ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌: ಮೈತ್ರಿ ತೆಕ್ಕೆಗೆ ಜಮ್ಮು–ಕಾಶ್ಮೀರ

Published : 8 ಅಕ್ಟೋಬರ್ 2024, 23:30 IST
Last Updated : 8 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಹರಿಯಾಣದಲ್ಲಿ ಬಿಜೆಪಿಯ ಗೆಲುವು ಪ್ರಜಾತಂತ್ರದ ಗೆಲುವು. ಜನರ ಈ ತೀರ್ಪನ್ನು ಕಾಂಗ್ರೆಸ್ ತಿರಸ್ಕರಿಸುವುದಾದರೆ, ಅದು ಪ್ರಜಾತಂತ್ರ ಮತ್ತು ಸಂವಿಧಾನವನ್ನು ತಿರಸ್ಕರಿಸಿದಂತೆ. ಅರಾಜಕತೆಯನ್ನು ಹರಡುವ ಮೂಲಕ ಕಾಂಗ್ರೆಸ್ ದೇಶವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಹೀಗಾಗಿ ಅದು ಸಮಾಜದ ಬೇರೆ ಬೇರೆ ವರ್ಗಗಳನ್ನು ಎತ್ತಿಕಟ್ಟುತ್ತಿದೆ. ರೈತರನ್ನು ಎತ್ತಿಕಟ್ಟಲು ಕಾಂಗ್ರೆಸ್ ಹೇಗೆ ಯತ್ನಿಸಿತು ಎಂಬುದನ್ನು ದೇಶ ಕಂಡಿದೆ. ಹರಿಯಾಣದ ರೈತರು ಕಾಂಗ್ರೆಸ್ಸಿಗೆ ತಕ್ಕ ಉತ್ತರ ನೀಡಿದ್ದಾರೆ. ಹರಿಯಾಣದ ಯಶಸ್ಸಿಗೆ ನಾಯಬ್ ಸಿಂಗ್ ಸೈನಿ ಮತ್ತು ಜೆ.ಪಿ. ನಡ್ಡಾ ಅವರು ಕಾರಣ. ಬಿಜೆಪಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಕಾರಣದಿಂದಾಗಿ ಜನರು ಪಕ್ಷವನ್ನು ಅಧಿಕಾರಕ್ಕೆ ಮರಳಿ ತಂದಿದ್ದಾರೆ. ಆದರೆ, ಕಾಂಗ್ರೆಸ್ಸನ್ನು ಒಮ್ಮೆ ಅಧಿಕಾರದಿಂದ ಕಿತ್ತೊಗೆದ ನಂತರ ಜನರು, ಆ ಪಕ್ಷಕ್ಕೆ ಮತ್ತೆ ಅಧಿಕಾರ ಹಿಡಿಯಲು ಬಿಡುತ್ತಿಲ್ಲ.
-ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT