ನವದೆಹಲಿ: ‘ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದ ಸಂಸದ ರಮೇಶ್ ಬಿಧೂಢಿ ಪರವಾಗಿ ಇಡೀ ಬಿಜೆಪಿಯೇ ನಿಂತಿದೆ. ಇಂಥ ಪದ ಬಳಕೆ ನಿಶ್ಚಿತ ಕಾರ್ಯತಂತ್ರದ ಭಾಗವೇ ಆಗಿದೆ’ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದರು.

‘ಬಿಧೂಢಿ ಅವರು ಆಕ್ಷೇಪಾರ್ಹವಾದ ಪದವನ್ನು ಬಳಸುವಾಗ ಅವರ ಹಿಂದೆಯೇ ಕುಳಿತಿದ್ದ ಬಿಜೆಪಿಯ ಇಬ್ಬರು ಸಂಸದರು ನಗುತ್ತಿದ್ದರು. ಈಗ ಬಿಧೂಢಿ ರಕ್ಷಣೆಗೆ ಆ ಪಕ್ಷದ ಇತರೆ ಸಂಸದರು ಮುಂದಾಗಿರುವುದನ್ನು ನೋಡಿದರೆ ಇಡೀ ಬಿಜೆಪಿಯೇ ಬಿಧೂಢಿ ಪರವಾಗಿದೆ. ಇದು, ನಿಶ್ಚಿತ ಕಾರ್ಯತಂತ್ರದ ಭಾಗವೇ ಆಗಿದೆ ಎಂಬುದು ಸ್ಪಷ್ಟವಾಗಲಿದೆ’ ಎಂದು ಭಾರದ್ವಾಜ್ ಅವರು ಹೇಳಿದರು.

ಡ್ಯಾನಿಶ್ ಅಲಿ ಅವರ ಹೇಳಿಕೆ ಕುರಿತು ತನಿಖೆಗೆ ಸಮಿತಿ ರಚಿಸಲು ಒತ್ತಾಯಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಬಿಜೆಪಿ ಸಂಸದರಾದ ರವಿ ಕಿಶನ್ ಶುಕ್ಲಾ ಮತ್ತು ಹರ್ನಾಥ್ ಸಿಂಗ್ ಯಾದವ್ ಅವರೂ ಭಾನುವಾರ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದು, ಡ್ಯಾನಿಶ್ ಅಲಿ ಅವರ ವರ್ತನೆಯನ್ನು ಪ್ರಶ್ನಿಸಿದ್ದಾರೆ.

ಸದನದಲ್ಲಿಯೇ ಸದಸ್ಯರೊಬ್ಬರ ವಿರುದ್ಧ ‘ನಿಕೃಷ್ಟ ಮತ್ತು ಕೋಮುವಾದಿ’ ಪದವನ್ನು ಬಳಸಿದ್ದಕ್ಕಾಗಿ ಬಿಧೂಢಿ ಅವರನ್ನು ಅಮಾನತು ಪಡಿಸುವುದು ಸೇರಿದಂತೆ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಬೇಕು ಎಂದು ವಿರೋಧಪಕ್ಷಗಳು ಪಟ್ಟುಹಿಡಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.