ಪಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶ ನಡೆಸುವುದರೊಂದಿಗೆ 'ಭಾರತ ಜೋಡೊ ನ್ಯಾಯ ಯಾತ್ರೆ'ಯನ್ನು ಇಂದು ಮತ್ತೆ ಮುಂದುವರಿಸಲಿದ್ದಾರೆ.

ಪಕ್ಷದ ಹಿರಿಯ ನಾಯಕ ಮತ್ತು ಎಂಎಲ್ಸಿ ಪ್ರೇಮ್ ಚಂದ್ರ ಮಿಶ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.

'ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ವಿಮಾನದ ಮೂಲಕ ಗಯಾ ತಲುಪಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಔರಂಗಾಬಾದ್ಗೆ ತೆರಳಲಿದ್ದಾರೆ. ನಂತರ ಯಾತ್ರೆ ಮುಂದುವರಿಯಲಿದೆ' ಎಂದು ಮಿಶ್ರಾ ಹೇಳಿದ್ದಾರೆ.

ರಾಹುಲ್ ಅವರು ನ್ಯಾಯ ಯಾತ್ರೆಯ ಮೊದಲ ಹಂತದ ವೇಳೆ ಹದಿನೈದು ದಿನಗಳ ಹಿಂದೆ ಬಿಹಾರದ ಸೀಮಾಂಚಲ್ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಸಂಚರಿಸಿದ್ದರು.

ಮಿಶ್ರಾ ಅವರ ಮಾಹಿತಿ ಪ್ರಕಾರ, ಇಂದು ಸಮಾವೇಶ ಮುಗಿದ ಬಳಿಕ ರಾಹುಲ್ ಅವರು ಟಿಕಾರಿ ವಿಧಾನಸಭಾ ವ್ಯಾಪ್ತಿಯಲ್ಲಿ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಟಿಕಾರಿ ವಿಧಾನಸಭೆಯು ಗಯಾ ಜಿಲ್ಲೆಗೆ ಸೇರಿದೆಯಾದರೂ, ಲೋಕಸಭೆಯಲ್ಲಿ ಔರಂಗಾಜೇಬ್ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.

ಜಾರ್ಖಂಡ್ನಲ್ಲಿ ಯಾತ್ರೆ ರದ್ದು
ಭಾರತ್ ಜೋಡೊ ನ್ಯಾಯ ಯಾತ್ರೆಯ ಎರಡನೇ ಹಂತವು ಬುಧವಾರ ಜಾರ್ಖಂಡ್ನಲ್ಲಿ ನಡೆಯಬೇಕಿತ್ತು. ಆದರೆ, ರಾಹುಲ್ ಅವರು ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದರು. ಹೀಗಾಗಿ ಜಾರ್ಖಂಡ್ನಲ್ಲಿ ನಡೆಯಬೇಕಿದ್ದ ಯಾತ್ರೆಯನ್ನು ರದ್ದುಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.