ಸವಣೂರು (ಹಾವೇರಿ ಜಿಲ್ಲೆ): ಸವಣೂರು ತಾಲ್ಲೂಕಿನ ಶಿರಬಡಗಿ ಗ್ರಾಮದ ತಾಂಡಾದಲ್ಲಿ ಮಂಗಳವಾರ ಮೇವಿನ ಬಣವೆಗೆ ಹೊತ್ತಿದ ಬೆಂಕಿ ನಂದಿಸಲು ಮುಂದಾದ ರೈತರೊಬ್ಬರು ಸಜೀವ ದಹನವಾಗಿದ್ದಾರೆ.

ಗಂಗಪ್ಪ ಮಂಗಲಪ್ಪ ಲಮಾಣಿ (68) ಮೃತರು. ಬಣವೆಗೆ ಹೊದಿಸಿದ್ದ ತಾಡಪತ್ರಿಯು ಹೊತ್ತಿಕೊಂಡು ರೈತನ ಮೇಲೆ ಬಿದ್ದ ಪರಿಣಾಮ ಗಂಗಪ್ಪ ಮೃತಪಟ್ಟರು ಎನ್ನಲಾಗಿದೆ.

ಸವಣೂರು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ದಾವಣಗೆರೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ ಕುಮಾರ, ಸಹಾಯಕ ಠಾಣಾಧಿಕಾರಿ ಎಂ.ಡಿ.ಗೋಕಾಕ, ಸಿಬ್ಬಂದಿ ಮಂಜುನಾಥ ಮೇಟಿ, ಸುರೇಶ ಗಂಜಳ, ವಿನಯ ವಡೆಯರಹಟ್ಟಿ, ಬಸವರಾಜ ಸಂಕಣ್ಣವರ, ಶಿವರಾಜಕುಮಾರ, ನಿಕಿಲ್, ಸ್ವಾಮಿಲಿಂಗ ಗೊಲ್ಲರ, ಮಂಜುನಾಥ ಮಾಳಗಿಮನಿ, ಮಂಜುನಾಥ ತವರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.