ನವದೆಹಲಿ: ಜೈಲಿನಲ್ಲಿರುವ ಸಿಖ್ ಧರ್ಮ ಪ್ರಚಾರಕ ಅಮೃತ್ಪಾಲ್ ಸಿಂಗ್ ಮತ್ತು ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಅವರು ಶುಕ್ರವಾರ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಇವರಿಬ್ಬರಿಗೂ ಪ್ರಮಾಣ ವಚನ ಸ್ವೀಕರಿಲು ಸಂಬಂಧಿಸಿದ ನ್ಯಾಯಾಲಯಗಳು ಪೆರೋಲ್ ನೀಡಿದ್ದವು. ಅವರಿಬ್ಬರನ್ನೂ ಭದ್ರತಾ ಸಿಬ್ಬಂದಿ ಸಂಸತ್ತಿನ ಆವರಣಕ್ಕೆ ಕರೆತಂದರು. ಸಂಸತ್ತಿನ ಆವರಣದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಶಿಷ್ಟಾಚಾರಗಳನ್ನು ಪೂರೈಸಿದ ಬಳಿಕ ಲೋಕಸಭಾ ಸ್ವೀಕರ್ ಅವರ ಕೋಣೆಯಲ್ಲಿ ಅವರಿಬ್ಬರು ಪ್ರಮಾಣ ವಚನ ಸ್ವೀಕರಿಸಿದರು.
.ಜುಲೈ 5ಕ್ಕೆ ಎಂಜಿನಿಯರ್ ರಶೀದ್ ಪ್ರಮಾಣವಚನ?.
ಎಂಜಿನಿಯರ್ ರಶೀದ್ ಎಂದೇ ಪ್ರಸಿದ್ಧರಾಗಿರುವ ಕಾಶ್ಮೀರಿ ನಾಯಕ ರಶೀದ್ ವಿರುದ್ಧ ಭಯೋತ್ಪಾದನೆಗೆ ಹಣ ಒದಗಿಸಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಎನ್ಐಎ ಪ್ರಕರಣ ದಾಖಲಿಸಿದೆ. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ.

ಖಾಲಿಸ್ತಾನ ಪರ ಒಲವುಳ್ಳ ಅಮೃತ್ಪಾಲ್ ಸಿಂಗ್ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿದ್ದರು. ಅವರನ್ನು 2023ರ ಏಪ್ರಿಲ್ನಲ್ಲಿ ಬಂಧಿಸಲಾಗಿತ್ತು.
.ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ರಶೀದ್ಗೆ 2 ಗಂಟೆಗಳ ಕಸ್ಟಡಿ ಪೆರೋಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.