ಗುವಾಹಟಿ: ಅಸ್ಸಾಂ ಕರೀಮ್ಗಂಜ್ ಜಿಲ್ಲೆಯಲ್ಲಿ ಸುಮಾರು ₹4.5 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು (ಭಾನುವಾರ) ತಿಳಿಸಿದ್ದಾರೆ.

ಕರೀಮ್ಗಂಜ್ ಎಸ್ಪಿ ಪಾರ್ಥ ಪ್ರತಿಮ್ ದಾಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಮಿಜೋರಾಂನಿಂದ ಬರುತ್ತಿದ್ದ ವಾಹನವನ್ನು ಚೆವಾಲಿ ಬೀಲ್ ಪ್ರದೇಶದಲ್ಲಿ ತಡೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರಿನಲ್ಲಿ 48 ಸೋಪ್ ಬಾಕ್ಸ್ನಲ್ಲಿದ್ದ 548.82 ಗ್ರಾಂ ಹೆರಾಯಿನ್ ವಶಪಡಿಸಲಾಗಿದೆ ಎಂದು ಪಾರ್ಥ ಪ್ರತಿಮ್ ದಾಸ್ ತಿಳಿಸಿದ್ದಾರೆ.

ಮಿಜೋರಾಂ ನೋಂದಣಿ ಸಂಖ್ಯೆ ಹೊಂದಿರುವ ವಾಹನ ಇದಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
.ದೆಹಲಿಯಲ್ಲಿ ಡ್ರಗ್ಸ್ ಮಾಫಿಯಾ: ₹5,620 ಕೋಟಿ ಬೆಲೆಯ 562 ಕೆ.ಜಿ ಕೊಕೇನ್ ವಶ.ರಾಜ್ಯದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ; ನೋವು ನಿವಾರಕ ಮಾತ್ರೆಗಳದೇ ಆತಂಕ: ಪರಮೇಶ್ವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.