪ್ರವಾಸಕ್ಕಾಗಿ ಯೋಚನೆ ನಡೆಸುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರುಕುಳ ಸಂಗಡಿಗರನ್ನು ರೋಸಿಹೋಗುವಂತೆ ಮಾಡುತ್ತದೆ.
ಕನ್ಯಾ
ಅನಾರೋಗ್ಯದಲ್ಲೂ ಲವಲವಿಕೆಯ ಓಡಾಟ ಇತರರ ಅಸೂಯೆಗೆ ಕಾರಣಾವಾಗುತ್ತದೆ. ಆಪ್ತರು ಹಲವಾರು ಸಲಹೆಗಳನ್ನು ನೀಡಿದರೂ ಅದು ಸರಿ ಹೋಗದೆ ಕ್ಷಿಪ್ರವಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ತುಲಾ
ಸಾಧನಗಳ ತಯಾರಕ, ಮಾರಾಟಗಾರರಿಗೆ ಲಾಭದಾಯಕ ದಿನ. ಅರಣ್ಯದಲ್ಲಿ ಕಾರ್ಯ ನಿಮಿತ್ತವಾಗಿ ಸಂಚರಿಸುವವರಿಗೆ ವಿಷಜಂತುಗಳ ಕಾಟ ಇರಬಹುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಧ್ಯಯನ ಅಗತ್ಯ.
ವೃಶ್ಚಿಕ
ವೃತ್ತಿಯಲ್ಲಿ ಬಡ್ತಿಯನ್ನು ಬಯಸುವವರಿಗೆ, ಸ್ಥಾನ ಬದಲಾವಣೆಗೂ ತಯಾರಿರಬೇಕಾಗುತ್ತದೆ. ಮಳೆಯ ಕಾರಣದಿಂದ ಮನೆಯ ದುರಸ್ತಿಯ ಕೆಲಸಗಳನ್ನು ಮಾಡಿಸುವ ಅನಿವಾರ್ಯ ಬರಲಿದೆ.
ಧನು
ಆರಕ್ಷಕ ಸಿಬ್ಬಂದಿಗೆ ಹೆಚ್ಚಿನ ಕೆಲಸಗಳು ಒದಗಿ ಬರಲಿವೆ. ಬುದ್ಧಿವಂತಿಕೆ, ನಡೆ-ನುಡಿಯಿಂದ ಸಮಸ್ಯೆಗಳು ಹಿಮದಂತೆ ಕರಗಲಿವೆ. ಪಾರಂಪರಿಕವಾಗಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುವನ್ನು ಕಳೆಯಬೇಡಿ.
ಮಕರ
ತಾಂತ್ರಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೆಲವರಿಗೆ ಪ್ರಶಸ್ತಿ ಲಭಿಸುವಂತೆ ಆಗುವುದು. ಮನುಷ್ಯ ಪ್ರಯತ್ನದ ಜೊತೆ ಆಂಜನೇಯನ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿ. ವೈದ್ಯರು ನೀಡಿದ ಸಲಹೆಯನ್ನು ತಪ್ಪದಿರಿ.
ಕುಂಭ
ಕಾದಂಬರಿಪ್ರಿಯರಿಗೆ ಅನಿರೀಕ್ಷಿತವಾಗಿ ಇಷ್ಟಪಡುವ ಪುಸ್ತಕ ದೊರೆಯುವುದು. ಸಂಗಡಿಗರು ಅಧರ್ಮದ ಮಾರ್ಗದಿಂದ ಹೂಡಿಕೆ ಮಾಡುತ್ತಿರುವುದು ಅನುಭವಕ್ಕೆ ಬರಲಿದೆ.
ಮೀನ
ಕೆಲವೊಂದು ವಿಚಾರಗಳನ್ನು ಅರಿತ ಮೇಲೆ ನೀವಂದುಕೊಂಡ ರೀತಿಯ ಭವಿಷ್ಯ ಇರುವುದೇ ಎಂಬ ಚಿಂತೆ ಉಂಟಾಗುತ್ತದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದಂತೆ ಆಗಲಿದೆ. ಇತರರನ್ನು ಗೌರವಿಸಿ.