ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ, ಈಜಿಪ್ಟ್ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿಳಿದ ಪ್ರಧಾನಿ ಮೋದಿ

'ವಿದೇಶ ಪ್ರವಾಸ ಅಭೂತಪೂರ್ವ ಯಶಸ್ವಿ' ಎಂದು ಬಣ್ಣನೆ
Published : 26 ಜೂನ್ 2023, 2:36 IST
Last Updated : 26 ಜೂನ್ 2023, 2:36 IST
ಫಾಲೋ ಮಾಡಿ
Comments

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಹಾಗೂ ಈಜಿಪ್ಟ್‌ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಭಾನುವಾರ ತಡರಾತ್ರಿ ದೆಹಲಿಗೆ ಬಂದಿಳಿದರು.

ಈ ವೇಳೆ ಅವರನ್ನು ಉನ್ನತಾಧಿಕಾರಿಗಳು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.‍ಪಿ ನಡ್ಡಾ ಸ್ವಾಗತಿಸಿದರು.

ಜೂನ್ 20ರಿಂದ ಅಮೆರಿಕದಲ್ಲಿ ನಾಲ್ಕು ದಿನ ಪ್ರವಾಸ ಕೈಗೊಂಡಿದ್ದ ಪ್ರಧಾನಿ, ಶನಿವಾರ– ಭಾನುವಾರ ಈಜಿಪ್ಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಉಭಯ ದೇಶಗಳ ನಡುವಿನ ಅಭಿವೃದ್ಧಿ, ವಿವಿಧ ವಿಷಯಗಳ ಕುರಿತಂತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿದರು.

ಭಾನುವಾರ ಸಂಜೆ ಮೋದಿ ಅವರು ರಾಜಧಾನಿ ಕೈರೊದಲ್ಲಿರುವ ಹೀಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕ ಹಾಗೂ ನವೀಕರಣಗೊಳಿಸಲಾಗಿರುವ 11ನೇ ಶತಮಾನದ ಅಲ್‌–ಹಕೀಮ್ ಮಸೀದಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು.

ಈಜಿಪ್ಟ್ ಪ್ರವಾಸದ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ‘ನನ್ನ ಈಜಿಪ್ಟ್ ಪ್ರವಾಸವು ಐತಿಹಾಸಿಕವಾದದ್ದು. ಇದು ಉಭಯ ದೇಶಗಳಿಗೆ ಹೊಸ ಚೈತನ್ಯ ಮತ್ತು ನಾಗರಿಕರಿಗೆ ಅನೇಕ ಪ್ರಯೋಜನಗಳನ್ನು ನೀಡಲಿದೆ. ಈಜಿಪ್ಟ್ ಜನರ ಪ್ರೀತಿಗೆ ನಾನು ಆಭಾರಿ’ ಎಂದು ಹೇಳಿದ್ದಾರೆ.

ಅಮೆರಿಕ ಪ್ರವಾಸದ ಬಗ್ಗೆ ಪ್ರಸ್ತಾಪಿಸಿರುವ ಮೋದಿ ಅವರು, ‘ನಮ್ಮ ಹಾಗೂ ಅಮೆರಿಕ ಬಾಂಧವ್ಯ ಜಗತ್ತನ್ನು ಉತ್ತಮಗೊಳಿಸುವುದೇ ಆಗಿದೆ. ಸುಸ್ಥಿರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಅಮೆರಿಕಕ್ಕೆ ನಮ್ಮ ಭೇಟಿ ಈ ನಿಟ್ಟಿನಲ್ಲಿ ಹೊಸ ಅಧ್ಯಾಯ’ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT