ತುಮಕೂರು: ಗುಣಮಟ್ಟ ಇಲ್ಲದ ಐ–ಫೋನ್ ಮಾರಾಟ, ದುರಸ್ತಿಗೆ ದುಬಾರಿ ಶುಲ್ಕ ವಿಧಿಸಿದ ಆ್ಯಪಲ್ ಕಂಪನಿ ಹಾಗೂ ಅದರ ಮಾರಾಟ ಮಳಿಗೆಯ ಮಾಲೀಕರಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಮೊಬೈಲ್ ಖರೀದಿಸಿದ ಗ್ರಾಹಕನಿಗೆ ದಂಡದ ರೂಪದಲ್ಲಿ ₹63,475 ನೀಡುವಂತೆ ಆಯೋಗ ಆದೇಶದಲ್ಲಿ ತಿಳಿಸಿದೆ. ಈ ಹಣಕ್ಕೆ 2023 ನವೆಂಬರ್ 10ರಿಂದ ಶೇ 8ರಷ್ಟು ಬಡ್ಡಿ ಸೇರಿಸಿ ಕೊಡಬೇಕು. ಪರಿಹಾರವಾಗಿ ₹8 ಸಾವಿರ, ದೂರಿನ ವೆಚ್ಚವಾಗಿ ₹8 ಸಾವಿರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ರಾಮೇನಹಳ್ಳಿಯ ಶಿವಾನಂದ ಎಂಬುವರು ಕುಣಿಗಲ್ನ ಎನ್.ಟಿ ಕಮ್ಯುನಿಕೇಷನ್ ಮಾರಾಟ ಮಳಿಗೆಯಲ್ಲಿ ₹74,900ಕ್ಕೆ ಆ್ಯಪಲ್ ಕಂಪನಿಯ ಐ–ಫೋನ್ ಖರೀದಿಸಿದ್ದರು. ಖರೀದಿಸಿದ ಮೂರು ತಿಂಗಳಲ್ಲೇ ಬ್ಯಾಟರಿ ಚಾರ್ಜಿಂಗ್ ಸಮಸ್ಯೆ ಎದುರಾಯಿತು. ಮೊಬೈಲ್ ದುರಸ್ತಿಗೆ ₹63 ಸಾವಿರ ಶುಲ್ಕ ವಿಧಿಸಲಾಗಿತ್ತು.

ಮೊಬೈಲ್ ಖರೀದಿಸಿದ ಮೂರು ತಿಂಗಳಲ್ಲೇ ಸಮಸ್ಯೆ ಆರಂಭವಾಗಿದೆ. ಇನ್ನೂ ವಾರಂಟಿ ಸಮಯ ಇದೆ. ದುರಸ್ತಿಗೆ ದುಬಾರಿ ಶುಲ್ಕ ವಿಧಿಸಲಾಗಿದೆ. ಹಾಗಾಗಿ ಹೊಸ ಮೊಬೈಲ್ ನೀಡಬೇಕು ಎಂದು ಶಿವಾನಂದ ಬೇಡಿಕೆ ಸಲ್ಲಿಸಿದರು. ಇದಕ್ಕೆ ಆ್ಯಪಲ್ ಕಂಪನಿ ಹಾಗೂ ಮಾರಾಟ ಮಾಡಿದವರು ಒಪ್ಪದಿದ್ದಾಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.

ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯರಾದ ನಿವೇದಿತ ರವೀಶ್ ಪರಿಹಾರಕ್ಕೆ ಆದೇಶಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.