ತಾವರಗೇರಾ: ‘ಜಾತಿ ಧರ್ಮಗಳ ವಿಚಾರ ಇಟ್ಟುಕೊಂಡು ಚುನಾವಣೆ ನಡೆಸುವ ಬಿಜೆಪಿ ನಾಯಕರು. ನರೇಂದ್ರ ಮೋದಿ ಹೆಸರಿನಿಂದ ಪ್ರಚಾರ ಮಾಡುತ್ತಿದ್ದು. ಮೋದಿ ಆಡಳಿತವನ್ನು ಮತದಾರರು ದಿಕ್ಕರಿಸುವ ಕಾಲ ಕೂಡಿ ಬಂದಿದೆ’ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು

ಪಟ್ಟಣದ ಪ.ಪಂ ಮುಖ್ಯ ಬೀದಿಯಲ್ಲಿ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಆದರೆ ಆ ಬಗ್ಗೆ ಕಾಳಜಿ ಇಲ್ಲದ ಪ್ರಧಾನಿಯವರು ಕೇವಲ ವೇಷಭೂಷಣಗಳ ಮೂಲಕ ಟಾಟಾ ಮಾಡುತ್ತ ಜನರನ್ನು ಮರಳು ಮಾಡುವಲ್ಲಿ ಹಾಗೂ ಸುಳ್ಳುಗಳನ್ನು ಹೇಳುವಲ್ಲಿ ಸರದಾರ ನೆನೆಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಈ ಬಾರಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ನಮ್ಮ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರನ್ನು ಗೆಲ್ಲಿಸಿ’ ಎಂದು ಕೋರಿದರು.

ಬಳಿಕ ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ಮೋದಿ ಅವರ ಹೆಸರಲ್ಲಿ ಅಧಿಕಾರಕ್ಕೆ ಬರುವುದು ತಪ್ಪು. ಆದ್ದರಿಂದಾಗಿ ನಾನು ಕಾಂಗ್ರೆಸ್ ಪಕ್ಷ ಸೇರಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಬಯಸುತ್ತೇನೆ’ ಎಂದರು.

ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ರಾಯರಡ್ಡಿ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಅಭ್ಯರ್ಥಿ ಕೆ.ರಾಜಖೇಖರ ಹಿಟ್ನಾಳ ಮಾತನಾಡಿದರು.

ಸ್ಥಳಿಯ ಮುಖಂಡ ಬಸನಗೌಡ ಪಾಟೀಲ್, ಡಾ.ಶ್ಯಾಮಿದಸಾಬ ದೋಟಿಹಾಳ, ಪಕ್ಷದ ಹಿರಿಯರು. ಕಾರ್ಯಕರ್ತರು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.