ಬೆಂಗಳೂರು: ‘ಇಂದಿನ ಯುವ ಜನರು ಕನ್ನಡದಲ್ಲಿ ಹೆಚ್ಚಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಎರಡು ಸಾವಿರ ವರ್ಷದಷ್ಟು ಇತಿಹಾಸವಿರುವ ನಮ್ಮ ಕನ್ನಡ ಭಾಷೆ ಬಗ್ಗೆ ನಾವೆಲ್ಲರೂ ಗರ್ವ ಪಡಬೇಕು’ ಎಂದು ಮೂರ್ತಿ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸಪ್ನ ಪುಸ್ತಕ ಮಳಿಗೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 68 ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಾವು ಎಷ್ಟೇ ಭಾಷೆ ಕಲಿತರೂ ಕನ್ನಡವೇ ನಮ್ಮ ತಾಯಿ ಭಾಷೆ. ಈ ತಾಯಿ ಭಾಷೆಯನ್ನು ಪ್ರೀತಿಸಬೇಕು. ಲೇಖಕರು, ಸಾಹಿತಿಗಳು ತಮ್ಮ ಜೀವನವನ್ನೇ ಕನ್ನಡಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಕನ್ನಡಿಗರು ಸಾಹಿತ್ಯ ಕೃತಿಗಳನ್ನು ಕೊಂಡು ಓದಬೇಕು’ ಎಂದರು.

ಪುಸ್ತಕ ಪರಿಚಯ ಮಾಡಿಕೊಟ್ಟ ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಶಿಕ್ಷಣ, ಬಣ್ಣದ ಲೋಕ, ಹಾಸ್ಯ ಬರಹಗಳು, ವ್ಯಕ್ತಿತ್ವ ವಿಕಸನ, ಕೃಷಿ, ವಿಜ್ಞಾನ, ನಾಟಕ, ಜಾನಪದ, ಬುಡಕಟ್ಟು ಜನಾಂಗದ ವಿಚಾರಗಳ ಕುರಿತ 68 ಪುಸ್ತಕಗಳು ವೈವಿಧ್ಯತೆಯಿಂದ ಕೂಡಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೆ. ಮರುಳಸಿದ್ದಪ್ಪ, ‘ಪುಸ್ತಕಗಳು ಒಂದು ಭಾಷೆಯ ದೊಡ್ಡ ಸಾಧನ. ಏಕಕಾಲದಲ್ಲಿ 68 ಪುಸ್ತಕಗಳನ್ನು ಹೊರತರುವುದು ಸುಲಭವಲ್ಲ. ಸಪ್ನ ಪುಸ್ತಕ ಮಳಿಗೆ ಈ ಸಾಧನೆ ಮಾಡಿದೆ’ ಎಂದರು.

ಬಿಡುಗಡೆಗೊಂಡಿರುವ 68 ಪುಸ್ತಕಗಳು ಸಪ್ನ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ. ಜೊತೆಗೆ, www.sapnaonline.com ಮೂಲಕವೂ ಪುಸ್ತಕಗಳನ್ನು ಖರೀದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.