ಚಿಂಚೋಳಿ (ಕಲಬುರಗಿ ಜಿಲ್ಲೆ): ಪಟ್ಟಣದ ಹೊರ ವಲಯದ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕದ ಪುನರಾರಂಭಕ್ಕೆ ಹೋರಾಟ ನಡೆಸುತ್ತಿರುವ ಮುಖಂಡರನ್ನು ತಾಲ್ಲೂಕು ಆಡಳಿತ ಕಚೇರಿಯಲ್ಲಿ ದಿಗ್ಬಂಧನ ಹಾಕಿದ ಘಟನೆ ಮಂಗಳವಾರ ನಡೆದಿದೆ.

ಹೋರಾಟಗಾರರ ಜಾಡು ಹಿಡಿದ ಪೊಲೀಸರು, ಅವರನ್ನು ತಾಲ್ಲೂಕು ಆಡಳಿತ ಕಚೇರಿಗೆ ಕರೆ ತಂದು ಸಭಾಂಗಣದಲ್ಲಿ ಕೂಡಿ ಹಾಕಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ತಾಲ್ಲೂಕು ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ ಅವರು ಹೋರಾಟಗಾರರ ಜತೆಗೆ ಚರ್ಚಿಸಿದರು.

ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ಚಿತ್ರಶೇಖರ ಪಾಟೀಲ, ಅಖಿಲ ಭಾರತ ರೈತ ಹಿತರಕ್ಷಣಾ ಸಂಘದ ನಂದಿಕುಮಾರ ಪಾಟೀಲ, ಜನಾರ್ದನ ಕುಲಕರ್ಣಿ, ಸೂರ್ಯಕಾಂತ ಹುಲಿ ಸೇರಿದಂತೆ ಹಲವರನ್ನು ದಿಗ್ಬಂಧನದಲ್ಲಿದ್ದಾರೆ.

ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಸಚಿವ ಸಂಪುಟ ಸಭೆಗ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಕಲಬುರಗಿಗೆ ಬಂದಿದ್ದಾರೆ.

ಸಿದ್ಧಸಿರಿ ಎಥನಾಲ್ ಘಟಕದ ಪುನರಾರಂಭಕ್ಕೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ರೈತರು, ಹೋರಾಟಗಾರರು ತೆರಳುವ ಶಂಕೆಯಡಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಹೋರಾಟಗಾರರು ಹೊರ ಹೋಗುತ್ತೇವೆ ಎಂದರೂ ಪೊಲೀಸರು ಅವರನ್ನು ಬಿಡದೆ ಕೂಡಿ ಹಾಕಿದ್ದಾರೆ.

ಚಿಂಚೋಳಿ ಸಬ್ ಇನ್ಸ್ಪೆಕ್ಟರ್ ಗಂಗಮ್ಮ ಜಿನಿಕೇರಿ ಅವರ ತಂಡ ಹೋರಾಟಗಾರರನ್ನು ವಶಕ್ಕೆ ಪಡೆದಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ವೈಜ್ಞಾನಿಕ ಅಧಿಕಾರಿ ಶಿವರಾಜ, ರಾಕೇಶ ಮತ್ತು ಸಹಾಯಕ ಪರಿಸರ ಅಧಿಕಾರಿ ಸುಧಾರಾಣಿ, ಮಿರಿಯಾಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಡಿವಾಳಪ್ಪ ಬಾಗೋಡಿ ಮೊದಲಾದವರು ಇದ್ದರು.
.ಸಿದ್ಧಸಿರಿ ಎಥನಾಲ್, ಪವರ್ ಘಟಕ ಬಂದ್ಗೆ ಹೈಕೋರ್ಟ್ ತಡೆಯಾಜ್ಞೆ: ಯತ್ನಾಳ್.
ಮಾರ್ಗ ಮಧ್ಯೆ ತಡೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ತೆರಳುತ್ತಿದ್ದ ಚಿಂಚೋಳಿಯ ನೂರಾರು ರೈತರು ಹಾಗೂ ಹೋರಾಟಗಾರರನ್ನು ಪೊಲೀಸರು ಮಾರ್ಗ ಮಧ್ಯದಲ್ಲಿ ತಡೆದು ನಿಲ್ಲಿಸಿದ್ದಾರೆ.

ಮಹಾಗಾಂವ್ ಕ್ರಾಸ್, ಮಳಖೇಡ, ಅಶೋಕ್ ನಗರ, ಈದ್ಗ್ ಕ್ರಾಸ್, ಕೊಡ್ಲಿ ಕ್ರಾಸ್, ಕಮಲಾಪುರ, ಕಾಳಗಿ ಸೇರಿದಂತೆ ಹಲವೆಡೆ ರೈತರನ್ನು ಪೊಲೀಸರು ತಡೆಯೊಡ್ಡಿದ್ದಾರೆ. 'ಮುಖ್ಯಮಂತ್ರಿಗಳಿಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಜಿಲ್ಲಾಡಳಿತ ಅವಕಾಶ ಮಾಡಿಕೊಳ್ಳುತ್ತಿಲ್ಲ. ಪೊಲೀಸರ ಬಲವನ್ನು ಬಳಸಿ ನಮ್ಮನ್ನು ತಡೆಯೊಡ್ಡುತ್ತಿದೆ' ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಪೊಲೀಸ ಬಿಡು ಬಿಟ್ಟಿದದ್ದಾರೆ. ಇದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.