ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 20ರಂದು ವಿಜಯಪುರಕ್ಕೆ ಬಂದಾಗ ಮೌಲ್ವಿ ತನ್ವೀರ್ ಹಾಶ್ಮಿ ಅವರ ಮನೆಗೆ ಭೇಟಿ ನೀಡಿದ ವಿಡಿಯೊವನ್ನು ಶಾಸಕ ಯತ್ನಾಳ ಬಿಡುಗಡೆ ಮಾಡಿದ್ದಾರೆ.

‘ಮೌಲ್ವಿ ಮನೆಗೆ ಹೋಗುವುದು ಬೇಡ’ ಎಂದು ಪೊಲೀಸರು ಸೂಕ್ಷ್ಮವಾಗಿ ಎಚ್ಚರಿಸಿದ್ದರೂ, ಮುಖ್ಯಮಂತ್ರಿ ಮೌಲ್ವಿ ಮನೆಗೆ ಭೇಟಿ ನೀಡಿರುವುದು ಏಕೆ? ಇದು ಓಲೈಕೆ ಅಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದ್ದಾರೆ.

‘ಈತ ದೇಶದಿಂದ ಪೇರಿಕೀಳುವ ಸಾಧ್ಯತೆಗಳಿದ್ದು, ಪೊಲೀಸರು ಹಾಗೂ ಗುಪ್ತಚರ ಇಲಾಖೆ ಮೌಲ್ವಿಯ ಮೇಲೆ ನಿಗಾ ವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮೌಲ್ವಿಯ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇನೆ’ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
.ಐಸಿಸ್ ಉಗ್ರರ ಸಂಪರ್ಕ-ಯತ್ನಾಳ ಆರೋಪಿಸಿದ್ದ ಮೌಲ್ವಿ, ಮೋದಿ ಜೊತೆಗೆ: ಪೋಟೊ ಬಿಡುಗಡೆ.ಐಸಿಸ್ ಬೆಂಬಲಿಗ ವ್ಯಕ್ತಿ ಜೊತೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ: ಯತ್ನಾಳ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.