ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ‘ರೆಡ್ ಅಲರ್ಟ್’ ಇದ್ದಾಗ ಪ್ರವಾಸಿಗರನ್ನು ನಿಷೇಧಿಸುವ ಕ್ರಮಗಳು ಅಗತ್ಯ. ಕೇವಲ ಇದೊಂದೇ ಅಲ್ಲದೇ ಎಲ್ಲ ಜಲಪಾತಗಳೂ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಗರಿಷ್ಠ ಮುನ್ನಚ್ಚರಿಕೆ ವಹಿಸಬೇಕಿದೆ. ಪೊಲೀಸ್ ಭದ್ರತೆ, ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಮಳೆಗಾಲದಲ್ಲಿ ಗರಿಷ್ಠ ಮುನ್ನಚ್ಚರಿಕೆಯ, ಸುರಕ್ಷಿತ ಪ್ರವಾಸೋದ್ಯಮ ಬೇಕು ಎನ್ನುವುದು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವವರ ಒತ್ತಾಯವಾಗಿದೆ
ಕೊಡಗು ಜಿಲ್ಲೆಯಲ್ಲಿ ಸರಿಸಮಾರು 6 ತಿಂಗಳ ಕಾಲ ಪ್ರವಾಸೋದ್ಯಮ ವಲಯ ಮಂಕಾಗಿರುತ್ತದೆ. ಇದನ್ನೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಂಬಿಕೊಂಡು ಜಿಲ್ಲೆಯಲ್ಲಿ ಒಂದರಿಂದ ಒಂದೂವರೆ ಲಕ್ಷ ಮಂದಿ ಇದ್ದಾರೆ. ಸರ್ಕಾರ ಇನ್ನಾದರೂ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಇಂಬು ನೀಡಬೇಕಿದೆನಾಗೇಂದ್ರಪ್ರಸಾದ್, ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ಸ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ
ಕೊಡಗು ಜಿಲ್ಲೆಯಲ್ಲಿ ಮಾನ್ಸೂನ್ ಟೂರಿಸಂಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೂ ಮೊದಲು ಎಲ್ಲ ಬಗೆಯ ಪ್ರವಾಸಿ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು. ಗರಿಷ್ಠ ಮುನ್ನಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ಈ ಬಗೆಯ ಕ್ರಮಗಳನ್ನು ಕೈಗೊಂಡರೆ ನಿಜಕ್ಕೂ ಕೊಡಗಿನ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ಶಕ್ತಿ ಒದಗುತ್ತದೆ.ನವೀನ್ ಅಂಬೆಕಲ್, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಕೊಡಗು ಜಿಲ್ಲಾ ಉಪಾಧ್ಯಕ್ಷರು
ಅತಿಯಾದ ಮಳೆ ಗಾಳಿಯಿಂದಾಗಿ ರೆಡ್ ಅಲರ್ಟ್ ಘೋಷಣೆಯಾದರೆ ರೆಸಾರ್ಟ್ ಮತ್ತು ಹೋಂಸ್ಟೇನವರು ಯಾವುದೇ ಬುಕಿಂಗ್ ಮಾಡಿಕೊಳ್ಳುವಂತೆ ಇಲ್ಲ. ಜತೆಗೆ ಮಳೆಗಾಲದಲ್ಲಿ ವಿದ್ಯುತ್ ಕೂಡ ಇರುವುದಿಲ್ಲ. ಆದರೆ ನಮ್ಮೊಳಗಿನ ಖರ್ಚು ಮಾತ್ರ ಎಂದಿನಂತೆ ಇರುತ್ತದೆ. ಕೆಲಸದವರಿಗೆ ವೇತನ ಕೂಡಲೇಬೇಕು. ಹೀಗಾಗಿ ಮಳೆಗಾಲದಲ್ಲಿ ನಮ್ಮ ಬವಣೆ ಹೇಳತೀರದಾಗಿದೆ.ಅರುಣ್ ವಾಸ್, ಮಾಲೀಕರು ಗ್ರೀನ್ ವೀವ್ ಹೋಂ ಸ್ಟೆ ಚೂರಿಕಾಡ್ ಕುಟ್ಟ
ಮಳೆಗಾಲಕ್ಕೆ ರಸ್ತೆ ಎಷ್ಟೇ ಉತ್ತಮವಾಗಿದ್ದರೂ ನಿಲ್ಲುವುದಿಲ್ಲ. ಸಿಮೆಂಟ್ ರಸ್ತೆ ಆದರೂ ಬದಿ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ನಿಂತ ಮೇಲೆ ಇದರ ದುರಸ್ತಿಗೆ ಹಣ ವ್ಯಯವಾಗುತ್ತದೆ. ಬೇಸಿಗೆಯಲ್ಲಿ ಗಳಿಸಿದ್ದೆಲ್ಲ ಮಳೆಗಾಲದಲ್ಲಿ ಕರಗಿ ಹೋಗುತ್ತದೆ. ಶಾಶ್ವತವಾದ ರಸ್ತೆಗಳನ್ನು ನಿರ್ಮಿಸಬೇಕಿದೆ.ಸುರೇಶ್ ಚಂಗಪ್ಪ, ಜೇನುಗೂಡು ಹೋಂ ಸ್ಟೇ ಕಕ್ಕಬ್ಬೆ ವಿರಾಜಪೇಟೆ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.