ನವದೆಹಲಿ: ದೆಹಲಿಯ ಶಾಹ್ದರಾದಲ್ಲಿ ಇಬ್ಬರು ಶಸ್ತ್ರಾಸ್ತ್ರಧಾರಿಗಳು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಫರ್ಶ್ ಬಜಾರ್ ಪ್ರದೇಶದ ನಿವಾಸಿಗಳಾದ ಆಕಾಶ್ ಶರ್ಮ ಅಲಿಯಾಸ್ ಛೋಟು(40) ಮತ್ತು ಆತನ ಸೋದರಳಿಯ (16) ರಿಷಬ್ ಶರ್ಮ ಮೃತಪಟ್ಟವರು. ಘಟನೆಯಲ್ಲಿ ಆಕಾಶ್ ಪುತ್ರ ಕ್ರಿಶ್ ಶರ್ಮ(10) ಅವರಿಗೂ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಆಕಾಶ್ ಮತ್ತು ಅವರ ಕುಟುಂಬದವರು ತಮ್ಮ ನಿವಾಸದ ಆವರಣದಲ್ಲಿ ಗುರುವಾರ ರಾತ್ರಿ ದೀಪಾವಳಿ ಹಬ್ಬ ಆಚರಿಸುತ್ತಿದ್ದ ವೇಳೆ ದಾಳಿ ನಡೆದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿಗೂ ಮುನ್ನ ಆರೋಪಿಗಳು ಆಕಾಶ್ ಅವರ ಕಾಲುಗಳಿಗೆ ನಮಸ್ಕರಿಸಿದ್ದಾರೆ ಎಂದು ಪ್ರತ್ಯದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ವೈಯಕ್ತಿಕ ದ್ವೇಷದ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.