ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸುತ್ತಲೇ ವಿಪಕ್ಷಗಳ ಶಾಸಕರು ಗಿರಕಿ ಹೊಡೆಯುತ್ತಿದ್ದರು.

ವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಹಿಂದೆ ಬೆಂಗಳೂರಿನಲ್ಲಿ ನಡೆದ ಅಧಿವೇಶನದ ವೇಳೆ, ಬಿಜೆಪಿ–ಜೆಡಿಎಸ್ ಶಾಸಕರು ಜಂಟಿ ಹೋರಾಟ ನಡೆಸಿದ್ದಿದೆ. ಜೆಡಿಎಸ್ ಪಕ್ಷ ಎನ್ಡಿಎ ಮೈತ್ರಿಕೂಟದ ಜತೆಗೆ ಕೈಜೋಡಿಸಿದ ನಂತರ ನಡೆಯುತ್ತಿರುವ ಬೆಳಗಾವಿ ಅಧಿವೇಶನದ ಮೊದಲ ದಿನ ವಿಜಯೇಂದ್ರ ಅವರು, ವಿರೋಧ ಪಕ್ಷದ ಮೊಗಸಾಲೆಗೆ ಬಂದು ಕುಳಿತಿದ್ದರು. ಮೊಗಸಾಲೆಗೆ ಬಂದ ಎಲ್ಲ ಎರಡು ಪಕ್ಷಗಳ ಶಾಸಕರು, ವಿಜಯೇಂದ್ರ ಬಳಿ ತೆರಳಿ ನಮಸ್ಕರಿಸಿ, ಕುಶಲೋಪರಿ ವಿಚಾರಿಸಿ ಹೋಗುತ್ತಿದ್ದರು.

ಜೆಡಿಎಸ್ನ ಎಚ್.ಡಿ. ರೇವಣ್ಣ ಬಂದಾಗ, ಎದ್ದು ಅವರ ಬಳಿ ಹೋದ ವಿಜಯೇಂದ್ರ ಅವರಿಗೆ ನಮಸ್ಕರಿಸಿ ಕೆಲ ಕ್ಷಣ ಮಾತುಕತೆ ನಡೆಸಿದರು.

ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಬಂದು, ವಿಜಯೇಂದ್ರ ಜತೆ ಕೆಲ ಹೊತ್ತು ಮಾತನಾಡಿದರು.

ವಿಜಯೇಂದ್ರ ಕುಳಿತಿದ್ದ ಆಸನದ ಪಕ್ಕವೇ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಕೊಠಡಿಯಿತ್ತು. ಅಧ್ಯಕ್ಷರನ್ನು ಭೇಟಿಯಾದ ಬಳಿಕವಷ್ಟೇ ಉಳಿದವರು, ವಿಪಕ್ಷ ನಾಯಕನನ್ನು ಭೇಟಿಯಾದರು. ವಿಜಯೇಂದ್ರ ನೇಮಕಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಅರವಿಂದ ಬೆಲ್ಲದ ಮಾತ್ರ, ನೇರವಾಗಿ ಅಶೋಕ ಅವರಿದ್ದ ಕೊಠಡಿಗೆ ತೆರಳಿದರು.

ಗೆಲ್ಲಿಸಿಕೊಂಡು ಬರಲಿಲ್ಲ; ಮುನಿರತ್ನಗೆ ಕೆಣಕಿದ ವಿಜಯೇಂದ್ರ

‘ತೆಲಂಗಾಣದ ಎರಡು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ಕೊಟ್ಟಿದ್ದರು. ಒಂದರಲ್ಲಿ 90 ಸಾವಿರ, ಮತ್ತೊಂದರಲ್ಲಿ 85 ಸಾವಿರ ವೋಟು ತಂದುಕೊಟ್ಟೆ’ ಎಂದು ಬಿಜೆಪಿ ಶಾಸಕ ಮುನಿರತ್ನ ಅವರು ವಿಜಯೇಂದ್ರ ಎದುರು ಹೆಮ್ಮೆಯಿಂದ ಹೇಳಿಕೊಂಡರು.

‘ಅಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ ಅಲ್ಲವೇ? ಗೆದ್ದಿದ್ದರೆ ಗೆಲ್ಲಿಸಿಕೊಂಡು ಬಂದೆ ಎಂದು ಹೇಳುತ್ತಿದ್ದೀರಿ. ಮತ ತಂದುಕೊಡುವುದಕ್ಕಿಂತ ಗೆಲ್ಲಿಸಿಕೊಂಡು ಬರುವುದು ಮುಖ್ಯ’ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

‘ಹಿಂದಿನ ಚುನಾವಣೆಯಲ್ಲಿ 20 ಸಾವಿರ ಬಂದಿತ್ತು. ಈಗ ಅಷ್ಟರಮಟ್ಟಿಗೆ ಹೆಚ್ಚಳವಾಗಿದೆ’ ಎಂದು ಮುನಿರತ್ನ ಸಮಜಾಯಿಷಿ ನೀಡಿದರೂ ವಿಜಯೇಂದ್ರ ಗಮನಿಸಲಿಲ್ಲ.

ನಿಗಮ ಯಾರಿಗೆ ಬೇಕು; ಶಾಸಕರ ಆಂಬೋಣ

ಆಡಳಿತ ಪಕ್ಷದ ಮೊಗಸಾಲೆಯಲ್ಲಿ ನಿಗಮ, ಮಂಡಳಿಗಳ ನೇಮಕಾತಿ ಕುರಿತು ತೀವ್ರ ಚರ್ಚೆ ನಡೆಯುತ್ತಿತ್ತು. ನಿಗಮ, ಮಂಡಳಿಗಳ ಹುದ್ದೆಗಳನ್ನು ಪಡೆದರೆ ಮುಂದೆ ಸಚಿವ ಸ್ಥಾನ ದೊರಕದು ಎಂಬ ಆತಂಕವನ್ನು ಹಲವು ಶಾಸಕರು ಹೊರ ಹಾಕುತ್ತಿದ್ದುದು ಕಂಡುಬಂತು.

‘ಯಾರಿಗೆ ಬೇಕು ನಿಗಮ, ಮಂಡಳಿ? ಈಗ ಇದನ್ನು ಕೊಟ್ಟರೆ ನಮ್ಮನ್ನು ಮಂತ್ರಿ ಮಾಡುವುದಿಲ್ಲ ಎಂಬುದು ಖಚಿತ. ನಿಗಮ, ಮಂಡಳಿ ತೆಗೆದುಕೊಂಡು ಏನು ಮಾಡುವುದು...’ ಎಂದು ಕಿತ್ತೂರು ಕರ್ನಾಟಕ ಭಾಗದ ಶಾಸಕರೊಬ್ಬರು ಮತ್ತೊಬ್ಬ ಶಾಸಕರೊಂದಿಗೆ ಚರ್ಚೆಯಲ್ಲಿದ್ದರು. ಮಾತಿನ ಮಧ್ಯೆಯೇ ಸಿಟ್ಟು ಪ್ರದರ್ಶಿಸಿದ ಅವರು, ಅಶ್ಲೀಲ ಪದಗಳನ್ನೂ ಬಳಸಿ ಬೈಯ್ಯತೊಡಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.