ಕಳೆದ ಶುಕ್ರವಾರ ಏರ್‌ಟೆಲ್, ದೆಹಲಿ, ಆಂಧ್ರಪ್ರದೇಶ, ಕೇರಳ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಗುಜರಾತ್ ದೂರವಾಣಿ ವೃತ್ತಗಳಲ್ಲಿ ಕರೆ ದರಗಳನ್ನು ಶೇ 20ರಿಂದ 25ರಷ್ಟು ಹೆಚ್ಚಿಸಿತ್ತು. ಮೂರನೆಯ ತಲೆಮಾರಿನ ತರಂಗಾಂತರ ಸೇವೆ (3ಜಿ) ಮತ್ತು ಬ್ರಾಡ್‌ಬ್ಯಾಂಡ್ ನಿಸ್ತಂತು ಸಂಪರ್ಕಕ್ಕಾಗಿ (ಬಿಡ್ಲ್ಯುಎ) ಕಂಪೆನಿ ಹೆಚ್ಚಿನ ಮೊತ್ತ ಪಾವತಿಸಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಏರ್‌ಟೆಲ್ ಪ್ರತಿಕ್ರಿಯಿಸಿದೆ.