ದಸರೆಗೆ ಮಳೆಯ ಸಿಂಚನ
ಮೈಸೂರು: ನಗರದಲ್ಲಿ ಶುಕ್ರವಾರ ಸಂಜೆ ಮಳೆ ಸುರಿದು, ದಸರಾ ಸಂಭ್ರಮಕ್ಕೆ ತಂಪೆರೆಯಿತು. ಸಿದ್ದಾರ್ಥನಗರ, ನಗರ ಹೊರ ವಲಯದ ಉತ್ತನಹಳ್ಳಿ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಯಿತು. ಸಂಜೆ ನಾಲ್ಕು ಗಂಟೆ ವೇಳೆಗೆ ಮೋಡಗಳು ದಟ್ಟೈಸಿ ದಿಢೀರನೆ ಸುರಿಯತೊಡಗಿದ ಮಳೆಯಿಂದ ರಸ್ತೆಯಲ್ಲಿದ್ದವರು ವಿಚಲಿತರಾದರು. ಮಳೆ ನಿಲ್ಲುವವರೆಗೂ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನಗರದ ಒಳಪ್ರದೇಶಗಳಲ್ಲಿ ನಿರಂತರವಾಗಿ ಸಾಧಾರಣ ಮಳೆಯಾಯಿತು. ರಾತ್ರಿ 8.30ರ ನಂತರ ಮತ್ತೆ ತುಂತುರು ಮಳೆ ಸುರಿಯಿತು.