ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೆ ಒಳಗಾಗಿರುವ ಅರವಿಂದ ಕೇಜ್ರಿವಾಲ್ ಅವರು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದು, ದೇಶದಲ್ಲಿ ಕ್ರಾಂತಿ ಸೃಷ್ಟಿಸಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಶನಿವಾರ ಹೇಳಿದ್ದಾರೆ.

55 ವರ್ಷದ ಅರವಿಂದ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದರು. ಶುಕ್ರವಾರ ವಿಶೇಷ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಮಾರ್ಚ್ 28ರವರೆಗೆ ಇ.ಡಿ ವಶಕ್ಕೆ ನೀಡಿದೆ.

'ದೇಶದಲ್ಲಿ ಸರ್ವಾಧಿಕಾರ ನಡೆಸಲು ಬಿಜೆಪಿ ಬಯಸುತ್ತಿದೆ. ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಅಟ್ಟುವುದು ಸ್ವಾತಂತ್ರ್ಯವಲ್ಲ. ಎಲ್ಲರೂ ಒಂದಾಗೋಣ, ಇಲ್ಲದಿದ್ದರೆ ದೇಶವೇ ನಾಶವಾಗಲಿದೆ. ಜೈಲಿನಿಂದ ಹೊರಬರಲಿರುವ ಕೇಜ್ರಿವಾಲ್ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಲಿದ್ದಾರೆ' ಎಂದು ಅವರು ಹೇಳಿದ್ದಾರೆ.

ಕಾನೂನಿನ ಅಡಿಯಲ್ಲಿ ದೆಹಲಿ ಸರ್ಕಾರವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

'ರಾಜಕೀಯ ದ್ವೇಷದಿಂದ ಜೈಲು ಸೇರಿದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಯಾವ ಕಾನೂನು ಹೇಳುತ್ತಿಲ್ಲ. ಅವರು ಇ.ಡಿ ವಶದಲ್ಲಿದ್ದಾರೆ. ತಪ್ಪಿತ್ತಸ್ಥ ಎಂದು ಸಾಬೀತುಗೊಂಡಿಲ್ಲ. ಪ್ರತಿಯೊಬ್ಬ ಕಾರ್ಯಕರ್ತನೂ ಕೇಜ್ರಿವಾಲ್ ಆಗಿರುತ್ತಾನೆ' ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಈ ಕುರಿತು ಅಂತರರಾಷ್ಟ್ರೀಯ ಮಾಧ್ಯಮಗಳು ಸಹ ವರದಿ ಮಾಡಿವೆ ಎಂದು ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.

ಇವರು (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ) ಉಕ್ರೇನ್ ಹಾಗೂ ರಷ್ಯಾ ನಡುವಣ ಯುದ್ಧ ನಿಲ್ಲಿಸಬೇಕು ಎಂದು ಮಾತನಾಡುತ್ತಾರೆ. ಆದರೆ ವಿಪಕ್ಷಗಳ ನಾಯಕರನ್ನೇ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಮಾನ್ ಆರೋಪಿಸಿದ್ದಾರೆ.
.ಕೇಜ್ರಿವಾಲ್ ಬಂಧನ ಖಂಡಿಸಿ ಮಾ.26ಕ್ಕೆ ಪ್ರಧಾನಿ ನಿವಾಸಕ್ಕೆ ಘೇರಾವ್: ಎಎಪಿ.ದೆಹಲಿ ಜನರಿಗೆ ದ್ರೋಹ ಬಗೆದ ಕೇಂದ್ರ: ಕೇಜ್ರಿವಾಲ್ ಪತ್ನಿ ಆಕ್ರೋಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.