ಅಮ್ರೇಲಿ, (ಗುಜರಾತ್): ಸರಕು ಸಾಗಣೆ ರೈಲೊಂದು ಡಿಕ್ಕಿ ಹೊಡೆದಿದ್ದರಿಂದ ಸಿಂಹಿಣಿಯೊಂದು ಗಾಯಗೊಂಡಿರುವ ಘಟನೆ ಗುಜರಾತ್ನ ಅಮ್ರೇಲಿಯಲ್ಲಿ ನಡೆದಿದೆ.

ಬುಧವಾರ ಬೆಳಿಗ್ಗೆ 5 ಗಂಟೆ ಸುಮಾರು ವಿಜಪಾಡಿ ರೈಲು ನಿಲ್ದಾಣದ ಭಾಮರ್ ಪ್ರದೇಶದ ಬಳಿ ಸುರೇಂದ್ರನಗರದಿಂದ ಮಹುವಾ ಕಡೆಗೆ ಹೊರಟಿದ್ದ ಸರಕು ಸಾಗಣೆ ರೈಲು ಹಳಿಯಲ್ಲಿ ಸಾಗುತ್ತಿದ್ದ ಸಿಂಹಿಣಿಗೆ ಡಿಕ್ಕಿ ಹೊಡೆದಿತ್ತು. ಸಣ್ಣ ಪುಟ್ಟ ಗಾಯಗಳೊಂದಿಗೆ ಸಿಂಹಿಣಿ ಬದುಕುಳಿದಿದೆ ಎಂದು ಗುಜರಾತ್ ಅರಣ್ಯ ಇಲಾಖೆ ತಿಳಿಸಿದೆ.

ಗಾಯಗೊಂಡಿರುವ ಸಿಂಹ 8 ವರ್ಷದ್ದು, ಅದನ್ನು ಗಿರ್ ರಾಷ್ಟ್ರೀಯ ಉದ್ಯಾನದ ಪಶುಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗಿರ್ ಧಾಮದಲ್ಲಿ 674 ಸಿಂಹಗಳಿದ್ದು ಈ ಸಂಖ್ಯೆ 2015ರಲ್ಲಿ 523 ಆಗಿತ್ತು. ಕಳೆದ ಐದು ವರ್ಷಗಳಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಶೇ 29ರಷ್ಟು ಹೆಚ್ಚಳವಾಗಿದೆ.

2020 ರಿಂದ 2022 ರಲ್ಲಿ ಗಿರ್ ಧಾಮದಲ್ಲಿ 240 ಸಿಂಹಗಳು ಮೃತಪಟ್ಟಿವೆ. ಅದರಲ್ಲಿ 26 ಸಿಂಹಗಳು ಅಸಹಜವಾಗಿ ಮರಣ ಹೊಂದಿವೆ ಎಂದು ಅರಣ್ಯ ಸಚಿವ ಮುಳುಬಾಯಿ ಬೇರಾ ಅವರು ವಿಧಾನಸಭೆಯಲ್ಲಿ ಈಚೆಗೆ ಉತ್ತರಿಸಿದ್ದರು.

ಗಿರ್ ಧಾಮದಲ್ಲಿ ಸಿಂಹಗಳ ಅಸಹಜ ಸಾವು ತಡೆಗಟ್ಟಲು ಗುಜರಾತ್ ಅರಣ್ಯ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. 24X7 ಪಶು ಅಂಬುಲೆನ್ಸ್, ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳು, ಸೈನ್ ಬೋರ್ಡ್ಗಳು, ರೈಲು ಹಳಿ ಅಕ್ಕ ಪಕ್ಕ ಬೇಲಿ ಹಾಗೂ ರೇಡಿಯೊ ಕಾಲರ್ ಅಳವಡಿಸುವುನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದರು.

ಪ್ರಪಂಚದಲ್ಲೇ ಏಷಿಯಾಟಿಕ್ ಸಿಂಹಗಳ ನೈಸರ್ಗಿಕ ಏಕೈಕ ಆವಾಸಸ್ಥಾನ ಗಿರ್ ಧಾಮವಾಗಿದೆ.
.ಪಬ್ಜಿ ಗೆಳೆಯನಿಗಾಗಿ ಭಾರತಕ್ಕೆ ಬಂದಿದ್ದ ಪಾಕ್ ಪ್ರಜೆ ಸೀಮಾ ಹೈದರ್ ಇದೀಗ ಗರ್ಭಿಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.